Best Yoga for Summer Holiday

ಬೇಸಿಗೆಲ್ಲಿ ದೇಹದ ಉಷ್ಣಾಂಶ ಕಡಿಮೆ ಮಾಡುವ 6 ಸರಳ ಯೋಗಾಸನಗಳು. Best Yoga for Summer Holiday. Summer health tips. Follow good Yoga for cooling your body in summer day. To get more videos visit our YouTube channel.

The heat of summer can often accelerate our mind and heat our body. Yoga reduces your body temperature in a natural manner. Yoga asanas for summer. Best summer holiday exercise.

ಈ ವರ್ಷದ ರಣ ಬಿಸಿಲಿಗೆ ಜನ ಸುಸ್ತೋ ಸುಸ್ತು. ವಯಸ್ಸಾದವರು ಕೂಡ ಇಂಥ ಉರಿ ಬಿಸಿಲು ನನ್ನ ಜೀವಮಾನದಲ್ಲಿಯೇ ನೋಡಿಲ್ಲ ಎಂದು ಹೇಳುತ್ತಿದ್ದಾರೆ, ಅಷ್ಟರಮಟ್ಟಿಗಿದೆ ಬಿಸಿಲ ಪ್ರಭಾವ. ದೇಶದ ಕೆಲವು ಕಡೆ ಈಗಾಗಲೇ ಹೀಟ್‌ವೇವ್‌ ಶುರುವಾಗಿದೆ. ತುಂಬಾ ಕಡೆ ಉಷ್ಣಾಂಶ 45 ಡಿಗ್ರಿ C ಉಷ್ಣಾಂಶ ತಲುಪಿದೆ.

ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಾಗ ಮೈ ಉಷ್ಣತೆ ಹೆಚ್ಚಾಗುವುದು, ಜೊತೆಗೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು. ಈ ಅವಧಿಯಲ್ಲಿ ಕಾಯಿಲೆ ಬೀಳುವುದನ್ನು ತಡೆಗಟ್ಟಲು ದೇಹದಲ್ಲಿ ಉಷ್ಣಾಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಬಿಸಿಲಿನ ಝಳ ಅಧಿಕವಿರುವ ಈ ಸಮಯದಲ್ಲಿ ನೀವು ದೇಹವನ್ನು ತಂಪಾಗಿಡಲು ಯೋಗಾಸನಗಳು ಸಹಕಾರಿಯಾಗಿದೆ ನೋಡಿ:

Best Yoga for Summer Holiday

1. ತಾಡಾಸನ:

ಇದನ್ನು ದಿನದಲ್ಲಿ ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು. ಇದನ್ನು ಖಾಲಿ ಹೊಟ್ಟೆಯಲ್ಲೇ ಮಾಡಬೇಕೆಂದೇನಿಲ್ಲ. ಇದೊಂದು ತುಂಬಾ ಸರಳವಾದ ಭಂಗಿಯಾಗಿದೆ. ಈ ಆಸನದಲ್ಲಿ 10-12 ಸೆಕೆಂಡ್‌ ಇರಬೇಕು. ಈ ಆಸನ ಮಾಡುವುದರಿಂದ ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಡಿಮೆಯಾಗುವುದು, ಇದರಿಂದ ತುಂಬಾ ಸೆಕೆ ಅನಿಸುವುದಿಲ್ಲ.

2. ಬದ್ಧ ಕೋನಾಸನ:

 ಇದನ್ನು ಬಟರ್‌ಫ್ಲೈ ಪೋಸ್ ಎಂದು ಕರೆಯಲಾಗುವುದು. ಇದು ಕೂಡ ತುಂಬಾ ಸರಳವಾದ ಹಾಗೂ ಅಷ್ಟೇ ಪರಿಣಾಮಕಾರಿಯಾದ ಆಸನವಾಗಿದೆ. ಈ ಆಸನವನ್ನು ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. ಈ ಆಸನ ಕೂಡ ಸೆಕೆಯಲ್ಲಿ ದೇಹದ ಉಷ್ಣಾಂಶ ಕಡಿಮೆ ಮಾಡಲು ಸಹಕಾರಿಯಾಗಿದೆ.

