What should be done to always be happy in life?

ಲೈಫ್ನಲ್ಲಿ ಯಾವಾಗ್ಲೂ ಖುಷಿ ಖುಷಿಯಾಗಿರಲೂ ಏನು ಮಾಡಬೇಕು | What should be done to always be happy in life? | Best Motivation speech.

This post about What should be done to always be happy in life? Motivational speech in kannada. If you do this much, you can always be happy in life. how to increase happiness hormone in naturally?

To get more videos of motivation in Kannada subscribe to our YouTube channel. This channel is very useful for Kannada motivational speech.

Watch this video for the explanation of What should be done to always be happy in life.

how to increase happiness hormone in naturally

ನಾವು ಯಾವುದೇ ಒತ್ತಡವಿಲ್ಲದೆ ಸಂತೋಷದಿಂದಿರಬೇಕಾದರೆ ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನ್‌ ಹೆಚ್ಚಿರಬೇಕು. ಇದನ್ನು ನೈಸರ್ಗಿಕವಾಗಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್. ಇವಿಷ್ಟು ಮಾಡಿದ್ರೆ ಸಾಕಂತೆ ಲೈಫ್‌ನಲ್ಲಿ ಯಾವಾಗ್ಲೂ ಖುಷಿ ಖುಷಿಯಾಗಿರಬಹುದು.

ನಮ್ಮ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆಗಳಿರಬಹುದು ಅದು ದೈಹಿಕವಾಗಿ ಅಥವಾ ಮಾನಸಿಕವಾಗಿಯಾದರೂ ಅವೆಲ್ಲದರಲ್ಲೂ ಹಾರ್ಮೋನ್‌ಗಳ ಪಾತ್ರ ಮಹತ್ತರದಾಗಿರುತ್ತದೆ. ಹಾಗೆಯೇ ನಮ್ಮ ಮನಸ್ಥಿತಿಯನ್ನು ಉತ್ತಮವಾಗಿಡಲು ಅಥವಾ ಕೆಟ್ಟದಾಗಿಸುವಲ್ಲಿಯೂ ಹಾರ್ಮೋನ್‌ನ ಪಾತ್ರವಿದೆ. ಅಂತಹ ಹಾರ್ಮೋನ್‌ನ್ನು ಸಿರೊಟೋನಿನ್ ಎಂದು ಕರೆಯಲಾಗುತ್ತದೆ. ಇದನ್ನು ಹ್ಯಾಪಿ ಹಾರ್ಮೋನ್ ಎಂದೂ ಕರೆಯುತ್ತಾರೆ.

ನಮ್ಮ ದೇಹದಲ್ಲಿ ಸಿರೋಟಿನ್‌ ಮಟ್ಟ ಸರಿಯಾಗಿದ್ದಾಗ ನಾವು ಖುಷಿಯಿಂದ ಇರುತ್ತೇವೆ. ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ, ಕಿರಿಕಿರಿಗೊಳ್ಳುವುದಿಲ್ಲ.

ದೇಹದಲ್ಲಿ ಸಿರೋಟಿನ್ ಮಟ್ಟ ಸರಿಯಾಗಿಲ್ಲದಿದ್ದರೆ ಖಿನ್ನತೆಗೆ ಒಳಗಾಗುತ್ತೇವೆ. ಅತಿರೇಕಕ್ಕೇರಿದರೆ ಮಾನಸಿಕ ಅಸ್ವಸ್ಥರಾಗಬಹುದು. ಅದಕ್ಕಾಗಿ ನಾವಿಂದು ನಮ್ಮ ದೇಹದ ಹ್ಯಾಪಿ ಹಾರ್ಮೋನ್‌ನ್ನು ಹೆಚ್ಚಿಸಲು ಕೆಲವೊಂದು ಟಿಪ್ಸ್ ತಿಳಿಸಿದ್ದೇವೆ.

ಬಿಸಿಲಿಗೆ ಮೈಯೊಡ್ಡಿ​

ಸಂತೋಷದ ಹಾರ್ಮೋನ್ ಅನ್ನು ಹೆಚ್ಚಿಸಲು ನೀವು ಬಿಸಿಲಿಗೆ ಮೈಯೊಡ್ಡಬೇಕು. ಇದರಿಂದ ದೇಹದಲ್ಲಿ ಸಿರೊಟೋನಿನ್ ಮಟ್ಟವೂ ಹೆಚ್ಚುತ್ತದೆ, ಮೆದುಳು ಸರಿಯಾಗಿ ಕೆಲಸ ಮಾಡುತ್ತದೆ. ಇದಕ್ಕಾಗಿ, ನೀವು ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳಬಹುದು. ಇದನ್ನು ನಿಯಮಿತವಾಗಿ ಪಾಲಿಸಿದರೆ ಒತ್ತಡದಿಂದ ಬೇಗನೆ ಮುಕ್ತಿ ಪಡೆಯಬಹುದು.

