How to spend summer holiday?

How to spend summer holiday? Utilize summer holidays correctly. Summer holiday tricks and tips to make best use.

I this post we are going to discuss useful tips for summer holidays. Learn how to use holiday. Summer holidays are best wat to use for personality development.

How to spend summer holiday?

To get more videos, visit our YouTube channel. This channel is very useful for personality development in Kannada.

Watch this video for the explanations of How to spend summer holiday?

Summer holidays are best wat to use for personality development

How to spend summer holiday?

ರಜೆಯಲ್ಲಿ ಮಕ್ಕಳನ್ನು ಮನೆಯಲ್ಲಿ ಕೂರಿಸುವುದು ಅಥವಾ ನಾಲ್ಕು ಗೋಡೆಗಳ ಮಧ್ಯೆ ಬಂಧಿಸುವುದು ಎಷ್ಟು ಸರಿ? ಕೆಲವು ಪೋಷಕರಿಗೆ ವೃತ್ತಿ ಬದುಕಿನ ಜಂಜಾಟದಿಂದಾಗಿ ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ವಹಿಸಲು ಆಗದೇ ಇರಬಹುದು. ಆದರೆ ಮಕ್ಕಳಿಗೆ ಪ್ರತಿನಿತ್ಯ ಕಾಳಜಿ ವಹಿಸುವ ಬಗೆಗಿಂತ ಈ ರಜೆಯಲ್ಲಿ ಅವರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯಯುತವಾಗಿಡುವುದೇ ಬಹುದೊಡ್ಡ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ಪೋಷಕರು ಅವರನ್ನು ಯಾವ ರೀತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.

ಇಂದು ಬೇಸಿಗೆ ರಜೆ ಎಂದರೆ ಸಮ್ಮರ್‌ ಕ್ಯಾಂಪ್‌ ಎಂಬ ಕಾಲ. ಆದರೆ ಹಿಂದೆಲ್ಲಾ ಬೇಸಿಗೆ ರಜೆಯ ಅರ್ಥವೇ ಬೇರೆ ಇತ್ತು. ಹಾಗಾದರೆ ಸಮ್ಮರ್‌ ಕ್ಯಾಂಪ್‌ ಇಲ್ಲದೆ ಬೇಸಿಗೆ ರಜೆ ಕಳೆಯಲು ಸಾಧ್ಯವಿಲ್ಲವೇ? ಖಂಡಿತ ಇದೆ. ಬೇಸಿಗೆ ಶಿಬಿರವಿಲ್ಲದೆ, ಬೇಸಿಗೆ ರಜೆಯ ಮಜಾ ಅನುಭವಿಸಲು ಇಲ್ಲಿದೆ ಕೆಲವು ಸಲಹೆ.

1 ಬೇಸಿಗೆ ಶಿಬಿರಗಳಿಗೆ ಸೇರಿಸಿ:

ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಸೇರಿಸಿ ಇದರಿಂದ ಮಕ್ಕಳು ಹಲವು ಅಪರಿಚಿತ ಮಕ್ಕಳೊಂದಿಗೆ ಬೆರೆಯುವ ಮತ್ತು ಓದುವುದರ ಜೊತೆಗ ಇನ್ನಿತರೆ ಚಟುವಟಿಕೆಗಳಲ್ಲಿ ಕಲಿಕೆಯನ್ನು ಪ್ರಾರಂಭಿಸಲು ಸಹಾಯವಾಗುತ್ತದೆ. ಇನ್ನೂ ಮನೆ ಮತ್ತು ಶಾಲೆ ಇದಿಷ್ಟರಲ್ಲೆ ಕಾಲ ಕಳೆಯುವ ಮಕ್ಕಳಿಗೆ ಈ ರೀತಿಯ ಚಟುವಟಿಕೆಗಳು ನಿಜಕ್ಕೂ ತುಂಬಾನೆ ಚೈತನ್ಯ ನೀಡುತ್ತದಲ್ಲದೇ ಮಕ್ಕಳ ರಜೆಯ ಸಮಯವನ್ನು ಉಪಯುಕ್ತವಾಗಿ ಬಳಕೆ ಮಾಡಿದಂತಾಗುತ್ತದೆ.

