SSLC Social Science Question Bank 1. We will learn 10th class Social Science important notes for exam. Study material for 10th standard exam preparation.
Study 10th class Social Science question bank. We have provided most expected Social Science questions for SSLC exam. 10th class important questions and answers.
To get more video notes for SSLC, visit our YouTube channel. This channel is very useful for 10th class exam preparation.
Click here to download question bank
Watch this video for the explanation of SSLC Social Science Question Bank 1.
10th class Social Science question bank
1. ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಳ್ಳಲು ಕಾರಣವೇನು?
ಏಷ್ಯಾ ಮತ್ತು ಯುರೋಪಿನ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿದ್ದರಿಂದ ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
2. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂದರೇನು?
ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ.ಇದನ್ನು ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವರು.
3. ಖಾಯಂ ಜಮೀನ್ದಾರಿ ಪದ್ಧತಿ ಎಂದರೇನು?
ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಪಡೆಯಲು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದ ಹೊಸ ಕಂದಾಯ ಪದ್ಧತಿಯನ್ನು ಖಾಯಂ ಜಮೀನ್ದಾರಿ ಪದ್ಧತಿ ಎನ್ನುವರು.
4. ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ಏಕೆ ಸಿಡಿದೆದ್ದರು?
ಹಲಗಲಿಯ ಬೇಡರು ತಲೆತಲಾಂತರಗಳಿಂದ ಬೇಟೆಯಾಡುವ ಉದ್ದೇಶಕ್ಕೆ ಮುಕ್ತವಾಗಿ ಬಳಸುತ್ತಿದ್ದ ಬಂದೂಕುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ಸಿದ್ಧರಿರಲಿಲ್ಲ. ಆದ್ದರಿಂದ ಬ್ರಿಟಿಷರ ವಿರುದ್ಧ ಸಿಡೆದೆದ್ದರು.
5. “ಬಿಳಿಯನ ಮೇಲಿನ ಹೊರೆ” ಸಿದ್ಧಾಂತ ಎಂದರೇನು?
ಬ್ರಿಟಿಷರು ತಮ್ಮನ್ನು ನಾಗರಿಕರು ಎಂದು ಚಿತ್ರಿಸಿಕೊಳ್ಳುತ್ತಾ ತಾವು ಇಲ್ಲಿಗೆ ಬಂದಿರುವುದೇ ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು ಎನ್ನುವ ಸಿದ್ದಾಂತವನ್ನು “ಬಿಳಿಯನ ಮೇಲಿನ ಹೊರೆ” ಎನ್ನುವರು.
6. ಕಾರ್ಪೋರೇಟ್ ತಂತ್ರಗಾರಿಕೆ ಎಂದರೇನು?
ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಪೂರ್ವ ನಿರ್ಧಾರಿತ ಗುರಿಗಳನ್ನು ತಲುಪಲು ಕಂಪೆನಿಯು ಕೈಗೊಳ್ಳುವ ವಿವಿಧ ರೀತಿಯ ಆಡಳಿತಾತ್ಮಕ ಪ್ರಯತ್ನಗಳನ್ನು ಕಾರ್ಪೋರೇಟ್ ತಂತ್ರಗಾರಿಕೆ ಎಂದು ಕರೆಯಲಾಗುತ್ತದೆ.
7. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆಗೆ ಕಾರಣವಾದ ವಿಷಯಗಳು ಯಾವುವು?
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆಗೆ ಕಾರಣವಾದ ವಿಷಯಗಳು:
a. ಜಮ್ಮು-ಕಾಶ್ಮೀರ
b. ಭಯೋತ್ಪಾದನೆ
c. ನೀರಿನ ಹಂಚಿಕೆ
8. ಭಾರತದ ಸಂವಿಧಾನದ 86ನೇ ತಿದ್ದುಪಡಿಯ ಮಹತ್ವವೇನು?
6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಸಂವಿಧಾನದ ವಿಧಿ 21ಎ ನಲ್ಲಿ ತಿಳಿಸಲಾಗಿದೆ.
9. ಸಂಘಟಿತ ದುಡಿಮೆಯ ವಲಯ ಎಂದರೇನು?