What should be done to always be happy in life

ಸರಿಯಾಗಿ ನಿದ್ರೆ ಮಾಡುವುದು​

ದೇಹದಲ್ಲಿ ಸಂತೋಷದ ಹಾರ್ಮೋನ್ ಹೆಚ್ಚಿಸಲು, ನೀವು ಪ್ರತಿದಿನ 7 ರಿಂದ 8 ಗಂಟೆಗಳ ನಿದ್ದೆ ಮಾಡಬೇಕು. ಈ ಕಾರಣದಿಂದಾಗಿ, ದೇಹದಲ್ಲಿ ಸಿರೊಟೋನಿನ್ ಹಾರ್ಮೋನ್ ಮಟ್ಟವು ಸಮತೋಲಿತವಾಗಿರುತ್ತದೆ. ನೀವು ಸರಿಯಾಗಿ ಮಲಗಿದಾಗ, ನೀವು ತಾಜಾತನವನ್ನು ಅನುಭವಿಸುತ್ತೀರಿ. ಆಗ ನಿಮ್ಮ ಮೆದುಳು ಕೂಡ ಸರಿಯಾಗಿ ಕೆಲಸ ಮಾಡುತ್ತದೆ.

ವ್ಯಾಯಾಮ​

ಸಿರೊಟೋನಿನ್ ಹಾರ್ಮೋನ್ ಹೆಚ್ಚಿಸಲು ನೀವು ಪ್ರತಿದಿನ ವ್ಯಾಯಾಮ ಮಾಡಬೇಕು. ನೀವು ವ್ಯಾಯಾಮ ಮಾಡುವಾಗ ಅದು ಟ್ರಿಪ್ಟೊಫಾನ್ ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮೆದುಳಿಗೆ ಶಕ್ತಿ ಸಿಗುತ್ತದೆ. ಆಮ್ಲಜನಕ ಮೆದುಳನ್ನು ತಲುಪುತ್ತದೆ. ಇದಕ್ಕಾಗಿ ನೀವು ಏರೋಬಿಕ್ಸ್, ಜುಂಬಾ, ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಮಾಡಬಹುದು.

​ಸಮತೋಲಿತ ಆಹಾರ ಸೇವಿಸಿ​

ಸಿರೊಟೋನಿನ್ ಅನ್ನು ಸಮತೋಲನಗೊಳಿಸಲು ಟ್ರಿಪ್ಟೊಫಾನ್ ಹೊಂದಿರುವ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ನೀವು ಬ್ರೌನ್ ರೈಸ್, ಹಾಲು, ಚೀಸ್, ಬಿಳಿ ಬ್ರೆಡ್, ಅನಾನಸ್ ಮೀನುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇದು ಸಂತೋಷದ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ.

ಮಸಾಜ್ ಥೆರಪಿ​

ಮಸಾಜ್ ಥೆರಪಿ ತೆಗೆದುಕೊಳ್ಳುವ ಮೂಲಕ ನೀವು ಸಂತೋಷದ ಹಾರ್ಮೋನ್ ಅನ್ನು ಹೆಚ್ಚಿಸಬಹುದು. ನೀವು ಮಸಾಜ್ ಥೆರಪಿಯನ್ನು ತೆಗೆದುಕೊಂಡರೆ, ಅದು ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ. ಮೂಡ್ ಫ್ರೆಶ್ ಆಗಿದ್ದು ಕಾರ್ಟಿಸೋಲ್ ಎಂಬ ಹಾರ್ಮೋನ್ ಮಟ್ಟ ಕಡಿಮೆ ಇರುತ್ತದೆ.

ಈ ಹಾರ್ಮೋನ್ ಒತ್ತಡದಿಂದ ಉತ್ಪತ್ತಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ದೇಹವನ್ನು ವಿಶ್ರಾಂತಿ ಮಾಡಿದಾಗ, ಸಂತೋಷದ ಹಾರ್ಮೋನುಗಳು ಸಿರೊಟೋನಿನ್ ಮತ್ತು ಡೋಪಮೈನ್ ಹೆಚ್ಚಾಗುತ್ತದೆ.

Scroll to Top