SSLC Social Science FA 4 question paper 2022-23. Download 10th class FA 4 question papers. Social Science FA 4 question papers for class 10.
In this post we have uploaded 10th standard FA 4 question papers with key answer. Formative assessment question papers for SSLC.
To get more video notes for class 10, visit our YouTube channel. This channel is very useful for SSLC exam preparation.
Subject: Social Science
Class: 10th
Medium: Kannada
State: Karnataka
Cost: Free
Sub-topic: Question paper with key
File type: PDF
Answers: Given key answer
Share: Sharable link is given
Copyright: Protected
Download: Given download link
Year: 2022-23
Board: Karnataka KSEEB
Print Enable: Yes
Editable Text: No
Copy Text: No
Scanned Copy: Yes
Password Encrypted: No
File Size Reduced: No
Quality: High
Download Link Available: Yes
File View Available: Yes
Click here to download SSLC Social Science FA 4 question paper
Click here to download key answer
Watch this video for the explanation of SSLC Social Science FA 4 question paper 2022-23.
Social Science FA 4 question papers for class 10
ವಿಷಯ: ಸಮಾಜ ವಿಜ್ಞಾನ ರೂಪಣಾತ್ಮಕ ಪರೀಕ್ಷೆ ೪ ಅಂಕಗಳು : ೨೦
ತರಗತಿ: ೧೦ನೇ ಸಮಯ: ೪೦ ನಿಮಿಷಗಳು
I. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿಉತ್ತರಿಸಿ. 4×1=4
1. ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?
2. ಭಾರತದ ಭೂಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ ರಾಷ್ಟ್ರ ಯಾವುದು?
3. ಭೂ ಕುಸಿತ ಎಂದರೇನು?
4. ಭಾರತದಲ್ಲಿ ಆಯ-ವ್ಯಯವನ್ನು ಮಂಡಿಸುವವರು ಯಾರು?
II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ. 3×2=6
5. ನೀರಾವರಿ ಎಂದರೇನು? ಭಾರತದ ಪ್ರಮುಖ ನೀರಾವರಿ ವಿಧಗಳನ್ನು ತಿಳಿಸಿ,
ಅಥವಾ
ಸಂಘಟಿತ ದುಡಿಮೆಯ ವಲಯ ಎಂದರೇನು?
6. ಮೂರನೆಯ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣಗಳು ಯಾವುವು?
7. ಪಂಚವಾರ್ಷಿಕ ಯೋಜನೆಗಳ ಉದ್ದೇಶಗಳಗಳನ್ನು ಬರೆಯಿರಿ.
ಅಥವಾ
ನಾಜಿ ಸಿದ್ದಾಂತವು ಜರ್ಮನಿಯನ್ನು ಹಾಳು ಮಾಡಿತು ಹೇಗೆ? ವಿವರಿಸಿ.
III. ಈ ಕೆಳಗಿನ ಪ್ರಶ್ನೆಗಳಿಗೆ ಐದುಅಥವಾ ಆರುವಾಕ್ಯಗಳಲ್ಲಿ ಉತ್ತರಿಸಿ. 2×3=6
8. ವಿಶ್ವಸಂಸ್ಥೆಯ ಉದ್ದೇಶಗಳನ್ನು ಪಟ್ಟಿ ಮಾಡಿರಿ.
9. ಆವರ್ತ ಮಾರುತಗಳ ಪರಿಣಾಮಗಳು ಯಾವುವು?
ಅಥವಾ
ಸಾರ್ವಜನಿಕ ವೆಚ್ಚದ ಏರಿಕೆಗೆ ಕಾರಣಗಳನ್ನು ವಿವರಿಸಿ.
V. ಭಾರತದ ನಕ್ಷೆ ಬಿಡಿಸಿ ಭಾಗಗಳನ್ನು ಗುರುತಿಸಿ. 1×4=4
10.