2 ಸ್ವಿಮ್ಮಿಂಗ್ ಕ್ಲಾಸ್‌ಗಳಿಗೆ ಸೇರಿಸಿ:

ಶಾಲಾ ದಿನಗಳಲ್ಲಿ ಆಚೆ ಕಳುಹಿಸಿದರೆ ಓದಲು ಸಮಯ ಕಡಿಮೆಯಾದೀತು ಎನ್ನುವ ಭಯದಿಂದ ಪೋಷಕರು ಮಕ್ಕಳನ್ನು ಯಾವುದೇ ಚಟುವಟಿಕೆಗಳಿಗೆ ಪ್ರೇರೇಪಿಸುವುದಿಲ್ಲ ಹಾಗಾಗಿ ಈ ಬೇಸಿಗೆಯಲ್ಲಿ ಮಕ್ಕಳನ್ನು ಸ್ವಿಮ್ಮಿಂಗ್ ತರಬೇತಿಗಳಿಗೆ ಸೇರಿಸಿ ಇದರಿಂದ ಮಕ್ಕಳಿಗೂ ಖುಷಿಯಾಗುತ್ತೆ ಜೊತೆಗೆ ಮಕ್ಕಳು ಈಜನ್ನು ಕಲಿಯುತ್ತಾರೆ ಹಾಗೇ ದೈಹಿಕವಾಗಿಯೂ ಆರೋಗ್ಯವಾಗಿರಲು ಹೆಚ್ಚು ಪ್ರಯೋಜನಕಾರಿಯಾಗುತ್ತದೆ.

3 ಹವ್ಯಾಸಗಳಿಗೆ ಪ್ರಾಮುಖ್ಯತೆ ನೀಡಿ:

ಮಕ್ಕಳಿಗೆ ಏನಿಷ್ಟ ಎನ್ನುವುದನ್ನು ತಿಳಿದುಕೊಳ್ಳಿ ಚಿತ್ರಕಲೆ, ಹಾಡುಗಾರಿಕೆ ಅಥವಾ ಭರತನಾಟ್ಯ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ. ಇದರಿಂದ ಮಕ್ಕಳಲ್ಲಿ ಕಲೆಯ ಅಭಿರುಚಿ ಹೆಚ್ಚಾಗುತ್ತದೆ ಜೊತೆಗೆ ಮಕ್ಕಳ ಮನಸ್ಸು ಇಂತಹ ಚಟುವಟಿಕೆಗಳಿಂದ ಚಿಗುರುತ್ತದೆ. ಈ ಹವ್ಯಾಸಗಳಿಂದಲೂ ಅವರ ಬದುಕಿನ ಉದ್ದೇಶ ಮತ್ತು ಗುರಿಗಳು ಇನ್ನಷ್ಟು ಧೃಡವಾಗುತ್ತವೆ.

4 ಕ್ರೀಡಾ ಚಟುವಟಿಕೆಗಳಿಗೆ ಸೇರಿಸಿ: ಮಕ್ಕಳನ್ನು ಮಾನಸಿಕವಾಗಿ ಕಲಿಕೆಗೆ ಒಡ್ಡುವುದರ ಜೊತೆಗೆ ಮಕ್ಕಳಿಗೆ ಕ್ರೀಡೆಗಳ ಮಹತ್ವವನ್ನು ತಿಳಿಸಿಕೊಡಿ ಆಗ ಕ್ರೀಡೆಯ ಮಹತ್ವದ ಜೊತೆಗೆ ಅವರ ಆಸಕ್ತಿಯ ಬಗೆಗೆ ಒಲವು ತೋರಲು ಸಹಾಯವಾಗುತ್ತದೆ. ಇದರಿಂದ ಶಾರೀರಿಕ ಆರೋಗ್ಯದ ಕಾಳಜಿಯ ಜೊತೆಗೆ ಇಂದಿನ ದಿನಗಳಲ್ಲಿ ನಾವು ನೋಡುತ್ತಿರುವ ಮಕ್ಕಳ ಬೊಜ್ಜಿನ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಹಾಯವಾಗುತ್ತದೆ.

