Shreshta Bharatiya Chintanegalu questions and answers

Shreshta Bharatiya Chintanegalu questions and answers for class 10. SSLC Kannada notes. Shreshta Bharatiya Chintanegalu notes.

In this post we have discussed notes of the lesson Shreshta Bharatiya Chintanegalu. Shreshta Bharatiya Chintanegalu question and answer. Shreshta Bharatiya Chintanegalu for class 10. 10ನೇ ತರಗತಿ ಶ್ರೇಷ್ಠ ಭಾರತೀಯ ಚಿಂತನೆಗಳು ಕನ್ನಡ ನೋಟ್ಸ್‌.

To get more video notes for class 10, visit our YouTube channel. This channel is very useful for SSLC exam preparation.

Shreshta Bharatiya Chintanegalu questions and answers

Notes of the lesson Shreshta Bharatiya Chintanegalu

ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠದ ಪ್ರಶ್ನೆ ಹಾಗು ಉತ್ತರಗಳು

Shreshta Bharatiya Chintanegalu questions and answers

) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಧರ್ಮ ಎಂದು ನಮ್ಮ ಪರಂಪರೆ ಯಾವುದನ್ನು ಒಕ್ಕಣಿಸಿದೆ?

ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸುವ ಪ್ರಯತ್ನ ಮಾಡದಿರಲು ಸಾಧ್ಯವಿಲ್ಲ . ಇಂಥ ಪ್ರಯತ್ನವನ್ನೇ ‘ ಧರ್ಮ ‘ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ .

2. ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ಯಾವುದು?

ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ‘ಯಜ್ಞ.’

3. ಬಾಳು ಹಸನಾಗಬೇಕಾದರೆ ಯಾವುದನ್ನು ಮೀರಬೇಕು?

ಬಾಳು ಹಸನಾಗಬೇಕಾದರೆ ಜಿಪುಣತನವನ್ನು ಮೀರಬೇಕು.

4. ಯಜ್ಞ ಎಂಬ ಶಬ್ದಕ್ಕೆ ಏನೇನು ಅರ್ಥಸ್ವಾರಸ್ಯಗಳಿವೆ ?

ಯಜ್ಞಕ್ಕೆ ‘ಒಟ್ಟು ಸೇರುವಿಕೆ’, ‘ಹಂಚಿಕೊಂಡು ಬಾಳುವಿಕೆ‘, ‘ತ್ಯಾಗ ಮಾಡುವಿಕೆ‘ ಎಂಬೆಲ್ಲ ಅರ್ಥ ಸ್ವಾರಸ್ಯಗಳಿವೆ.

5. ಅನ್ನದ ವಿಷಯದಲ್ಲಿ ವೇದ ಏನು ಹೇಳಿದೆ?

ಅನ್ನದ ವಿಷಯದಲ್ಲಿ ವೇದವು “ಮನುಷ್ಯಾ ಅನ್ನಗತಪ್ರಾಣಾ!” ಎಂದು ಹೇಳಿದೆ.

6. ಪುರುಷಾರ್ಥ ಎಂದರೆ ಏನೆಂದು ಲೇಖಕರ ಅಭಿಪ್ರಾಯ?

ನಮ್ಮೊಳಗಿನ ಆತ್ಮತತ್ತ್ವದ ಪ್ರಾಪ್ತಿಯ ಪರಿಯೇ ಪುರುಷಾರ್ಥ. ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ಪುರುಷಾರ್ಥ ಎಂಬುದು ಲೇಖಕರ ಅಭಿಪ್ರಾಯವಾಗಿದೆ.

7. ಆಚಾರವು ಯಾವುದಕ್ಕೆ ಸಂಬಂಧಿಸಿದೆ?

ಆಚಾರವು ಮಾನವರ ಒಳಗಣ ಶಿಸ್ತಿಗೆ ಸಂಬಂಧಿಸಿದೆ.

8. ಯಾವುದು ಸ್ವಧರ್ಮ ಎಂದು ಲೇಖಕರು ಹೇಳುತ್ತಾರೆ?

ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ ಎಂದು ಲೇಖಕರು ಹೇಳಿದ್ದಾರೆ.

9. ಸ್ವಧರ್ಮದ ವಿಷಯದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಯಾವುದು?

ಸ್ವಧರ್ಮದ ವಿಷಯದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಪ್ರತಿಯೊಬ್ಬ ವ್ಯಕ್ತಿಯ ಒಳಗಿನ ನಿಶ್ಚಯ.

10. ಮನಸ್ಸಿನ ನಿಜವಾದ ಉನ್ನತಿಯನ್ನು ತೋರುವ ಅಂಶ ಯಾವುದು?

ತ್ಯಾಗವನ್ನು ಮಾಡಿಯೂ ಪಶ್ಚಾತ್ತಾಪ ಪಡೆದಿರುವುದು ನಿಜವಾದ ಮನಸ್ಸಿನ ಉನ್ನತಿಯಾಗಿದೆ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಋತ ಎಂದರೇನು?

ಋತದ ಅರಿವಾದ ಕೂಡಲೆ ನಾವು ಸತ್ಯಕ್ಕೆಷ್ಟು ಋಣಿಗಳಾಗಿದ್ದೇವೆಂಬ ಪ್ರಜ್ಞೆ ಮೂಡುತ್ತದೆ . ನಲ್ಲಿ ತಿರುಗಿಸಿದೊಡನೆ ನೀರು ಬರುವುದು ಅಸ್ತಿತ್ವವಾದರೆ ಹೀಗೆ ನೀರು ಬರಲು ವಿಜ್ಞಾನ – ತಂತ್ರಜ್ಞಾನಗಳ ಮಾನವ ವ್ಯವಸ್ಥೆ ಹಾಗೂ ಇದಕ್ಕೂ ಮೂಲವೆನಿಸಿದ ಪ್ರಕೃತಿಯ ಭಾಗವಾದ ಕಡಲುಗಳು , ಮುಗಿಲುಗಳು, ಮಳೆ – ಗಾಳಿಗಳು, ರವಿಕಿರಣಗಳು, ಗಿಡ – ಮರಗಳೇ ಮೊದಲಾದ ಅದೆಷ್ಟು ದೊಡ್ಡ ವ್ಯವಸ್ಥೆ ದುಡಿಯುತ್ತದೆ. ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ.

2. ಋಣಕ್ಕೂ ಧರ್ಮಕ್ಕೂ ಇರುವ ಸಂಬಂಧವೇನು?

ಪ್ರಕೃತಿಯ ಯಾವುದೇ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ . ಈ ಅರಿವು ಯಾರನ್ನೇ ಆದರೂ ಇಡೀ ವ್ಯವಸ್ಥೆಗೆ ಕೃತಜ್ಞರಾಗಿರುವಂತೆ ಮಾಡುತ್ತದೆ. ಈ ಕೃತಜ್ಞತೆಯ ಭಾವವೇ ಪ್ರಜ್ಞೆ. ಒಮ್ಮೆ ನಾವು ನಮ್ಮ ಸುತ್ತಲಿನ ಜತ್ತಿನ ವ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನೆ ಇರಲಾಗುವುದಿಲ್ಲ. ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿಯು ಅದನ್ನು ತೀರಿಸುವ ಪ್ರಯತ್ನ ಮಾಡದೆ ಇರುವುದಿಲ್ಲ. ಇಂಥ ಪ್ರಯತ್ನವನ್ನೇ ಧರ್ಮ ಎಂದು ನಮ್ಮ ಪರಂಪರೆ ತಿಳಿಸಿದೆ.

Shreshta Bharatiya Chintanegalu questions and answers

3. ಯಜ್ಞಕ್ಕಿರುವ ಎರಡು ಮುಖಗಳು ಯಾವುವು?