A) ಮನ್ನಾರ್ ಖಾರಿ B) ಕಾವೇರಿ ನದಿ C) ಸುಂದರ್ ಘಡ್ D) ಹಲ್ದಿಯಾ ಬಂದರು
10th standard FA 4 question papers with key answer
ವಿಷಯ: ಸಮಾಜ ವಿಜ್ಞಾನ ರೂಪಣಾತ್ಮಕ ಪರೀಕ್ಷೆ ೪ ಅಂಕಗಳು : ೨೦
ತರಗತಿ: ೧೦ನೇ KEY ANSWER ಸಮಯ: ೪೦ ನಿಮಿಷಗಳು
I. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿಉತ್ತರಿಸಿ. 4×1=4
1. ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ರಾಜಾ ರಾಮಮೋಹನ್ ರಾಯರು.
2. ಭಾರತದ ಭೂಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ ರಾಷ್ಟ್ರ ಚೀನಾ.
3. ಪರ್ವತಗಳ ಅಥವಾ ಬೆಟ್ಟಗಳ ಮೇಲ್ಭಾಗದಿಂದ ಕಡಿದಾದ ಇಳಿಜಾರಿನಗುಂಟ ಕೆಳಕ್ಕೆ ಜಾರುವ ಭೂರಾಶಿಗೆ ಭೂ ಕುಸಿತಗಳೆನ್ನುವರು.
4. ಹಣಕಾಸು ಸಚಿವರು
II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ. 3×2=6
5. ಕೃಷಿ ಉದ್ದೇಶಕ್ಕೆ ಕೃತಕವಾಗಿ ನೀರು ಪೂರೈಕೆ ಮಾಡುವುದನ್ನು ‘ನೀರಾವರಿ’ ಎಂದು ಕರೆಯಲಾಗಿದೆ. ಭಾರತದಲ್ಲಿ ಬಾವಿ, ಕಾಲುವೆ ಮತ್ತು ಕೆರೆ ನೀರಾವರಿ ವಿಧಾನಗಳು ರೂಢಿಯಲ್ಲಿವೆ.
ಅಥವಾ
ಯಾವ ವಲಯವು ಸರ್ಕಾರದಲ್ಲಿ ನೋಂದಣಿಯಾಗಿ ಕಾನೂನಿನ ಚೌಕಟ್ಟಿನೊಳಗೆ, ದುಡಿಯುವ ಕಾರ್ಮಿಕರಿಗೆ ನಿಗದಿತ ಕೆಲಸ, ಉದ್ಯೋಗ ಭರವಸೆ, ನಿಗದಿತ ವೇತನವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ನಿಗದಿಯಾಗಿರುತ್ತದೆಯೋ ಅದನ್ನು ಸಂಘಟಿತ ದುಡಿಮೆಯ ವಲಯವೆಂದು ಕರೆಯಲಾಗುತ್ತದೆ.
6. ಈ ಯುದ್ಧಕ್ಕೆ ನೇರ ಕಾರಣ ಯಾವುದೆಂದರೆ ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ. ಆ ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು ಆತನು ಡಚ್ಚರಿಂದ ಆಯಕೋಟಾ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು. ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತು.
7. ಉತ್ಪಾದನೆಯನ್ನು ಗರಿಷ್ಟ ಮಟ್ಟಕ್ಕೆ ಹೆಚ್ಚಿಸುವುದು. ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು. ಆರ್ಥಿಕ ಅಸಮಾನತೆಗಳನ್ನು ಕಡಿಮೆ ಮಾಡುವುದು. ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
ಅಥವಾ
ಜಗತ್ತಿನಲ್ಲಿ ಶ್ರೇಷ್ಠವಾದ ಜನಾಂಗವೆಂದರೆ ಆರ್ಯ ಜರ್ಮನ್ ಜನಾಂಗ. ಜಗತ್ತನ್ನು ಆಳ್ವಿಕೆ ಮಾಡಲು ಕೇವಲ ಜರ್ಮನ್ನರು ಮಾತ್ರ ಯೋಗ್ಯರು ಉಳಿದ ಜನಾಂಗಗಳು ಕೇವಲ ಆಳಿಸಿಕೊಳ್ಳಲು ಮಾತ್ರ ಯೋಗ್ಯರು. ಜರ್ಮನ್ನರ ಎಲ್ಲಾ ಸಮಸ್ಯೆಗಳಿಗೆ ಯೆಹೂದಿಗಳೇ ಕಾರಣ.
