SSLC exam related doubts. 10th class exam doubts and solutions of study and exam. SSLC exam final tips and news. Karnataka SSLC exam latest news updates.
In this post we are going to discuss 10th standard exam news and updates of exam doubts in Kannada. These exams related doubts helps to understand how exams are conducted. SSLC exam 1, exam 2 and exam 3. 10th exam pattern and registration.
To get more video notes for SSLC, visit our YouTube channel. This channel is very useful for 10th class exam preparation.

10th class exam doubts and solutions of study and exam
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಹಲವಾರು ಸಂಶಯಗಳು ಇವೆ. ಅವುಗಳಲ್ಲಿ ಈ ಬಾರಿ 3 ಪರೀಕ್ಷೆ ಬರೆಯುವುದು ಒಂದು. ಆದ್ದರಿಂದ ಸಹಜವಾಗಿಯೇ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಹೇಗೆ ಪರಿಗಣಿಸಲಾಗುತ್ತದೆ, ನಾವು ಎಲ್ಲವನ್ನು ಬರೆಯಬೇಕೆ, ಫಲಿತಾಂಶ ಹೇಗೆ ಬರುವುದು, ನಾವು ಪ್ರತಿ ಪರೀಕ್ಷೆಗೆ ಶುಲ್ಕವನ್ನು ಪಾವತಿಸಬೇಕೇ, ಹೀಗೆ ಹಲವು ಸಂಶಯಗಳಿವೆ. ಆದ್ದರಿಂದ ಸಂಶಯಾತ್ಮಕ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು. ವಿದ್ಯಾರ್ಥಿಗಳು ತಮಗೆ ಇರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರವನ್ನು ಸಂಪೂರ್ಣವಾಗಿ ಇಲ್ಲಿ ಓದಿ ತಿಳಿಯಬಹುದಾಗಿದೆ.
1. 2024-25ನೇ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತದೆ?
ಉತ್ತರ : ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ಒಟ್ಟು 3 ಪರೀಕ್ಷೆಗಳನ್ನು ನಡೆಸಲಿದೆ. ಇವುಗಳನ್ನು ವಾರ್ಷಿಕ ಪರೀಕ್ಷೆ-1, ಪರೀಕ್ಷೆ-2, ಪರೀಕ್ಷೆ-3 ಎಂದು ಕರೆಯಲಾಗುತ್ತದೆ.
2. ಮಂಡಲಿ ನಡೆಸುವ ಪರೀಕ್ಷೆಗಳನ್ನು ವಾರ್ಷಿಕ ಮತ್ತು ಪೂರಕ ಪರೀಕ್ಷೆ ಎಂದು ಕರೆಯುತ್ತಾರೆಯೇ?
ಉತ್ತರ : ಇಲ್ಲ. ಪೂರಕ ಪರೀಕ್ಷೆ ಬದಲಾಗಿ ವಾರ್ಷಿಕವಾಗಿ 3 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದ್ದರಿಂದ ಕ್ರಮವಾಗಿ ವಾರ್ಷಿಕ ಪರೀಕ್ಷೆ -1, 2, 3 ಎಂದು ಕರೆಯಲಾಗುತ್ತದೆ.
3. ಈ ಬಾರಿಯ ಪರೀಕ್ಷೆಯಲ್ಲಿ ಬದಲಾವಣೆ ಮಾಡಿರುವ ಉದ್ದೇಶವೇನು?
ಉತ್ತರ: ಪೂರಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಉಂಟಾಗಿದ್ದ ಕೀಳರಿಮೆಯನ್ನು ನಿವಾರಿಸುವುದು ಹಾಗೂ ಒಂದು ಹೆಚ್ಚುವರಿ ಪರೀಕ್ಷೆಯಾಗಿ ಪರೀಕ್ಷೆ-3 ಅನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಅವಕಾಶವನ್ನು ಕಲ್ಪಿಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ದಾಖಲಾತಿ ಪಡೆಯಲು ಅನುಕೂಲ ಮಾಡಿಕೊಡುವುದು.
4. 2024-25ರ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಪ್ರಶ್ನೆ ಪತ್ರಿಕೆಗಳ ವಿನ್ಯಾಸ ಬದಲಾಗಿದೆಯೇ?
ಉತ್ತರ: ಇಲ್ಲ. 2023-24ರ ಪ್ರಶ್ನೆ ಪತ್ರಿಕೆ ಮಾದರಿಯನ್ನೇ 2024-25ರ ಶೈಕ್ಷಣಿಕ ವರ್ಷದಲ್ಲಿಯೂ ಮುಂದುವರೆಸಲಾಗಿದೆ.
5. 2023-24ರ ಶೈಕ್ಷಣಿಕ ವರ್ಷದಲ್ಲಿ ಮೂರು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಏಕರೂಪತೆಯನ್ನು ಹೊಂದಿರುತ್ತವೆಯೇ?
ಉತ್ತರ : ಹೌದು. ಮೂರು ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ವಿಷಯ ಮತ್ತು ಕಠಿಣತೆಯ ಮಟ್ಟದಲ್ಲಿ ಏಕರೂಪತೆ ಇರುತ್ತವೆ.