Summer holiday tricks and tips to make best use

5 ಸಂಬಂಧಗಳ ಬಗೆಗೆ ಅರಿವು ಮೂಡಿಸಿ :

ಈಗಿನ ದಿನಗಳಲ್ಲಿ ಕೂಡ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಜೊತೆಗೆ ಮಕ್ಕಳಲ್ಲಿ ಸಂಬಂಧಗಳ ಮೌಲ್ಯದ ಅರಿವು ಕುಂಠಿತಗೊಳ್ಳುತ್ತಿದೆ. ಹಾಗಾಗಿ ಈ ರಜೆಯ ಸಂದರ್ಭದಲ್ಲಿಯಾದರೂ ಮಕ್ಕಳನ್ನು ಕುಟುಂಬದ ಜೊತೆ ಬೆರೆಯಲು ಅವಕಾಶ ನೀಡಿ ಇದರಿಂದ ಮಕ್ಕಳ ಮನಸ್ಸು ಸಂತಸದಿಂದ ಇರುವುದಲ್ಲದೇ ಜೀವನದಲ್ಲಿ ಸಂಪರ್ಕ ಎಷ್ಟು ಮುಖ್ಯ ಎನ್ನುವುದೂ ಅರ್ಥವಾಗುತ್ತದೆ.

6. ಕಥೆ ಹೇಳುವ ಅಭ್ಯಾಸ ಮಾಡಿ: ಎಷ್ಟೋ ಮಕ್ಕಳು ರಜೆಯಲ್ಲಿ ಟಿವಿ, ಮೊಬೈಲ್ ಮುಂದೆ ಕುಳಿತೇ ರಜೆಯನ್ನ ಕಳೆಯುವುದುಂಟು ಆದರೆ ಇದರಿಂದ ಆರೋಗ್ಯ ಇನ್ನಷ್ಟು ಹಾಳಾಗುತ್ತದೆಯೇ ಹೊರತು ಮತ್ತೇನು ಸಿಗುವುದಿಲ್ಲ. ಮಕ್ಕಳಿಗೆ ಕಾರ್ಟೂನ್ ಗೊತ್ತಿರುತ್ತದೆ ಆದರೆ ಅಜ್ಜಿ ಹೇಳುವ ಕತೆಗಳ ಪರಿಚಯವೇ ಇರುವುದಿಲ್ಲ ಹಾಗಾಗಿ ಮನೆಯಲ್ಲಿ ಸಂಜೆ ಒಳ್ಳೆ ನೀತಿ ಕತೆಗಳನ್ನು ಹೇಳುವ ಮೂಲಕ ಅವರಿಗೆ ಬದುಕಿನ ನೀತಿಗಳನ್ನು ತಿಳಿಸಿಕೊಡಿ.

7. ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ:

ಪ್ರತಿನಿತ್ಯ ಶಾಲೆ , ಪಾಠ ಮತ್ತು ಹೋಂ ವರ್ಕ್ ಮಾಡಿದ ಮಕ್ಕಳಿಗೆ ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ ಇದ್ರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚುತ್ತದೆ ಮತ್ತು ಸಾಮಾನ್ಯ ಜ್ಞಾನ ಬೆಳೆಯುತ್ತದೆ. ನಾಳಿನ ಬದುಕಿನ ಚಿತ್ರಣವನ್ನು ಅರಿಯಲು ಸಹಾಯಕವಾಗುತ್ತದೆ.

8. ಪರಿಸರದ ಕಾಳಜಿಯನ್ನು ಮಾಡುವ ಬಗೆಗೆ ಅರಿವು ಮೂಡಿಸಿ:

ಬೆಳೆಯುವ ಮಕ್ಕಳಲ್ಲಿ ಪರಿಸರದ ಕಾಳಜಿಯ ಅರಿವು ಮೂಡಿಸದಿದ್ದರೆ ನಾಳೆ ಪರಿಸರದ ಕಾಳಜಿ ಮಾಡೋರು ಯಾರು? ಹಾಗಾಗಿ ಮಕ್ಕಳಲ್ಲಿ ಪರಿಸರದ ಬಗೆಗೆ ಒಂದಷ್ಟು ಮಾಹಿತಿಯನ್ನು ನೀಡಿ. ಗಿಡ ನೆಡುವುದು ಹೇಗೆ ಪೋಷಿಸುವುದು ಹೇಗೆ ಮತ್ತು ಯಾಕೆ ನೆಡಬೇಕು ಇದರಿಂದ ಏನು ಲಾಭ ಎನ್ನುವುದರ ಮಾಹಿತಿಯ ಜೊತೆಗೆ ಆ ಚಟುವಟಿಕೆಗಳಲ್ಲಿ ತೊಡಗಿಸಿ ಇದರಿಂದ ನಾಳಿನ ದಿನಗಳನ್ನು ನಿಶ್ಚಿಂತೆಯಾಗಿ ಕಳೆಯಲು ಮಕ್ಕಳಿಗೂ ಸಹಾಯವಾದೀತು.

