9th class Kannada FA 1 question paper 2023-24

9th class Kannada FA 1 question paper 2023-24. Download 9th class FA 1 question papers. Kannada FA 1 question papers for class 9.

In this post we have uploaded 9th standard FA 1 question papers with key answer. Formative assessment question papers for 9th class.

To get more video notes for class 9, visit our YouTube channel. This channel is very useful for 9th class exam preparation.

9th class Kannada FA 1 question paper 2023-24

Subject: Kannada

Class: 9th

Medium: Kannada

State: Karnataka

Cost: Free

Sub-topic: FA 1 Question paper with key

File type: PDF

Answers: Given key answer

Share: Sharable link is given

Copyright: Protected

Download: Given download link

Year: 2023-24

Board: Karnataka KSEEB

Print Enable: Yes

Editable Text: No

Copy Text: No

Scanned Copy: Yes

Password Encrypted: No

File Size Reduced: No

Quality: High

Download Link Available: Yes

File View Available: Yes

Click here to download 9th class Kannada FA 1 question paper

Click here to download FA 1 key answer

Watch this video for the explanation of 9th class Kannada FA 1 question paper 2023-224.

Formative assessment question papers for 9th class

ವಿಷಯ: ಕನ್ನಡ                   ರೂಪಣಾತ್ಮಕ ಪರೀಕ್ಷೆ 1               ಅಂಕಗಳು : 20

ತರಗತಿ: 9ನೇ                                                      ಸಮಯ: 40 ನಿಮಿಷಗಳು

I. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.        3×1=3

1. ಮೊದಲೆರಡು ಪದಗಳಿಗಿರುವ ಸಂಬಂಧದಂತ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.

ಲೋಕಾಂತರ : ಸವರ್ಣದೀರ್ಘ ಸಂಧಿ    ::     ಉನ್ನತೋನ್ನತ : ……………

ಅ) ಯಣ್ ಸಂಧಿ         ಆ) ಗುಣ ಸಂಧಿ    ಇ) ವೃದ್ಧಿ ಸಂಧಿ     ಈ) ಸವರ್ಣ ಧೀರ್ಘ ಸಂಧಿ 

2. ದೇವರು ಎಲ್ಲರಿಗೂ ಒಳ್ಳೆಯದನ್ನೇ ಉಂಟುಮಾಡಲಿ. – ಈ ವಾಕ್ಯದಲ್ಲಿರುವ ಕ್ರಿಯಾಪದ

ಅ) ದೇವರು      ಆ) ಎಲ್ಲರಿಗೂ     ಇ) ಒಳ್ಳೆಯದನ್ನೆ     ಈ) ಉಂಟುಮಾಡಲಿ

3. ಈ ಪದವು ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ ……………

ಅ) ತಿನ್ನನು      ಆ) ತಿನ್ನಲಿ      ಇ) ತಂದಾನು      ಈ) ತಿನ್ನುತಾನೆ

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿರಿ.         3×1=3

4. ಜನರು ಅರಸನನ್ನು ಹೇಗೆ ತಿರಸ್ಕರಿಸಬಹುದು?

5. ಕವಿ ಎಂತಹ ಹಾಡು ಹಾಡಬೇಕೆಂದು ಬಯಸುವರು?

6. ಪಂಢರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರೇನು?

III. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.       2×2=4

7. ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ.

8. ಪಾರಿವಾಳಗಳ ಆನಂದಕ್ಕೆ ಕಾಣವೇನು?

IV. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.                                                                                                                             1×3=3

9. “ಯುಗ ಯುಗಗಳಾಚೆಯಲ್ಲಿ ಲೋಕಲೋಕಾಂತರದಲ್ಲಿ ಆ ಹಾಡು ಗುಡುಗಬೇಕು.”

V. ಈ ಕೆಳಗಿನ ಪ್ರಶ್ನೆಗೆ ಹತ್ತು ವಾಕ್ಯಗಳಲ್ಲಿ ಉತ್ತರಿಸಿ.        1×4=4

10. ರಾಜನಲ್ಲಿ ತಲೆದೋರಬಹುದಾದ ಹದಿನಾಲ್ಕು ದೋಷಗಳ ಬಗ್ಗೆ ವಿವರಿಸಿ.

