Yedege Bidda Akshara question and answer

Yedege Bidda Akshara question and answer for class 10. Yedege Bidda Akshara notes for SSLC students. Edege bidda akshara notes.

In this post we are going to discuss notes of the lesson Yedege Bidda Akshara. Important question and answers from the lesson Yedege Bidda Akshara.

To get more video notes for class 10, visit our YouTube channel. This channel is very useful for SSLC exam preparation.

edege bidda akshara questions and answers

ಎದೆಗೆ ಬಿದ್ದ ಅಕ್ಷರ ಪಾಠದ ಪ್ರಶ್ನೋತ್ತರಗಳು

Yedege Bidda Akshara question and answer

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

1. ಇಂದಲ್ಲ – ನಾಳೆ ಫಲ ಕೊಡುವ ಅಂಶಗಳಾವುವು?

ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲಕೊಡುವ ಅಂಶಗಳಾಗಿವೆ.

2. ಮನೆ ಮಂಚಮ್ಮ ಯಾರು?

ಮನೆ ಮಂಚಮ್ಮ ಊರಿನ ಗ್ರಾಮದೇವತೆ.

3. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?

ಕವಿ ಸಿದ್ಧಲಿಂಗಯ್ಯ ಅವರು ಮನೆ ಮಂಚಮ್ಮ ಎಂಬ ಗ್ರಾಮದೇವತೆಯ ಕತೆ ಹೇಳಿದ್ದಾರೆ.

4. ಶಿವಾನುಭವ ಶಬ್ದಕೋಶ ‘ ಪುಸ್ತಕ ಬರೆದವರು ಯಾರು?

ಹಳಕಟ್ಟಿಯವರು ‘ ಶಿವಾನುಭವ ಶಬ್ದಕೋಶ ‘ ಎಂಬ ಪುಸ್ತಕವನ್ನು ಬರೆದಿದ್ದಾರೆ.

5. ವಚನಕಾರರಿಗೆ ಯಾವುದು ದೇವರಾಗಿತ್ತು?

ವಚನಕಾರರಿಗೆ ಅವರ ಪ್ರಜ್ಞೆಯೇ ದೇವರಾಗಿತ್ತು.

6. ಅಶೋಕ ಪೈ ಅವರ ವೃತ್ತಿ ಯಾವುದು?

ಶಿವಮೊಗ್ಗದ ಡಾ. ಅಶೋಕ ಪೈ ಅವರು ಒಬ್ಬ ಮನೋವೈದ್ಯರು.

7. ದೇವನೂರರ ‘ನನ್ನ ದೇವರು’ ಯಾರೆಂಬುದನ್ನು ಸ್ಪಷ್ಟಿಕರಿಸಿ.

ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ದೇವನೂರರು ನನ್ನ ದೇವರು ಎಂದಿದ್ದಾರೆ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?

ಶಿವಮೊಗ್ಗದ ಡಾ. ಅಶೋಕ ಪೈ ( ಮನೋವೈದ್ಯರು ) ಅವರು ಮೈಸೂರಿಗೆ ಬಂದಿದ್ದರು. ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು. ಏನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಷನ್‌ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಷನ್‌ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ.

2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು? ವಿವರಿಸಿ.

ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳುವಳಿಕೆ, ಜ್ಞಾನಮಾತ್ರ ಅಲ್ಲ ಅದು ಕ್ರಿಯೆಯ ಅನುಭವದಿಂದ ಒಡ ಮಾಡುವುದು. ಅದು ಕೇಳಿ ತಿಳಿದಿದ್ದಲ್ಲ, ಕ್ರಿಯೆಯಲ್ಲಿ ಮೂಡಿದ ತಿಳುವಳಿಕೆ. ಅದು ತರ್ಕವಲ್ಲ ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು.

edege bidda akshara notes

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಕವಿ ಸಿದ್ಧಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ.

ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ- ಒಂದಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ಕಾ ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು “ನನ್ ಮಕ್ಕಳಾ” ಎಂದು ಅಬ್ಬರ ಮಾಡುತ್ತಾಳೆ.

ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಲಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ

ನಡೆಯುತ್ತದೆ. ‘ಏನಯ್ಯಾ ಏನ್ ಮಾಡ್ತಾ ಇದ್ದೀರಿ?‘  “ನಿನಗೊಂದು ಗುಡಿಮನೆ ಕಡ್ತಾ ಇದ್ದೀವಿ ತಾಯಿ.” “ ಓಹೋ , ನನಗೇ ಗುಡಿಮನೆ ಕಡ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?‘ ‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ. ‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ‘ -ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!

ಈ) ಸಂದರ್ಭದೊಂದಿಗೆ ಸ್ವಾರಸ್ಯ ಬರೆಯಿರಿ.

1. “ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ.”

ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ಎದೆಗೆ ಬಿದ್ದ ಅಕ್ಷರ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ. ಈ ಮಾತನ್ನು ದೇವತೆ ಮಂಚಮ್ಮ ಹೇಳುತ್ತಾಳೆ.

