Important questions and answers for SSLC exam part 2. 10th class Kannada important question and answer is provided here for 10th standard exam preparation.
In this post we are going to discuss most expected questions and answers for class 10. SSLC exam very important notes is given for exam preparation. Here we have discussed SSLC Kannada all prose and poem questions.
To get more video notes for class 10, visit our YouTube channel. This channel is very useful for SSLC exam preparation.
Important question and answer for class 10
1. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ?
ಟೊಪ್ಪಿಗೆಯ ವಿಶೇಷತೆಯನ್ನು ಕುರಿತು “ಒಂದ“ಒಂದು ಟೊಪ್ಪಿಗೆ ಇನ್ನೊಂದಿರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ ಕನಿಷ್ಟಪಕ್ಷ ಬೇರೆಯಾಗಿರುತ್ತದೆ. ಕೋಟ್ಯಾವಧಿ ಟೊಪ್ಪಿಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು. ಮನುಷ್ಯನಂತೆ ಟೊಪ್ಪಿ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ” ಎಂದು ಲೇಖಕರು ದಾಖಲಿಸಿದ್ದಾರೆ.
2. ಗುರೂಪದೇಶದ ಗುಣಗಳನ್ನು ಪಟ್ಟಿಮಾಡಿ.
ಗುರೂಪದೇಶ ಎಂದರೆ ಜನರ ಒಳ ಹೊರಗಣ ಕೊಳೆಗಳನ್ನು ತೊಳೆದು ಬಿಡುವ ನೀರಿಲ್ಲದ ʼಮೀಹʼ (ಸ್ನಾನ) ತಲೆ ನೆರೆಯದ, ಮೈ ಸುಕ್ಕುಗಟ್ಟದೆ ಮೂಡುವ ಮುಪ್ಪು: ಬೊಜ್ಜು ಬೆಳೆಯದೆ ಬರುವ ಗುರುತ್ವ: ಬಂಗಾರವಿಲ್ಲದೆ ಮಾಡಿ ಬೆಲೆಬಾಳುವ ಕಿವಿಯೋಲೆ: ಪಂಜು ಇಲ್ಲದೆ ಬೆಳಗುವ ಬೆಳಕು: ಉದ್ವೇಗ ಬರಿಸದ ಜಾಗರಣೆ.
3. ಧರ್ಮಬುದ್ಧಿಗೆ ದುಷ್ಟಬುದ್ಧಿಯು ಯಾವ ಸಲಹೆಯಿತ್ತನು?
ಧರ್ಮಬುದ್ಧಿಗೆ ದುಷ್ಟಬುದ್ಧಿಯು “ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲ ಸ್ವೇಚ್ಛೆಯಿಂದ ಇರುವವರಲ್ಲ ಮತ್ತೆ ವ್ಯಾಪಾರಕ್ಕಾಗಿ ದೂರದೇಶಕ್ಕೆ ಹೋಗಬೇಕಾಗುತ್ತದೆ . ಆಕಾರಣದಿಂದ ನಿನಗೂ ನನಗೂ ವ್ಯಯಕ್ಕೆ(ಖರ್ಚಿಗೆ) ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು, ಉಳಿದ ಹೊನ್ನನೆಲ್ಲವನ್ನು ಇಲ್ಲಿಯೇ ಇಡೋಣ ಎಂದು ಸಲಹೆಯಿತ್ತನು.
4. ಕೃಷ್ಣನು ಕರ್ಣನಮನದಲ್ಲಿ ಯಾವ ರೀತಿಯಲ್ಲಿ ಭಯವನ್ನು ಬಿತ್ತಿದನು?
“ಕರ್ಣ ನಿಮಗೂ (ಪಾಂಡವರಿಗೂ) ಯಾದವ ಕೌರವರಿಗೂ ವಂಶ ಗೌರವದಲ್ಲಿ ̈ಭೇದವಿಲ್ಲ . ನೀನು ನಿಜವಾಗಿ ಭೂಮಿಯ ಒಡೆಯ. ಆದರೆ ನಿನಗೆ ಮನದಲ್ಲಿ ಅದರ ಅರಿವಿಲ್ಲ ” ಎಂದು ಹೇಳುತಾ ಕೃಷ್ಣನು ಕರ್ಣನ ಕಿವಿಯಲ್ಲಿ ಭಯವನು ಬಿತ್ತಿದನು.
5. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು?
ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಭೂಮಂಡಲದಲ್ಲಿ ಕೌಸಲ್ಯಯು ಮಗನಾದ ರಾಮನು ಒಬ್ಬನೇ ವೀರನು ಇದು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ ” ಎಂದ ಬರೆಯಲಾಗಿತ್ತು.
6. ನಾರಾಯಣಗುರು ಧರ್ಮಪರಿಪಾಲನಾ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ.