9. ವಿಜ್ಞಾನದ ಪ್ರಾಜೆಕ್ಟ್‌ಗಳನ್ನು ಮಾಡಿಸಿ:

ಮಕ್ಕಳು ರಜೆಯಲ್ಲಿ ಸುಮ್ಮನೆ ಕುಳಿತು ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎನ್ನಿಸಿದರೆ ಅವರಿಗೆ ಮೋಜು ಹಾಗೂ ಕಲಿಕೆ ಎರಡೂ ಸಾಧ್ಯವಾಗುವ ರೀತಿ ವಿಜ್ಞಾನದ ಪ್ರಾಜೆಕ್ಟ್‌ಗಳನ್ನು ಅವರಿಂದ ಮಾಡಿಸಿ. ಇದರಿಂದ ಅವರ ಮೆದುಳು ಚುರುಕಾಗುತ್ತದೆ, ಹೀಗೆ ಮಾಡಿದರೆ ಏನಾಗಬಹುದು ಎಂಬ ಯೋಚನಾಶಕ್ತಿಯ ಬೆಳವಣಿಗೆಗೂ ಇದು ಸಹಕಾರಿ.

10. ಗಾರ್ಡನಿಂಗ್‌ ಮಾಡುವುದು:

ಇಂದಿನ ಮಕ್ಕಳಿಗೆ ಪರಿಸರ ಕಾಳಜಿ ಸ್ವಲ್ಪವೂ ಇಲ್ಲ. ಆ ಕಾರಣಕ್ಕೆ ಮನೆ ಎದುರಿನ ಜಾಗದಲ್ಲಿ ಅಥವಾ ಕುಂಡಗಳಲ್ಲಿ ಗಿಡಗಳನ್ನು ಬೆಳೆಸುವುದನ್ನು ಕಲಿಸಿ. ಗಿಡ ನೆಡುವುದರಿಂದ ಅವುಗಳಿಗೆ ಪಾತಿ ಮಾಡುವುದು, ನೀರುಣಿಸುವುದು, ಕಳೆ ಕೀಳುವುದು ಹೀಗೆ ಪ್ರತಿ ಹಂತವನ್ನೂ ಅವರ ಕೈಯಿಂದಲೇ ಮಾಡಿಸಿ. ಇದು ಅವರಲ್ಲಿ ಪರಿಸರ ಆಸಕ್ತಿ ಮೂಡಿಸುವ ಜೊತೆಗೆ ಪರಿಸರದ ಬಗ್ಗೆ ಪ್ರಾಯೋಗಿಕವಾಗಿ ತಿಳಿದುಕೊಂಡ ಹಾಗೆಯೂ ಆಗುತ್ತದೆ.

11. ಹೊಸ ಕೌಶಲಗಳನ್ನು ಕಲಿಸುವುದು:

ಬೇಸಿಗೆ ರಜೆ ಎಂದರೆ ಪ್ರವಾಸ, ಮೋಜು, ಮಸ್ತಿ ಇಷ್ಟೇ ಅಲ್ಲ. ಇದರೊಂದಿಗೆ ಹೊಸ ಹೊಸ ಕೌಶಲಗಳ ಕಲಿಕೆಗೂ ಆದ್ಯತೆ ನೀಡಬೇಕು. ಬಿಡುವಿನ ವೇಳೆಯಲ್ಲಿ ಹೊಸ ಕೌಶಲಗಳ ಕಲಿಕೆಯ ಮೇಲೆ ಒತ್ತು ನೀಡಲು ಮಗುವಿಗೆ ಪೋಷಕರು ಪ್ರೋತ್ಸಾಹಿಸಬೇಕು. ವಿಜ್ಞಾನ, ಕಂಪ್ಯೂಟರ್‌, ಕ್ರೀಡೆ, ಸಂಗೀತ, ಚಿತ್ರಕಲೆ ಹೀಗೆ ನಿಮ್ಮ ಮಗುವಿನ ಆಸಕ್ತಿಯ ಕ್ಷೇತ್ರ ಯಾವುದು ಎಂದು ಗುರುತಿಸಿ ಅದನ್ನು ಕಲಿಯಲು ಪ್ರೋತ್ಸಾಹಿಸಬೇಕು.