ದೇವತೆ ಮಂಚಮ್ಮ ‘ಏನಯ್ಯಾ ಏನ್ ಮಾಡ್ತಾ ಇದ್ದೀರಿ?‘ ಎನ್ನುತ್ತಾಳೆ. “ನಿನಗೊಂದು ಗುಡಿಮನೆ ಕಡ್ತಾ ಇದ್ದೀವಿ ತಾಯಿ.‘ “ಓಹೋ, ನನಗೇ ಗುಡಿಮನೆ ಕಡ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?” ‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ. ‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’ ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!

2. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.”

ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ಎದೆಗೆ ಬಿದ್ದ ಅಕ್ಷರ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ. ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಹೇಳಿದ್ದಾರೆ. ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ.

ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕ೦ಪನ ಉಂಟು ಮಾಡುತ್ತಿರುತ್ತದೇನೊ. ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ.

3. “ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.”

ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ಎದೆಗೆ ಬಿದ್ದ ಅಕ್ಷರ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ. ಈ ಮಾತನ್ನು ಲೇಖಕರು ಹೇಳಿದ್ದಾರೆ. ವಚನಕಾರರ ದೃಷ್ಟಿಯಲ್ಲಿ ಅರಿವು ಎಂಬ ವಿಷಯವನ್ನು ವಿವರಿಸುವ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಲಾಗಿದೆ.

Edege bidda akshara lesson question answers

4. “ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.”

ಈ ವಾಕ್ಯವನ್ನು ದೇವನೂರ ಮಹಾದೇವ ವಿರಚಿತ ‘ಎದೆಗೆ ಬಿದ್ದ ಅಕ್ಷರ‘ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದ ಒಂದು ಭಾಗವಾಗಿರುವ ಗದ್ಯಭಾಗದಿಂದ ಆಯ್ಕೆ ಮಾಡಲಾಗಿದೆ. ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಹೇಳಿದ್ದಾರೆ. ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ. ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ. ಆಗ ಮಾತ್ರವೇ ಅದು ಜಾಗತೀಕರಣ.

Extra questions and answer from Yedege Bidda Akshara

1. ಪ್ರಸಿದ್ದ ಮನೋವೈದ್ಯರಾಗಿದ್ದ ಡಾ. ಅಶೋಕ ಪೈ ಯಾವ ಊರಿನವರಾಗಿದ್ದರು?

ಉತ್ತರ: ಪ್ರಸಿದ್ದ ಮನೋವೈದ್ಯರಾಗಿದ್ದ ಡಾ. ಅಶೋಕ ಪೈ ಅವರು ಶಿವಮೊಗ್ಗದವರು.

2. ರಷ್ಯಾದ ಮಹಾಕವಿ ಟಾಲಸ್ಟಾಯ್ ಬರೆದ ಮೇರು ಕೃತಿ ಯಾವುದು?

ಉತ್ತರ: ರಷ್ಯಾದ ಮಹಾಕವಿ ಟಾಲಸ್ಟಾಯ್ ಬರೆದ ಮೇರು ಕೃತಿ ‘ಯುದ್ದ ಮತ್ತು ಶಾಂತಿ’.

3. ಮನೆಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ?

ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.

4.ವಚನಕಾರರು ತಮ್ಮ ಕಷ್ಟ ಸುಖ, ದುಃಖ ದುಮ್ಮಾನ, ಏಳುಬೀಳುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತಿದ್ದರು?

ವಚನಕಾರರು ತಮ್ಮ ಕಷ್ಟ ಸುಖ, ದುಃಖ ದುಮ್ಮಾನ, ಏಳುಬೀಳುಗಳನ್ನು ತಮ್ಮ ಪ್ರತಿಜ್ನೆ  ಮುಂದೆ ಹೇಳಿಕೊಳ್ಳುತಿದ್ದರು .

5. ನಮ್ಮೊಳಗೆ ಯಾವುದನ್ನ ಎಚ್ಚರಗೊಳಿಸಬೇಕಾಗಿದೆ?

ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.

6. ದೇವನೂರ ಮಹಾದೇವ ಅವರು ಗುರುತಿಸಿದ ವಚನಕಾರರ ಪ್ರಜ್ಞೆಯ ಬಗ್ಗೆ ತಿಳಿಸಿ.

ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು  ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರದೇ ಆದ ಇಷ್ಟ ಇದ್ದಿತು. ಅದೇ ಪ್ರಜ್ಞೆ, ಅಂದರೆ “ ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ ಕಷ್ಟ ಸುಖ, ದುಃಖ ದುಮ್ಮಾನ, ಏಳುಬೀಳುಗಳನ್ನು  ಅವರ ಉತ್ಕಟ ಇಕ್ಕಟ್ಟುಗಳನ್ನು  ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ ಕೊಟ್ಟರು.

Watch this video for the explanation of Yedege Bidda Akshara question and answer for class 10.