6. ಪರೀಕ್ಷೆ-1 ಕ್ಕೆ ಗೈರು ಹಾಜರಾದವರು ಪರೀಕ್ಷೆ-2 ಅಥವಾ ಪರೀಕ್ಷೆ-3 ಅನ್ನು ತೆಗೆದುಕೊಳ್ಳಬಹುದೇ?
ಉತ್ತರ: ಹೌದು, ಪರೀಕ್ಷೆ ತೆಗೆದುಕೊಳ್ಳಬಹುದು.
7. ವಿದ್ಯಾರ್ಥಿಗಳು ಎಲ್ಲಾ ಮೂರು ಪರೀಕ್ಷೆಗಳನ್ನು ಬರೆಯುವುದು ಕಡ್ಡಾಯವೇ?
ಉತ್ತರ: ಖಂಡಿತ ಇಲ್ಲ. ಪರೀಕ್ಷೆ-1 ಕ್ಕೆ ನೋಂದಾವಣೆ ಕಡ್ಡಾಯ. ವಿದ್ಯಾರ್ಥಿಗಳು ತಾವು ಇಚ್ಛಿಸಿದ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆಯಬಹುದು.
8. 2023-24 ಮತ್ತು ಅದಕ್ಕಿಂತ ಹಿಂದಿನ ಸಾಲಿನವರು 2024-25ರ ಪರೀಕ್ಷೆ-1 ಕ್ಕೆ ಹಾಜರಾಗುವುದು ಕಡ್ಡಾಯವೇ?
ಉತ್ತರ: ಇಲ್ಲ. 2023-24 ಮತ್ತು ಹಿಂದಿನ ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಮೂರು ಪರೀಕ್ಷೆಗಳಲ್ಲಿ ಯಾವುದಾದರೂ ಪರೀಕ್ಷೆ ಬರೆಯಬಹುದು. ಅಥವಾ ಎಲ್ಲವನ್ನು ಬರೆಯಬಹುದು.
9. ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯಲು ಎಷ್ಟು ಅವಕಾಶಗಳಿರುತ್ತವೆ?
ಉತ್ತರ: ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯಲು ಪರೀಕ್ಷೆ-1 ಸೇರಿದಂತೆ ಒಟ್ಟು ಸತತ 6 ಅವಕಾಶಗಳಿರುತ್ತವೆ.
Karnataka SSLC exam latest news updates
10. 6 ಪ್ರಯತ್ನಗಳ ಮುಕ್ತಾಯದ ನಂತರ ಪುನಃ ಪರೀಕ್ಷೆಗೆ ನೋಂದಾವಣೆಗೆ ಅವಕಾಶವಿದೆಯೇ?
ಉತ್ತರ: ಹೌದು. ಈ 6 ಪ್ರಯತ್ನ ಮುಗಿದ ನಂತರ ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾವಣೆ ಮಾಡಬಹುದು. ಸದರಿ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಪಠ್ಯಕ್ರಮವನ್ನು ವ್ಯಾಸಂಗ ಮಾಡಿ ಪರೀಕ್ಷೆಗೆ ಹಾಜರಾಗಬೇಕು.
11. ಪ್ರಥಮ ಬಾರಿಗೆ ಪರೀಕ್ಷೆ ತೆಗೆದುಕೊಳ್ಳುವ ಶಾಲಾ ವಿದ್ಯಾರ್ಥಿಗಳಿಗೆ ಶೇಕಡ.75 ರಷ್ಟು ಹಾಜರಾತಿ ಕಡ್ಡಾಯವೇ?
ಉತ್ತರ: ಹೌದು. ಶೇಕಡ.75 ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ.
12. ಪರೀಕ್ಷೆ-1 ರಲ್ಲಿ ಕೆಲವು ವಿಷಯಗಳಲ್ಲಿ ಫೇಲ್ ಆಗಿ, ಪರೀಕ್ಷೆ-2 / ಪರೀಕ್ಷೆ-3 ರಲ್ಲಿ ಉಳಿದ ಎಲ್ಲಾ ವಿಷಯಗಳಲ್ಲಿ ಪಾಸ್ ಆದವರ ಅಂಕಪಟ್ಟಿಯಲ್ಲಿ ಏನೆಂದು ನಮೂದಾಗುವುದು?
ಉತ್ತರ: ಅಂತಿಮವಾಗಿ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣಗೊಂಡ ಪರೀಕ್ಷೆಯ ಮಾಹೆ ಮತ್ತು ಪರೀಕ್ಷೆಯ ಸಂಖ್ಯೆಯನ್ನು ಅಂಕಪಟ್ಟಿಯಲ್ಲಿ ನಮೂದಿಸಲಾಗುವುದು.
13. ಪರೀಕ್ಷೆ-1 ರಲ್ಲಿ ತೇರ್ಗಡೆ ಹೊಂದಿದ ವಿಷಯಗಳ ಫಲಿತಾಂಶವನ್ನು / ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶವಿದೆಯೇ?