ಪ್ರತಿಫಲದ ಅಪೇಕ್ಷೆಯಿಲ್ಲದೆ ಮಾಡಿದ ತ್ಯಾಗವು ದಾನವಾದರೆ ಹಾಗೆ ಮಾಡಲು ಬೇಕಾದ ಮನಸ್ಸಿನ ಪರಿಪಾಕವೇ ತಪಸ್ಸು. ಹೀಗೆ ಯಜ್ಞ ಎಂಬ ನಾಣ್ಯಕ್ಕೆ ದಾನ ಮತ್ತು ತಪಸ್ಸುಗಳೆಂಬ ಎರಡು ಮುಖಗಳಿವೆ. ಜೀವನದಲ್ಲಿ ಎಲ್ಲ ಕಾಲಕ್ಕೂ ಸಲ್ಲುವ ನಾಣ್ಯ ಯಜ್ಞವೇ ಹೊರತು ಬೇರೆ ಬೇರೆ ದೇಶ – ಕಾಲಗಳಲ್ಲಿ ಬೇರೆ ಬೇರೆ ಪ್ರಭುತ್ವಗಳಲ್ಲಿ ಚಲಾವಣೆಗೆ ಬರುವ ಹಣವಲ್ಲ.

4. ಮನುಷ್ಯನು ತನ್ನ ಒಳಿತನ್ನು ಹೇಗೆ ಸಾಧಿಸಬಹುದು?

ಮಾನವನು ತನ್ನ ಜೀವನದಲ್ಲಿ ಒಳಿತನ್ನು ಇಬ್ಬಗೆಯಾಗಿ ಸಾಧಿಸಬಹುದೆಂದು ವೇದಗಳು ತಿಳಿಸುತ್ತವೆ. ಅವುಗಳೆಂದರೆ ಇಷ್ಟ ಮತ್ತು ಪೂರ್ತ ಎಂಬ ಎರಡು ಬಗೆಯ ವಿಧಾನಗಳು. ಇಪ್ಪ ಎಂಬುದು ಸಾಮಾನ್ಯವಾದ ಯಜ್ಞವನ್ನು ಸಂಕೇತಿಸುತ್ತದೆ. ಕೆರೆ – ಬಾವಿಗಳನ್ನು ಕಟ್ಟಿಸುವುದು, ಮರ – ಗಿಡಗಳನ್ನು ನೆಡುವುದು, ದೀನ – ದಲಿತರಿಗೆ ಸಹಾಯಮಾಡುವುದು, ಮಂಟಪ – ಧರ್ಮಸತಗಳ ನಿರ್ಮಾಣ ಮಾಡುವುದು ಇವೇ ಮುಂತಾದ ಸಾಮಾನ್ಯವಾದ ಲೋಕೋಪಕಾರಗಳನ್ನು ಪೂರ್ತ ಎಂಬುದು ಸಂಕೇತಿಸುತ್ತದೆ.

5. ಪುರುಷ ಎಂಬ ಶಬ್ದಕ್ಕಿರುವ ಅರ್ಥವೇನು?

ನಮ್ಮೊಳಗಿನ ಆತ್ಮತತ್ತ್ವದ ಪ್ರಾಪ್ತಿಯ ಪರಿಯೇ ಪುರುಷಾರ್ಥ. ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ಪುರುಷಾರ್ಥ. ಪರಮಾರ್ಥದಲ್ಲಿ ಇರವಿಗೂ ಅರಿವಿಗೂ ವ್ಯತ್ಯಾಸವಿಲ್ಲ. ಇವೆರಡೂ ತಮ್ಮ ಸಾರ್ಥಕ್ಯವನ್ನು ನಲವಿನಲ್ಲಿ ಕಾಣುತ್ತವೆ. ಹೀಗೆ ಸತ್ + ಚಿತ್ ಆನಂದ ಎಂಬ ಇರವು, ಅರಿವು, ನಲವುಗಳ ಅಭಿಜ್ಞಾನವೇ ಪುರುಷಾರ್ಥದ ಅಂತರಂಗ.

6. ಸ್ವಧರ್ಮವು ಯಾವುದನ್ನು ಅವಲಂಬಿಸಿದೆ ?