Motivational speech in Kannada

12. ಅಜ್ಜಿ ಮನೆಗೆ ಹೋಗುವ ಯೋಜನೆ:

ಅಜ್ಜಿಮನೆಗಿಂತ ದೊಡ್ಡ ಸಮ್ಮರ್‌ ಕ್ಯಾಂಪ್‌ ಯಾವುದೂ ಇಲ್ಲ. ಬೇಸಿಗೆ ರಜೆ ಸಿಕ್ಕ ತಕ್ಷಣ ಅಜ್ಜಿಮನೆಗೆ ಹೋಗುವ ಯೋಜನೆ ಹಾಕಿಕೊಳ್ಳಿ. ನಿಮ್ಮ ಕಸಿನ್‌ಗಳಿಗೂ ಅಲ್ಲಿಗೆ ಬರಲು ಹೇಳಿ. ಎಲ್ಲರೂ ಒಂದಾಗಿ ಅಜ್ಜಿ, ಅಜ್ಜನ ಜೊತೆ ಹಳ್ಳಿ ವಾತಾವರಣದಲ್ಲಿ ಸಮಯ ಕಳೆಯುವ ಖುಷಿಯೇ ಬೇರೆ. ಅಲ್ಲಿನ ಗದ್ದೆ-ಬಯಲು, ಸಣ್ಣ ತೊರೆಗಳು, ಬೆಟ್ಟ ಗುಡ್ಡಗಳಲ್ಲಿ ಸುತ್ತಾಡಿ ಎಂಜಾಯ್‌ ಮಾಡಿ. ಹಲಸಿನ ಹಣ್ಣು, ಮಾವಿನ ಹಣ್ಣು, ಸೀಬೆಕಾಯಿ ಇವು ನಿಮ್ಮ ಬೇಸಿಗೆ ರಜೆಯ ಮಜವನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಸಂಜೆ ವೇಳೆ ಎಲ್ಲರೂ ಒಟ್ಟಾಗಿ ಅಂಗಳದಲ್ಲಿ ಆಟವಾಡಿ, ರಾತ್ರಿ ವೇಳೆ ಬೋರ್ಡ್‌ ಗೇಮ್‌ಗಳನ್ನು ಆಡಿ. ಸಿನಿಮಾ ನೋಡಿ. ಇದು ನಿಮಗೆ ಮರೆಯಲಾರದ ಅನುಭವ ಸಿಗುವಂತೆ ಮಾಡುವುದು ಸುಳ್ಳಲ್ಲ.

13. ಆನ್‌ಲೈನ್‌ ಮನರಂಜನೆ:

ಇದು ಆನ್‌ಲೈನ್‌ ಜಮಾನ. ಇಲ್ಲಿ ಸರ್ವವೂ ಆನ್‌ಲೈನ್‌ನಲ್ಲೇ ನಡೆಯುತ್ತದೆ. ಈ ಬೇಸಿಗೆಯಲ್ಲಿ ನಿಮ್ಮ ಇಷ್ಟದ ಚಲನಚಿತ್ರ ಅಥವಾ ವೆಬ್‌ ಸೀರಿಸ್‌ಗಳನ್ನು ನೋಡುವುದು, ಹೊಸ ಕೌಶಲಗಳನ್ನು ಕಲಿಸುವ ವೆಬಿನಾರ್‌ಗಳಿಗೆ ಸೇರಿಕೊಳ್ಳುವುದು, ಆನ್‌ಲೈನ್ ತರಗತಿಗಳಿಗೆ ಸೇರಿಕೊಳ್ಳುವ ಮೂಲಕ ಪೇಂಟಿಂಗ್‌, ಡ್ರಾಯಿಂಗ್‌ನಂತಹ ಕೌಶಲಗಳನ್ನೂ ರೂಢಿಸಿಕೊಳ್ಳಬಹುದು. ಇದರೊಂದಿಗೆ ಟಿವಿ, ಕಂಪ್ಯೂಟರ್‌ ಕೂಡ ನಿಮಗೆ ಜೊತೆಯಾಗುತ್ತವೆ. ಆದರೆ ಸ್ಕ್ರೀನ್‌ ಟೈಮ್‌ ಲಿಮಿಟ್‌ ಮರೆಯದೇ ಇರುವುದು ಉತ್ತಮ.