ಉತ್ತರ: ಹೌದು. ಪರೀಕ್ಷೆ-1 ರಲ್ಲಿ ಎಲ್ಲಾ ವಿಷಯಗಳಲ್ಲಿ ಪಾಸಾದವರು ಎರಡು ವರ್ಷಗಳ ಅವಧಿಯಲ್ಲಿ ವಿದ್ಯಾರ್ಥಿಯು ಇಚ್ಛಿಸಿದಲ್ಲಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಬಹುದಾಗಿದ್ದು, ಅಂತಿಮವಾಗಿ ವಿದ್ಯಾರ್ಥಿ ಗಳಿಸುವ ಅತ್ಯುತ್ತಮ ಅಂಕಗಳನ್ನು ಅಂಕಪಟ್ಟಿಯಲ್ಲಿ ಪಡೆಯಲು ಅವಕಾಶ ಇದೆ.
14. ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನದಲ್ಲಿ ಪಡೆದ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ಇದೆಯೇ?
ಉತ್ತರ: ಇಲ್ಲ. ಒಮ್ಮೆ ಆಂತರಿಕ ಮೌಲ್ಯಮಾಪನದಲ್ಲಿ ಪಡೆದ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ಇಲ್ಲ.
15. ಪರೀಕ್ಷೆ-1 ರಲ್ಲಿ ತೇರ್ಗಡೆ ಹೊಂದಿ ಪರೀಕ್ಷೆ-2 ಮತ್ತು 3ನೇ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸದೇ ಇರುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ಯಾವಾಗ ವಿತರಿಸಲಾಗುತ್ತದೆ?
ಉತ್ತರ: ಪರೀಕ್ಷೆ-1ರ ಫಲಿತಾಂಶ ಹಾಗೂ ಮರುಮೌಲ್ಯಮಾಪನ / ಮರುಏಣಿಕೆ ಫಲಿತಾಂಶ ಪ್ರಕಟಿಸಿದ 30 ದಿನಗಳ ನಂತರ ಅಂಕಪಟ್ಟಿಗಳನ್ನು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಮೂಲಕ ವಿತರಿಸಲಾಗುವುದು.
16. ವಿದ್ಯಾರ್ಥಿಗಳು ಎಲ್ಲಾ 3 ಪರೀಕ್ಷೆಗೆ ಶುಲ್ಕ ಪಾವತಿಸಬೇಕೇ?
ಉತ್ತರ: ಪರೀಕ್ಷೆ-1 ರಲ್ಲಿ ತೇರ್ಗಡೆಯಾಗಿ ಪುನಃ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸದ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಿಲ್ಲ. ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾಗಿ ಅಥವಾ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ತಾವು ಬರೆಯುವ ವಿಷಯದ ಪರೀಕ್ಷೆಗೆ ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು.
17. ಪ್ರತಿ ಪರೀಕ್ಷೆಗೆ ಅಂಕಪಟ್ಟಿ ಶುಲ್ಕ ಪಡೆಯಲಾಗುತ್ತದೆಯೇ?
ಉತ್ತರ: ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ಸಲುವಾಗಿ ಒಂದು ಬಾರಿ ಮಾತ್ರ ನಿಗದಿತ ಶುಲ್ಕ ಪಡೆಯಲಾಗುವುದು.
18. ಕಲಿಕಾ ನ್ಯೂನತೆ ಮತ್ತು ವಿಕಲಚೇತನ ಮಕ್ಕಳಿಗೆ ಇರುವ ಸೌಲಭ್ಯಗಳೇನು?
ಉತ್ತರ: ಹಿಂದಿನ ಸಾಲಿನಲ್ಲಿ ನೀಡಲಾಗಿದ್ದ ಎಲ್ಲಾ ಸೌಲಭ್ಯಗಳನ್ನು ಮುಂದುವರೆಸಲಾಗಿದೆ. ಈ ಬಗ್ಗೆ ವಿವರಗಳನ್ನು 2024-25ನೇ ಸಾಲಿನ ಮಾರ್ಗಸೂಚಿಯಲ್ಲಿ ಗಮನಿಸಬಹುದಾಗಿದೆ.
19. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ತುರ್ತಾಗಿ ಅಂಕಪಟ್ಟಿಯನ್ನು ಪಡೆದುಕೊಳ್ಳಲು ಅವಕಾಶ ಇದೆಯೇ?
ಉತ್ತರ : ಅವಕಾಶವಿದೆ. ಆಯಾ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ನಂತರ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಡಿಜಿಲಾಕರ್ ವ್ಯವಸ್ಥೆಯಲ್ಲಿ ಪಡೆಯಬಹುದಾಗಿದೆ.
How many attempts for class 10 exam
SSLC Kannada practice question papers with key answers.
Watch this video for the explanation of SSLC exam related doubts.
SSLC study links:
1) SSLC all subject passing package 2024-25
2) SSLC all subject scoring package 2024-25
4) 10th class Preparatory Exam all Subject Question Papers 2024-25
5) Kalaburagi District Level Preparatory Exam Question Paper with Key Answer
6) SSLC Question papers with key
7) SSLC all subject model question papers of Mysore district 2024-25
8) SSLC State level all subject preparatory exam question papers with key answer 2024-25