ಯಾವ ವಲಯವು ಸರ್ಕಾರದಲ್ಲಿ ನೋಂದಣಿಯಾಗಿ ಕಾನೂನಿನ ಚೌಕಟ್ಟಿನೊಳಗೆ, ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸ, ಉದ್ಯೋಗ ಭರವಸೆ, ನಿಗದಿತ ವೇತನವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ನಿಗದಿಯಾಗಿರುತ್ತದೆಯೋ ಅದನ್ನು ಸಂಘಟಿತ ದುಡಿಮೆಯ ವಲಯವೆಂದು ಕರೆಯಲಾಗುತ್ತದೆ.
10. ಉತ್ತರ ಮೈದಾನವನ್ನು ಸಂಚಯನ ಮೈದಾನ ಎಂದು ಕರೆಯುತ್ತಾರೆ ಏಕೆ?
ಉತ್ತರ ಭಾರತದ ಮೈದಾನವು ನದಿಗಳು ಹೊತ್ತು ತಂದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿರುವುದರಿಂದ ಇದನ್ನು ಸಂಚಯನ ಮೈದಾನ ಎಂದು ಕರೆಯುತ್ತಾರೆ.
11. ಮಣ್ಣಿನ ಸಂರಕ್ಷಣೆಯ ವಿಧಾನಗಳು ಯಾವುವು?
ಅರಣ್ಯಪೋಷಣೆ ಮತ್ತು ಮರು ಆರಣ್ಯಕರಣ. ಅತಿಯಾಗಿ ಮೇಯಿಸುವುದನ್ನು ನಿಯಂತ್ರಿಸುವುದು. ಸಮೋನ್ನತಿ ಬೇಸಾಯ. ಚೆಕ್ ಡ್ಯಾಮ್ಗಳ ನಿರ್ಮಾಣ.
12. ಸ್ವಾಭಾವಿಕ ಸಸ್ಯವರ್ಗ ಎಂದರೇನು?
ಒಂದು ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಬೆಳೆದಿರುವ ಎಲ್ಲ ಬಗೆಯ ಸಸ್ಯ ಸಮೂಹವನ್ನು ಅರಣ್ಯಗಳು ಅಥವಾ ಸ್ವಾಭಾವಿಕ ಸಸ್ಯವರ್ಗವೆಂದು ಕರೆಯುವರು.
13. ಕೃಷಿ ವಲಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳೂ ಏನು?
ಸಾವಯುವ ಕೃಷಿ ವಿಧಾನಕ್ಕೆ ಪ್ರೋತ್ಸಾಹ. ಜೈವಿಕ ಗೊಬ್ಬರ ಬಳಕೆ. ಜೈವಿಕ ಕ್ರಿಮಿನಾಶಕಗಳ ಬಳಕೆ. ಪರಿಸರ ಸ್ನೇಹಿ ತಂತ್ರಜ್ಞಾನ ಬಳಕೆ. ಸುಸ್ಥಿರ ಕೃಷಿ ವಿಶಾನ ಅಳವಡಿಕೆ. ಮಾರುಕಟ್ಟೆ ಸುಧಾರಣೆ.
10th class Social Science important questions
14. ಭಾರತದಲ್ಲಿ ಹಣಕಾಸು ವರ್ಷವು ಯಾವಾಗ ಆರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ?
ಭಾರತದಲ್ಲಿ ಹಣಕಾಸು ವರ್ಷವು ಏಪ್ರಿಲ್ 1ರಂದು ಪ್ರಾರಂಭವಾಗಿ ಅದರ ಮುಂದಿನ ವರ್ಷದ ಮಾರ್ಚ್ 31ಕ್ಕೆ ಮುಕ್ತಾಯವಾಗುತ್ತದೆ.
15. ಕ್ರಾಂತಿಕಾರಿ ನಾಯಕರುಗಳನ್ನು ಹೆಸರಿಸಿ
ವಿ.ಡಿ. ಸಾವರ್ಕರ್, ಅರಬಿಂದೋ ಘೋಷ್, ಅಶ್ವಿನಿಕುಮಾರದತ್ತ, ರಾಜನಾರಾಯಣ ಬೋಸ್, ರಾಜಗುರು, ರಾಸ್ ಬಿಹಾರಿ ಬೋಸ್, ಮ್ಯಾಡಮ್ ಕಾಮಾ, ಖುದಿರಾಮ್ ಬೋಸ್, ರಾಮ್ ಪ್ರಸಾದ ಬಿಸ್ಮಿಲ್, ಅಶ್ಚಯಿಲ್ಲಾಖಾನ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಜತಿನ್ ದಾಸ್.
