ಮಗ 10ನೇ ತರಗತಿ ಪಾಸ್ ಆದ ಖುಷಿಗೆ, ಅಮ್ಮ ಕೊಟ್ಟ ಗಿಫ್ಟ್ ಏನು ಗೊತ್ತಾ? | Emotional story in kannada. Story in Kannada for children.
This video about a Emotional story of Mother and Son. Kannada story. Stories. Usually, those who are looking forward to this 10th and 2nd PUC written exam result are eagerly waiting for ‘when will the result come, how many marks have come’.
Also, like some others, if the result is good, they have made a plan in their mind that they should tell the result to everyone in the area and give them sweets. Similarly, we see many students and their parents giving sweets to their neighbors after their 10th and 2nd PUC results to celebrate the success of their son or daughter.
To get more videos on Kannada motivational stroy, visit our YouTube channel. This channel is very useful for interesting story in Kannada.
Watch this video for the explanation of Emotional story in kannada.
ಮಗ 10ನೇ ತರಗತಿ ಪಾಸ್ ಆದ ಖುಷಿಗೆ, ಅಮ್ಮ ಕೊಟ್ಟ ಗಿಫ್ಟ್ ಏನು ಗೊತ್ತಾ?
ಸಾಮಾನ್ಯವಾಗಿ ಈ ಹತ್ತನೇ ಮತ್ತು ದ್ವಿತೀಯ ಪಿಯುಸಿ ಬರೆದ ಪರೀಕ್ಷೆ ಫಲಿತಾಂಶಕ್ಕೆ ಎದುರು ನೋಡುತ್ತಿರುವವರು ‘ಯಾವಾಗಪ್ಪಾ ರಿಸಲ್ಟ್ ಬರುತ್ತೆ, ಎಷ್ಟು ಅಂಕಗಳು ಬಂದಿವೆ’ ಅಂತ ತುಂಬಾನೇ ಕಾತುರತೆಯಿಂದ ಕಾಯುತ್ತಿರುತ್ತಾರೆ. ಅಲ್ಲದೆ ಇನ್ನೂ ಕೆಲವರಂತೂ ರಿಸಲ್ಟ್ ಚೆನ್ನಾಗಿ ಬಂದರೆ ಏರಿಯಾದಲ್ಲಿರುವವರಿಗೆಲ್ಲಾ ಮಾಡಿ ರಿಸಲ್ಟ್ ಹೇಳಿ ಅವರಿಗೆ ಸ್ವೀಟ್ ಕೊಡಬೇಕು ಅಂತ ಮನಸ್ಸಿನಲ್ಲಿಯೇ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದರಂತೆಯೇ ಅನೇಕ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಹತ್ತನೇ ಮತ್ತು ದ್ವಿತೀಯ ಪಿಯುಸಿಯ ರಿಸಲ್ಟ್ ಬಂದ ನಂತರ ತಮ್ಮ ಮಗ ಅಥವಾ ಮಗಳು ಗಳಿಸಿದ ಆ ಯಶಸ್ಸನ್ನು ಸಂಭ್ರಮಿಸಲು ನೆರೆಹೊರೆಯವರಿಗೆ ಸ್ವೀಟ್ ಕೊಡುವುದನ್ನು ನಾವು ನೋಡುತ್ತೇವೆ.
ಜೊತೆಗೆ ದಯವಿಟ್ಟು ತುಂಬಾ ಕಷ್ಟಪಟ್ಟು ಕೆಲಸ ಮಾಡಿ ಸಂಪಾದನೆ ಮಾಡಿ ಓದುತ್ತಿರುವಾಗ, ಇಂತಹ ಫಲಿತಾಂಶಗಳನ್ನು ನೋಡಿ ಅವರಿಗೆ ಆಗುವ ಸಂತೋಷಕ್ಕೆ ಮಿತಿ ಇರುವುದಿಲ್ಲ.
ಜೊತೆಗೆ, ಯಾರಾದರೂ ನಮಗೆ ರಿಸಲ್ಟ್ ಚೆನ್ನಾಗಿ ಬಂದಿದೆ ಅಂತ ಬಂದು ಸ್ವೀಟ್ ಕೊಟ್ಟರೆ ನಮಗೆ ತುಂಬಾ ಖುಷಿಯಾಗುತ್ತದೆ. ಹೌದು.. ಬೇರೆಯವರ ಖುಷಿಯಲ್ಲಿ ನಮಗೂ ಸಹ ಪಾಲು ಎಂಬ ನಿಜ ಸಂತೋಷ ನಮ್ಮ ಮನಸ್ಸಿಗೆ ಆಗುವುದು ನಿಜ
ಇಲ್ಲಿಯೂ ಸಹ ಇಂತಹದೇ ಒಂದು ಖುಷಿ ತರುವ ವಿಚಾರ ನಡೆದಿದೆ ನೋಡಿ. ತಮ್ಮ ಮಗ 10ನೇ ತರಗತಿಯಲ್ಲಿ ಪಾಸ್ ಆಗಿದ್ದಕ್ಕೆ ಖುಷಿಯಾಗಿ ಹೊಟ್ಟೆಪಾಡಿಗಾಗಿ ಬೇರೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆ ಆ ಮನೆಯವರಿಗೆ ಎರಡು ಮಾವಿನಹಣ್ಣುಗಳನ್ನು ಕೊಟ್ಟು ತನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ.
ಹೀಗೆ ಎರಡು ಮಾವಿನಹಣ್ಣುಗಳನ್ನು ಪಡೆದ ಮನೆಯ ಯಜಮಾನ ಆ ಮಾವಿನಹಣ್ಣುಗಳ ಫೋಟೋ ಕ್ಲಿಕ್ಕಿಸಿ, ಅದರ ನಂತರ ತಮ್ಮ ಟ್ವಿಟರ್ ಖಾತೆ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಉತ್ಕರ್ಷ್ ಗುಪ್ತಾ ಅವರು ಈ ಮಾವಿನಹಣ್ಣುಗಳ ಫೋಟೋವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, “ತನ್ನ ಮಗು 10 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತರರಾದ ನಂತರ ಮನೆಯಲ್ಲಿ ಕೆಲಸ ಮಾಡುವ ಮಹಿಳೆ ಇಂದು ನಮಗೆ 2 ಮಾವಿನಹಣ್ಣುಗಳನ್ನು ತಂದಿದ್ದಾರೆ” ಎಂದು ಬರೆದಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ಇವರು “ಜನರು ತಮ್ಮ ಸಂತೋಷದಲ್ಲಿ ನಮ್ಮನ್ನು ಸೇರಿಸಿಕೊಂಡಾಗ ಅದು ಎಷ್ಟು ಖುಷಿಯಾಗಿದೆ ಅಲ್ಲವೇ” ಎಂದು ಅವರು ಬರೆದಿದ್ದಾರೆ.