ವ್ಯಕ್ತಿಯು ತನ್ನೊಳಗಿನ ಒಲವು – ನಿಲವುಗಳಿಂದಲೇ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲಿ ಕೂಡ ಹುಟ್ಟು ಮತ್ತು ಪರಿಸರಗಳು ತಮ್ಮ ಪ್ರಭಾವವನ್ನು ಸ್ವಲ್ಪಮಟ್ಟಿಗೆ ಬೀರುತ್ತವೆ. ಆದರೆ ಎಂದೂ ಎಲ್ಲಿಯೂ ಇವುಗಳಿಗಿಂತ ಮುಖ್ಯವಾದುದು ನಾವೆಲ್ಲ ನಂಬಬಹುದಾದ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ನಿಶ್ಚಯವನ್ನು ಸ್ವಧರ್ಮವು ಅವಲಂಬಿಸಿದೆ.

) ಕೆಳಗಿನ ವಾಕ್ಯಗಳ ಸ್ವಾರಸ್ಯವನ್ನು ಸಂದರ್ಭಸಹಿತ ವಿಸ್ತರಿಸಿ ಬರೆಯಿರಿ.

1. ಚಿನ್ನವಿಲ್ಲದೆ ಬದುಕಬಹುದು, ಅನ್ನವಿಲ್ಲದೆ ಬದುಕಲಾದೀತೆ ?

ಆಯ್ಕೆ : ಈ ವಾಕ್ಯವನ್ನು ಡಾ. ಆರ್. ಗಣೇಶ್ ಅವರು ಬರೆದಿರುವ ‘ಶ್ರೇಷ್ಠ ಭಾರತೀಯ ಚಿಂತನೆಗಳು‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಯಜ್ಞ ಎಂದರೆ ಬೆಂಕಿಯಲ್ಲಿ ತುಪ್ಪ ಸುರಿಯುವ , ಆಹಾರವನ್ನು ಪೋಲು ಮಾಡುವ ಕಂದಾಚಾರ ಎಂದು ಹಲವರು ಆಕ್ಷೇಪಿಸುವುದರ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ. ಸ್ವಾರಸ್ಯ : ನಮಗೆ ಮರಳಿ ಸಿಗುವುದಿಲ್ಲ ಎಂಬ ಅರಿವಿದ್ದರೂ ಯಜ್ಞಕ್ಕೆ ತುಪ್ಪ ಇತ್ಯಾದಿಗಳನ್ನು ಹಾಕುವುದರ ಮೂಲಕ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತ್ಯಾಗಮಾಡುವ ಜೀವನಪಾಠ ಕಲಿಯುತ್ತೇವೆ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ.

7th lesson Shreshta Bharatiya Chintanegalu notes for class 10

2. ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ಯಜ್ಞ.

ಆಯ್ಕೆ : ಈ ವಾಕ್ಯವನ್ನು ಡಾ. ಆರ್. ಗಣೇಶ್ ಅವರು ಬರೆದಿರುವ ‘ಶ್ರೇಷ್ಠ ಭಾರತೀಯ ಚಿಂತನೆಗಳು‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಯಜ್ಞ , ದಾನ ಮತ್ತು ತಪಸ್ಸುಗಳ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ. ಆಹಾರವನ್ನು ಪೋಲು ಮಾಡುವ ಕಂದಾಚಾರ ಎಂದು ಹಲವರು ಆಕ್ಷೇಪಿಸುತ್ತಾರೆ. ಅಗ್ನಿಗೆ ಆಹುತಿ ನೀಡುವುದು ಒಂದು ಸಂಕೇತ ಮಾತ್ರ. ಇದು ಬಟ್ಟೆಯಿಂದಾದ ಬಾವುಟಕ್ಕೆ ರಾಷ್ಟ್ರಧ್ವಜವೆಂದು ಎಲ್ಲರೂ ಗೌರವ ಸಲ್ಲಿಸುವ ರೀತಿಯಾಗಿದೆ. ನಮ್ಮ ಸಂಸ್ಕೃತಿಯು ಜಿಪುಣತನವನ್ನು ಹೋಗಲಾಡಿಸಿ ಅವನಲ್ಲಿ ಉದಾರತೆಯನ್ನು ಉಂಟುಮಾಡುತ್ತದೆ ಎಂದು ಲೇಖಕರು ಹೇಳಿದ್ದಾರೆ.