ಬೇಸಿಗೆಲ್ಲಿ ದೇಹದ ಉಷ್ಣಾಂಶ ಕಡಿಮೆ ಮಾಡುವ 6 ಸರಳ ಯೋಗಾಸನಗಳು

3. ಆಂಜನೇಯಾಸನ(Crescent Pose):

 ಅರ್ಧ ಚಂದ್ರಾಕೃತಿಯ ಈ ಆಸನವನ್ನು ದಿನದಲ್ಲಿ 10-15 ಸೆಕೆಂಡ್‌ ಇದ್ದರೆ ಸಾಕು ದೇಹದ ಉಷ್ಣಾಂಶ ಕಾಪಾಡಲು ತುಂಬಾ ಸಹಕಾರಿಯಾಗಿದೆ. ಈ ಆಸನ ಮಾನಸಿಕ ಒತ್ತಡ ಕಡಿಮೆಯಾಗುವುದು. ಸೆಕೆ ಹೆಚ್ಚಾದಾಗ ಜೀರ್ಣಕ್ರಿಯೆ ಮೇಲೆ ಪ್ರಭಾವ ಬೀರುವುದು. ಈ ಆಸನ ಜೀರ್ಣಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿಯಾಗಿದೆ.

4. ಉಷ್ಟ್ರಾಸನ :

ಈ ಆಸನವನ್ನು ಬೆಳಗ್ಗೆ ಅಭ್ಯಾಸ ಮಾಡಿ. ಬೆಳಗ್ಗೆ ಈ ಆಸನದಲ್ಲಿ 30-60 ನಿಮಿಷ ಸೆಕೆಂಡ್‌ ಇರಿ. ಹೀಗೆ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿ ನಡೆಯುವುದು. ದೇಹವನ್ನು ಡಿಟಾಕ್ಸ್ ಮಾಡಲು ಕೂಡ ಸಹಕಾರಿ.

5.  ಭುಜಾಂಗಾಸನ :

ಈ ಆಸನ ಕೂಡ ಬೇಸಿಗೆಯಲ್ಲಿ ಪ್ರತಿದಿನ ಅಭ್ಯಾಸ ಮಾಡಿ.

ಇದರಿಂದ ಸೆಕೆಯನ್ನು ಸಹಿಸಲು ದೇಹ ಸಿದ್ಧವಾಗುವುದು.

ಈ ಆಸನ ದೇಹದಲ್ಲಿ ಉಷ್ಣಾಂಶ ಕಡಿಮೆ ಮಾಡಲು ಸಹಕಾರಿ.

ಭುಜಾಂಗಾಸನ ಅಭ್ಯಾಸ ಮಾಡುವುದರಿಂದ ರಕ್ತ ಸಂಚಾರ ಉತ್ತಮವಾಗಿರುವುದು.

Yoga for cooling your body in summer day

6. ಶವಾಸನ :

ನೀವು ಈ ಆಸನವನ್ನು ಪ್ರತಿಯೊಂದು ಆಸನ ಮಾಡಿದ ಮೇಲೂ ಮಾಡಬೇಕು.

ಶವಾಸನ ಮಾಡುವುದರಿಂದ ದೇಹದಲ್ಲಿ ಉಷ್ಣಾಂಶ ಕಾಪಾಡಲು ತುಂಬಾನೇ ಸಹಕಾರಿಯಾಗಿದೆ.

ಶವಾಸನ ಮಾಡುವಾಗ ನಿದ್ದೆ ಜಾರ ಬೇಡಿ. ಒಂದು ನಿಮಿಷ ಶವಾಸನದಲ್ಲಿ ವಿಶ್ರಾಂತಿ ಪಡೆದರೆ ಸಾಕು.

Scroll to Top