III. ಈ ಕೆಳಗಿನ ಪ್ರಶ್ನೆಗಳಿಗೆ ಐದುಅಥವಾ ಆರುವಾಕ್ಯಗಳಲ್ಲಿ ಉತ್ತರಿಸಿ. 2×3=6
8. ಅಂತರರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಯನ್ನು ಕಾಪಾಡುವುದು. ರಾಷ್ಟ್ರಗಳ ಮಧ್ಯೆ ಪರಸ್ಪರ ಮೈತ್ರಿಯನ್ನು ಬೆಳೆಸುವುದು. ಮಾನವನ ಮೂಲಭೂತ ಹಕ್ಕುಗಳ ಬಗೆಗೆ ನಂಬುಗೆಯನ್ನು ಹೆಚ್ಚಿಸುವುದು. ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಥವಾ ಮಾನವೀಯ ನೆಲೆಯ ಸಮಸ್ಯೆಗಳಿಗೆ ಅಂತರರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡು ಕೊಳ್ಳುವುದು.
9. ಉಷ್ಣವಲಯದ ಆವರ್ತಮಾರುತಗಳು ಬಹಳ ವಿನಾಶಕಾರಿಯಾದವು. ಅವು ಸಾವು ಮತ್ತು ಆಸ್ತಿಗಳಿಗೆ ಹಾನಿಯನ್ನುಂಟುಮಾಡುತ್ತವೆ. ಕಟ್ಟಡಗಳಿಗೆ ಧಕ್ಕೆ, ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳನ್ನು ಅಸ್ತವ್ಯಸ್ತಗೊಳಿಸುತ್ತವೆ. ವಿದ್ಯುತ್ ಸರಬರಾಜಿಗೆ ಅಡಚಣೆ, ಬೆಳೆಗಳು, ಸ್ವಾಭಾವಿಕ ಸಸ್ಯವರ್ಗ, ಪ್ರಾಣಿ ಸಂಕುಲ ಮೊದಲಾದವುಗಳಿಗೂ ಹಾನಿಯನ್ನುಂಟುಮಾಡುವವು.
ಅಥವಾ
ಇಪ್ಪತ್ತನೆಯ ಶತಮಾನದಲ್ಲಿ ಸರ್ಕಾರದ ಪಾತ್ರಗಳ ವಿಸ್ತಾರವು ಅಧಿಕಗೊಂಡಿದ್ದರಿಂದ ಸಾರ್ವಜನಿಕ ವೆಚ್ಚವೂ ಏರಿಕೆಯಾಗಿದೆ. ಸಾರ್ವಜನಿಕ ವೆಚ್ಚವು ಆರ್ಥಿಕ ಅಭಿವೃದ್ಧಿಯನ್ನು ಪೋಷಿಸುವ ಸೌಕರ್ಯಗಳನ್ನು ಸೃಷ್ಟಿಸಿ ಹೊರೆಯಬೇಕಾಗುತ್ತದೆ. ಅದು ಬಂಡವಾಳ ಹೂಡಿಕೆಗೆ ಇರುವ ವಾತಾವರಣವನ್ನು ಸುಧಾರಿಸಬೇಕಾಗುತ್ತದೆ. ಉಳಿತಾಯ, ಹೂಡಿಕೆ ಮತ್ತು ಆವಿಷ್ಕಾರಗಳಿಗೆ ಉತ್ತೇಜಕಗಳನ್ನು ಒದಗಿಸಬೇಕಾಗುತ್ತದೆ.
V. ಭಾರತದ ನಕ್ಷೆ ಬಿಡಿಸಿ ಭಾಗಗಳನ್ನು ಗುರುತಿಸಿ. 1×4=4
10.