ಉತ್ತರ: ಶ್ರೀ ನಾರಾಯಣಗುರು ಅವರು 1903ರಲ್ಲಿ ಧರ್ಮಪರಿಪಾಲನಾ ಯೋಗಂ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯ ಪ್ರಮುಖ ಉದ್ದೇಶವೆಂದರೆ ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣವಾಗಿತ್ತು. ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು. ಕೆಳಸಮುದಾಯಗಳ ಪ್ರವೇಶ ನಿರಾಕರಿಸುತ್ತಿದ್ದ ದೇವಾಲಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದರು.
7. ರಾಜಕೀಯ ಸ್ವಾತಂತ್ರ್ಯದ ಮಹತ್ವವೇನು?
ಉತ್ತರ : ರಾಜಕೀಯ ಸ್ವಾತಂತ್ರ್ಯವಿರುವುದು ವ್ಯಕ್ತಿಗೆ ಶಾಸನಗಳನ್ನು ರಚಿಸುವುದರಲ್ಲಿ ಸರ್ಕಾರಗಳ ಸ್ಥಾಪನೆ, ವಿಸರ್ಜನೆಗಳಲ್ಲಿ ಪಾಲು ಇರುವ ಹಕ್ಕಿನಲ್ಲಿ . ಸರಕಾರವು ಇರುವುದು ಜನರಿಗೆ ಜೀವನ ಸ್ವಾತಂತ್ರ್ಯ, ಸಂತೋಷಾನ್ವೇಷಣೆಗಳನ್ನು ಒದಗಿಸಿಕೊಡುವ ಸಲುವಾಗಿ ವಾಸ್ತವವಾಗಿ ರಾಜಕೀಯ ಸ್ವಾತಂತ್ರ್ಯ ಎನ್ನುವರು. ಮಾನವ ವ್ಯಕ್ತಿತ್ವ ಮತ್ತು ಸಮಾನತೆಗಳ ತತ್ವದಿಂದ ಅನುಗಮನ ಮಾಡಿದ ತತ್ವ.
Most expected questions and answers for class 10
8. “ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು” (3 marks)
ಆಯ್ಕೆ: ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ: ಬ್ರಿಟಿಷ್ರ ಸೈನಿಕರು ಹಲಗಲಿಯನ್ನು ಲೂಟಿಮಾಡಿ ಊರಿಗೆ ಬೆಂಕಿ ಇಟ್ಟು ಸುಟ್ಟು ಬೂದಿ ಮಾಡಿದ್ದರಿಂದ ಹಲಗಲಿಯು ಎಳ್ಳಷ್ಟು ಗುರುತು ಉಳಿಯದೆ ಕಾಣದೆ ಹಾಳಾಗಿ ಹೋಯಿತು. ಇದನ್ನು ಕುರ್ತುಕೋಟಿಯ ಕಲ್ಮೇಶನ ದಯದಿಂದ ನಾನು ಕಂಡೊಷ್ಟು ವರ್ಣಿಸಿ ಹೇಳಿದೆ ಎಂದು ಲಾವಣಿಕಾರ ಹಾಡಿದ ಸಂದರವಾಗಿದೆ.
ಸ್ವಾರಸ್ಯ: ಹಲಗಲಿ ಬೇಡರು ಹೋರಾಡಿ ಕೆಟ್ಟು ಹೋದ ವಿಚಾರವನ್ನು ಕಂಡಷ್ಟು ವರ್ಣಿಸಿದ್ದೇನೆ ಎಂದು ಹೇಳಿರುವುದು ಸ್ವಾರಸ್ಯಪೂರ್ಣವಾಗಿದೆ.
9. “ಪಾಂಡವರೊಳಿದು ಛಲಮನೆ ಮೆರೆವೆಂ.” (3 marks)
ಆಯ್ಕೆ: ಈ ವಾಕ್ಯವನ್ನು ಮಹಾಕವಿ ರನ್ನ ಬರೆದಿರುವ ‘ಸಾಹಸ ಭೀಮ ವಿಜಯ’ ಎಂಬ ಕೃತಿಯಿಂದ ಆರಿಸಲಾಗಿರುವ ‘ ಛಲಮನೆ ಮೆಅವೆಂ ‘ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: “ನನ್ನ ಒಡ ಹುಟ್ಟಿದ ನೂರುಮಂದಿ ಸಹೋದರರು ಹೋರಾಡಿ ಸತ್ತರು. ಆದ್ದರಿಂದ ನನ್ನಲ್ಲಿ ಕೋಪ ಹುಟ್ಟಿ ಬೆಳೆಯಿತು. ಸತ್ತವರೇನು ಮತ್ತೆ ಹುಟ್ಟುವುದಿಲ್ಲವೇ? ಆದ್ದರಿಂದ ಪಾಂಡವರೊಡನೆ ಹೋರಾಡಿ ನನ್ನ ಛಲವನ್ನೇ ಮೆರೆಯುತ್ತೇನೆ. ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ದುರ್ಯೋಧನನ ತನಗೆ ಕೋಪ ಹೆಚ್ಚಾಗಲು ಕಾರಣವನ್ನು ನೀಡಿರುವುದಲ್ಲದೆ ತನ್ನ ಸಹೋದರರು ಸತ್ತಿಲ್ಲ. ಅವರು ಮತ್ತೆ ಹುಟ್ಟಿಬರುವರೆಂಬ ನಂಬಿಕೆಹೊಂದಿರುವುದು ಹಾಗೂ ಛಲಕ್ಕಾಗಿ ಹೋರಾಡುವ ಆತನ ನಿಲುವು ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