ಸ್ವಾರಸ್ಯ : ಯಜ್ಞದಲ್ಲಿ ಅಗ್ನಿಗೆ ಸಾಂಕೇತಿಕವಾಗಿ ತುಪ್ಪವನ್ನು ಆಹುತಿ ನೀಡಲಾಗುತ್ತದೆ. ಆ ಮೂಲಕ ಮಾನವನಲ್ಲಿರುವ ಲೋಭತನವನ್ನು ಕಡಿಮೆ ಮಾಡುವುದು ಅದರ ಹಿಂದಿರುವ ಮುಖ್ಯ ಉದ್ದೇಶ ಎನ್ನುವುದು ಇಲ್ಲಿನ ಸ್ವಾರಸ್ಯವಾಗಿದೆ.

3. ಧರ್ಮದ ಕೇಂದ್ರ ಈಶ್ವರನಲ್ಲಿದೆ.

ಆಯ್ಕೆ : ಈ ವಾಕ್ಯವನ್ನು ಡಾ. ಆರ್. ಗಣೇಶ್ ಅವರು ಬರೆದಿರುವ ‘ಶ್ರೇಷ್ಠ ಭಾರತೀಯ ಚಿಂತನೆಗಳು‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಪುರುಷಾರ್ಥಗಳಾದ ಧರ್ಮ , ಅರ್ಥ , ಕಾಮ ಮತ್ತು ಮೋಕ್ಷಗಳ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ. ಜನಸಾಮಾನ್ಯರು ದೇವರು  ಎಂದು ನಂಬುವ ಪರತತ್ತ್ವವನ್ನೇ ಶಾಸ್ತ್ರಗಳು ಈಶ್ವರ ಎಂದು ಹೆಸರಿಸಿವೆ. ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ಆಚಾರವೂ ಆಗುತ್ತದೆ ಎಂದು ಧರ್ಮದ ಅಸ್ತಿತ್ವದ ಬಗ್ಗೆ ಹೇಳಿದ್ದಾರೆ.

ಸ್ವಾರಸ್ಯ : ಜೀವ – ಜಗತ್ತುಗಳ ನಡುವೆ ಸಾಮರಸ್ಯ ಉಂಟುಮಾಡುವ ಮೌಲ್ಯವಾದ ಧರ್ಮದ ಕೇಂದ್ರವು ಪ್ರಕೃತಿಯ ಸ್ವರೂಪನಾದ ಈಶ್ವರನಲ್ಲಿ ಇದೆ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ.

4. ಪುರುಷಾರ್ಥಗಳ ಸಾಧನೆಗೆ ಸ್ವಧರ್ಮಾಚರಣೆ ಅತ್ಯಾವಶ್ಯಕ.

ಆಯ್ಕೆ : ಈ ವಾಕ್ಯವನ್ನು ಡಾ. ಆರ್. ಗಣೇಶ್ ಅವರು ಬರೆದಿರುವ ‘ಶ್ರೇಷ್ಠ ಭಾರತೀಯ ಚಿಂತನೆಗಳು‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದೇ ಆದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ರೀತಿಯೇ ಸ್ವಧರ್ಮ ‘ ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.

ಸ್ವಾರಸ್ಯ : ಸಮಾಜದಲ್ಲಿ ವ್ಯಕ್ತಿಯು ಕೇವಲ ತನ್ನ ಬದುಕನ್ನು ಮಾತ್ರ ರೂಪಿಸಿಕೊಳ್ಳವುದು ಮಾತ್ರವಲ್ಲ ತನ್ನ ಸುತ್ತಲಿನ ಜಗತ್ತಿಗೂ ನೆಮ್ಮದಿಯನ್ನು ಉಂಟುಮಾಡಬೇಕೆಂಬ ನೀತಿಯು ಇಲ್ಲಿನ ಸ್ವಾರಸ್ಯವಾಗಿದೆ.

Watch this video for the explanation of Shreshta Bharatiya Chintanegalu questions and answers for class 10.