 VI. ಕೆಳಗಿನ ಗಾದೆಗಳಲ್ಲಿ ಯಾವುದಾದರು ಒಂದನ್ನು ಗಾದೆಯ ಮಹತ್ವದೊಂದಿಗೆ ವಿಸ್ತರಿಸಿ ಬರೆಯಿರಿ.    1×3=3

11. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ

                        ಅಥವಾ

     ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ?

9th standard FA 1 question papers with key answer

I.

1. ಆ) ಗುಣಸಂಧಿ

2. ಈ) ಉಂಟುಮಾಡಲಿ

3. ಅ) ತಿನ್ನನು

II.

1.

ಬಲಾತ್ಕಾರದಿಂದ ಕೆಲಸ ಮಾಡಿಸಿಕೊಂಡು ಶೋಷಿಸುವ ಯಜಮಾನನಂತೆ ಅರಸನು ವರ್ತಿಸಿದರೆ ಜನರು ತಿರಸ್ಕರಿಸಬಹುದು.

2.

ನವಭಾವ, ನವಜೀವನ, ನವಶಕ್ತಿ ತುಂಬಿಸುವ ಹಾಡನ್ನು ಹಾಡಬೇಕು ಎಂದು ಕವಿ ಬಯಸುವರು.

3.

ಪಂಢರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರು ‘ವಾಣಿ’.

III.

1.

ಅಂಬೇರ ಬೆಟ್ಟದಲ್ಲಿ ಮೂರು ಅಂತಸ್ತಿನ ಅರಮನೆ ಇದೆ. ಈ ಅರಮನೆಯ ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲೇ ಕಾಣಿಸುತ್ತದೆ ಮೀರಾಬಾಯಿಯ ದೇವಾಲಯ. ಆಕೆ ಗಿರಿಧರನಾಗರನನ್ನು ಪೂಜಿಸಿದ ಸ್ಥಳವಿದು. ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ. ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ ಮತ್ತು ನವರಂಗಗಳಿವೆ.

2.

ಒಂದು ದಟ್ಟಕಾಡಿನಲ್ಲಿದ್ದ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ವಾಸವಾಗಿತ್ತು. ಜೋಡಿ ಪಾರಿವಾಳಗಳು ಒಮ್ಮೆ ಒಂದನ್ನೊಂದು ಹಗಲಿರುಳು ಬಿಟ್ಟಿರದೆ ಜೊತೆಗೂಡಿ ಬಾಳಿದವು. ಕಾಲಾಂತರದಲ್ಲಿ ಹೊದರಿನಲ್ಲಿ ಪುಟ್ಟ ಮರಿಗಳ ಮಧುರ ಸದ್ದು ಕೇಳಿತು. ಆ ಪುಟ್ಟ ಪಾರಿವಾಳಗಳ ಮಧುರವಾದ ಮಾತುಗಳನ್ನು ಕೇಳಿದ ಜೋಡಿ ಪಾರಿವಾಳಗಳಿಗೆ ಮತ್ತಷ್ಟು ಸಂತೋಷವಾಗುತ್ತದೆ.

IV.

1.

ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ’ ಕವನ ಸಂಕಲನದಿಂದ ಆಯ್ದ ‘ಹೊಸಹಾಡು’ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.

ಸಂದರ್ಭ:  ಈ ಮಾತನ್ನು ಕವಿ ಹೇಳಿದ್ದಾರೆ. ಜಾತಿ, ಕುಲ, ಮತ ಧರ್ಮಗಳ  ಪಾಠಗಳನ್ನು ಕಡಿದೊಗೆದು ಹಾಡನ್ನು ಹಾಡಬೇಕು. ಈ ಹಾಡು ಯುಗಯುಗಗಳಾಚೆ, ಲೋಕಲೋಕಗಳಾಚೆ ಕೇಳಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ : ಸಮಾಜದಲ್ಲಿರುವ ಜಾತಿ, ಕುಲ, ಮತ, ಧರ್ಮಗಳ ಪಾಠಗಳು ನಾಶವಾಗಿ ಮನುಜ ವೃತದ ಹಾಡು ಕೇಳಬೇಕು ಎಂಬ ಕವಿಯ ಭಾವನೆಯು ಸ್ವಾರಸ್ಯಕರವಾಗಿದೆ.