16. ವರ್ಣಭೇದ ನೀತಿಯು ಮಾನವತ್ವವಾದಕ್ಕೆ ವಿರೋಧವಾದುದು ಇದನ್ನು ನಿಮ್ಮ ದೃಷ್ಟಿಕೋನದಲ್ಲಿ ಸಮರ್ಥಿಸಿ.
ಒಂದು ಜನಾಂಗದ ಅಥವಾ ವರ್ಣದ ಜನಸಮುದಾಯ ಇನ್ನೊಂದು ಜನಾಂಗ ಅಥವಾ ವರ್ಣದ ಜನಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಕಡೆಗಣಿಸುವ ಅಥವಾ ವಿರೋಧಿಸುವ ನೀತಿಗೆ ವರ್ಣಭೇದ ನೀತಿ ಎಂದು ಕರೆಯಲಾಗುವುದು. ಈ ವರ್ಣಭೇದ ನೀತಿಯು ಅಮಾನವೀಯ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗುತ್ತದೆ.
17. ನರ್ಮದಾ ಬಚಾವೋ ಆಂದೋಲನವನ್ನು ವಿವರಿಸಿ.
ಗುಜರಾತ್ ರಾಜ್ಯದ ಸರ್ದಾರ್ ಸರೋವರ ಯೋಜನೆಯಡಿಯಲ್ಲಿ ನರ್ಮದಾ ನದಿಗೆ ಕಟ್ಟಲಾದ ಆಣೆಕಟ್ಟು ನಿರ್ಮಾಣ ಅಲ್ಲಿನ ಸ್ಥಳೀಯ ಜನರನ್ನು ಮತ್ತು ಬುಡಕಟ್ಟು ಜನರನ್ನು ನಿರ್ಗತಿಕರಣಕ್ಕೆ ಒಳಪಡಿಸಿತ್ತು. ಅರಣ್ಯ ನಾಶ, ಪರಿಸರ ನಾಶ, ಜೀವ ಸಂಕುಲಗಳಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ತಿಳಿದು ಅವುಗಳನ್ನು ಸಂರಕ್ಷಣೆ ಮಾಡಬೇಕು ಎನ್ನುವ ಆಶಯದಿಂದ ‘ನರ್ಮದಾ ಬಚಾವೋ ಆಂದೋಲನ’ವನ್ನು ಆರಂಭಿಸಲಾಯಿತು.
18. ಖಾರೀಫ್ ಬೇಸಾಯ ಎಂದರೇನು?
ನೈಋತ್ಯ ಮಾನ್ಸೂನ್ ಮಾರುತಗಳ ಅವಧಿಯ ಬೇಸಾಯವನ್ನೇ ಖಾರೀಫ್ ಬೇಸಾಯ (ಮುಂಗಾರು ಬೇಸಾಯ) ಎನ್ನುವರು.
19. ಸಾರಿಗೆ ಮತ್ತು ಸಂಪರ್ಕ ಮಾಧ್ಯಮ ಎಂದರೇನು?
ಸರಕು, ಸೇವೆ ಮತ್ತು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದನ್ನು ‘ಸಾರಿಗೆ’ ಎನ್ನುವರು. ಒಬ್ಬರಿಂದ ಮತ್ತೊಬ್ಬರಿಗೆ ಅಥವಾ ಸ್ಥಳದಿಂದ ಸ್ಥಳಕ್ಕೆ ಸಮಾಚಾರವನ್ನು ವಿನಿಮಯ ಮಾಡಿಕೊಳ್ಳುವುದನ್ನು ಸಂಪರ್ಕ ಮಾಧ್ಯಮ ಎನ್ನುವರು.
20. ಮುಂಬಯಿಯನ್ನು “ಭಾರತದ ಕಾಟನೊಪೊಲೀಸ್’ ಮತ್ತು ‘ಭಾರತದ ಮಾಂಚೆಸ್ಟರ್’ ಎಂದು ಏಕೆ ಕರೆಯುವರು?
ಮುಂಬಯಿ ನಗರವು ಪ್ರಸಿದ್ಧ ಹತ್ತಿ ಜವಳಿ ಉತ್ಪಾದನಾ ಕೇಂದ್ರ ಆದ್ದರಿಂದ ಮುಂಬಯಿಯನ್ನು “ಭಾರತದ ಕಾಟನೊಪೊಲೀಸ್’ ಮತ್ತು ‘ಭಾರತದ ಮಾಂಚೆಸ್ಟರ್’ ಎಂದು ಕರೆಯುವರು.