14. ನಿಮ್ಮ ಅಕ್ಕಪಕ್ಕದ ಮಕ್ಕಳ ತಂಡ ರಚಿಸಿ:

ಪೇಟೆಯಲ್ಲಿರಲಿ, ಹಳ್ಳಿಯಲ್ಲಿರಲಿ ನಿಮ್ಮ ಮನೆಯ ಅಕ್ಕಪಕ್ಕದ ಸ್ನೇಹಿತರನ್ನೆಲ್ಲಾ ಒಟ್ಟುಗೂಡಿಸಿ ಒಂದು ಗುಂಪು ರಚಿಸಿಕೊಳ್ಳಿ. ನೀವೆಲ್ಲರೂ ಒಟ್ಟಾಗಿ ಆಟವಾಡುವುದು, ಗಾರ್ಡನಿಂಗ್‌ ಮಾಡುವುದು, ಹೊಸ ಹೊಸ ಕೌಶಲಗಳನ್ನು ಕಲಿಯುವುದು ಇಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಒಂದಿಷ್ಟು ಹೊತ್ತು ಜೊತೆಯಾಗಿ ಓದುವುದು, ಬರೆಯುವುದೂ ಇರಲಿ. ಮನೆಯ ಸಮೀಪದ ಮೈದಾನದಲ್ಲಿ ನಿಮ್ಮ ಇಷ್ಟದ ತಂಡದೊಂದಿಗೆ ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಆಟವಾಡಿ. ಇದು ರಜೆಯ ಖುಷಿಯನ್ನು ಇನ್ನಷ್ಟು ಹೆಚ್ಚಲು ಸಹಾಯ ಮಾಡುತ್ತದೆ.

15. ನಿಮ್ಮ ಸಿಟಿಗೆ ನೀವೇ ಟೂರಿಸ್ಟ್‌ ಆಗಿ:

ನೀವು ಇರುವ ಊರಿನಲ್ಲೇ ಸಾಕಷ್ಟು ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು ಇರಬಹುದು, ಅಲ್ಲದೆ ಅದನ್ನು ನೀವು ನೋಡಿಲ್ಲದೆ ಇರಬಹುದು. ಅಂತಹ ಸ್ಥಳಗಳಿಗೆ ಪೋಷಕರು ಅಥವಾ ನಿಮ್ಮ ಸ್ನೇಹಿತರ ಜೊತೆ ಭೇಟಿ ಕೊಡಿ. ಇದರಿಂದ ನಿಮ್ಮ ಊರಿನ ಬಗ್ಗೆ ನೀವು ಇನ್ನಷ್ಟು ತಿಳಿದುಕೊಂಡಂತಾಗುತ್ತದೆ, ಮಾತ್ರವಲ್ಲ ನಿಮ್ಮ ರಜೆ ದಿನಗಳ ಖುಷಿಯನ್ನೂ ಹೆಚ್ಚಿಸಲು ಇದು ಸಹಕಾರಿ.

16. ಅಡುಗೆ ಕಲಿಯಿರಿ:

ನಿಮ್ಮ ರಜೆಯ ದಿನಗಳಲ್ಲಿ ಅಡುಗೆಮನೆಯಲ್ಲೂ ನಿಮ್ಮ ಖುಷಿಯನ್ನು ಕಾಣಬಹುದು. ನಿಮ್ಮ ಇಷ್ಟದ ರೆಸಿಪಿಗಳನ್ನು ನೀವೇ ತಯಾರಿಸಿಕೊಳ್ಳಲು ಪ್ರಯತ್ನಿಸಿ. ಮನೆಯವರ ಸಹಾಯ ಪಡೆಯಿರಿ. ನಿಮ್ಮ ತಾಯಿಗೆ ಅಡುಗೆಯಲ್ಲಿ ನೆರವಾಗುವ ಜೊತೆಗೆ ಅಡುಗೆ ಮಾಡುವುದನ್ನೂ ಕಲಿಯಿರಿ. ನಿಮಗಾಗಿ ಚಿಕ್ಕ ಚಿಕ್ಕ ದೋಸೆ, ಇಡ್ಲಿ ಮಾಡಿಕೊಳ್ಳಿ. ನೀವೇ ಮಾಡಿದ ಅಡುಗೆಯನ್ನು ನೀವೇ ತಿನ್ನುವಾಗ ಸಿಗುವ ಮಜವೇ ಬೇರೆ.

Scroll to Top