V.

1.

ರಾಜನಲ್ಲಿ ಸಂಭವಿಸಬಹುದಾದ ದೋಷಗಳು ಹದಿನಾಲ್ಕು. ಅವು ನಾಸ್ತಿಕಬುದ್ಧಿ, ಸುಳ್ಳು, ಸಿಟ್ಟು, ಅನವಧಾನ, ಚಟುವಟಿಕೆಯಿಲ್ಲದೆ ಕೆಲಸವನ್ನು ತಡಮಾಡುವುದು, ಪ್ರಾಜರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗುವುದು, ಮಂತ್ರಿಗಳೊಡನೆ ಸಮಾಲೋಚಿಸದೆ ರಾಜ್ಯಕಾರ್ಯಗಳಲ್ಲಿ ತಾನೊಬ್ಬನೇ ನಿರ್ಧಾರವನ್ನು ತೆಗೆದುಕೊಳ್ಳುವುದು. ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು, ನಿಶ್ಚಯಿಸಿದ ಕಾರ್ಯಗಳನ್ನು ಆರಂಭಿಸದೆ ಇರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿಡದೆ ಬಹಿರಂಗಪಡಿಸುವುದು, ಮಂಗಳಕರವಾದ ಶುಭಕಾರ್ಯವನ್ನು ಮಾಡದಿರುವುದು ಹಾಗೂ ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ – ಈ ಹದಿನಾಲ್ಕು ರಾಜದೋಷಗಳಿಗೆ ಅವಕಾಶವನ್ನು ಕೊಡಬೇಡ.

VI.

1. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ

ಮಕ್ಕಳ ವ್ಯಕ್ತಿತ್ವವನ್ನು ಹೇಗೆ ನಿರ್ಮಿಸಬೇಕು ಎಂಬುದನ್ನು ತಿಳಿಸುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿನಂತೆ ಭವಿಷ್ಯದಲ್ಲಿ ಸಮರ್ಥ ಸಮಾಜ ನಿರ್ಮಿಸುವ ವ್ಯಕ್ತಿಗಳನ್ನು ನಿರ್ಮಿಸುವುದು ತಂದೆ-ತಾಯಿ-ಹಿರಿಯರು-ನೆರೆಹೊರೆ ಹಾಗೂ ಶಿಕ್ಷಕರ ಕರ್ತವ್ಯವಾಗಿದೆ. ಆದ್ದರಿಂದ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಉತ್ತಮ ಆದರ ಗುಣಗಳನ್ನು, ಸೇವಾ ಮನೋಭಾವವನ್ನು, ದೇಶಪ್ರೇಮವನ್ನು ಬೆಳೆಸಬೇಕು. ಬೆಳೆದು ದೊಡ್ಡವರಾದ ಮೇಲೆ ಅಂಥವರನ್ನು ತಿದ್ದುವುದು ಕಷ್ಟವಾಗುತ್ತದೆ. ಚಿಕ್ಕವರಾಗಿದ್ದಾಗಲೇ ಕೆಲವು ಮಕ್ಕಳನ್ನು ತಿದ್ದಲು ಸಾಧ್ಯವಿರುವುದಿಲ್ಲ. ಗಿಡವಾಗಿರುವಾಗ ಬಗ್ಗಿಸಲು ಸಾಧ್ಯವಾಗದೆ ದೊಡ್ಡಮರವಾದ ಮೇಲೆ ಬಗ್ಗಿಸಿ ನೇರಮಾಡಲು ಸಾಧ್ಯವಿಲ್ಲವೋ ಹಾಗೇ ಅವರನ್ನು ತಿದ್ದುವುದು ಕಷ್ಟ. ಎಳೆವೆಯಲ್ಲಿ ಮಕ್ಕಳನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಲು ಪ್ರಯತ್ನಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ ಎಂಬುವುದು ಈ ಗಾದೆಯ ಆಶಯವಾಗಿದೆ.

Scroll to Top