10. ‘ನೊಳವಿಂಗೆ ಕುಪ್ಪೆ ವರಂ.’ (3 marks)
ಆಯ್ಕೆ: ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ವಿಕ್ರಮಾರ್ಜುನ ವಿಜಯಂ’ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ಕೆಮ್ಮನೆ ಮೀಸೆವೊತ್ತನೇ’ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ: ದ್ರುಪದನು ಹೀಯಾಳಿಸಿದಾಗ ಕೋಪಗೊಂಡ ದ್ರೋಣನು ದ್ರುಪದನನ್ನು ಕುರಿತು “ ಎಲೋ ಏಳನೇ, ನೊಣಕ್ಕೆ ಕಸವೇ ಶ್ರೇಷ್ಠವಾದುದು ” ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ, ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನಿರಾಯಾಸವಾಗಿ , ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಎಂದು ಶಪಥ ಮಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ‘ನೊಣಕ್ಕೆ ಕಸವೇ ಶ್ರೇಷ್ಠ’ ಎಂಬಂತೆ ವ್ಯಕ್ತಿಯ ಯೋಗ್ಯತೆಗೆ ತಕ್ಕಂತೆ ಗುಣ – ನಡತೆ ಅಭಿರುಚಿಗಳಿರುತ್ತವೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ.
Karnataka sslc question bank with answers
11. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯ? (4 marks)
ನಮ್ಮ ಜೀವನದಲ್ಲಿ ಧನಾತ್ಮಕ ಭಾವನೆಯನ್ನು, ದೃಢಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ಯಶಸ್ಸು ಲಭಿಸುತ್ತದೆ. ನಮ್ಮ ಜೀವನಯೆಂಬ ಹಡಗಿನ ಸುತ್ತಮುತ್ತಲು ಕವಿದಿರುವ ಅಜ್ಞಾನಯೆಂಬ ಕತ್ತಲೆಯನ್ನುಹೋಗಲಾಡಿಸಲು ಪ್ರೀತಿಯೆಂಬ ಅರಿವಿನ(ತಿಳುವಳಿಕೆಯ)ಹಣತೆಯನ್ನು ಹಚ್ಚಬೇಕು.
ವಸಂತ ಕಾಲದ ಆಗಮನ ಬರಡಾಗಿರುವ ಕಾಡು-ಮೇಡುಗಳಲ್ಲಿ ಮರಗಿಡಗಳು ಸಮೃದ್ಧವಾಗಿ ಚಿಗುರಿ ಪ್ರಕೃತಿಗೆ ನವ್ಯಚೈತನ್ಯವನ್ನು ತಂದುಕೊಡುವ ಹಾಗೇಯೇ ಕಲುಷಿತವಾಗಿರುವ ಮನಸ್ಸುಗಳನ್ನು ಹಸನುಗೊಳಿಸಬೇಕು. ಶೋಷಣೆಗೂಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕುವ ಹೊಸ ¨ಭರವಸೆಗಳನ್ನು ಮೂಡಿಸಬೇಕು. ಭಾಷೆ, ಜಾತಿ, ಮತ ಧರ್ಮಗಳ ಬೇದಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ.ಅವುಗಳನ್ನು ಕೆಡವಿ, ಮನುಜ ಮನುಜರ ನಡುವೆ ಪ್ರೀತಿ, ಸ್ನೇಹ, ವಿಶ್ವಾ¸ಸದ ಸೇತುವೆಯಾಗುವ ಸಂಕಲ್ಪ ಕೈಗೊಳ್ಳಬೇಕು.
ಮತಪಂಥಗಳೆಲ್ಲವೂ ಸಾಧನೆಯ ದಾರಿಗಳು, ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನು ನೀಡಬಲ್ಲ, ಸನ್ಮಾನಕ್ಕೆ ಕರೆದುಕೊಂಡುಹೋಗುವ ಮಾರ್ಗಗಳೆಂದು ತಿಳಿದು ಎಚ್ಚರಿಕೆಯಲ್ಲಿ ನಾವು ಬದುಕಬೇಕು ಎಂಬುದು ಕವಿಜಿ.ಎಸ್. ಶಿವರುದ್ರಪ್ಪ ಅವರ ಆಶಯವಾಗಿದೆ.
12. ಕೆಳಗಿನ ಕವಿಗಳ /ಸಾಹಿತಿಗಳ ಜನ್ಮ ಸ್ಥಳ, ಕಾಲ, ಕೃತಿ ಮತ್ತು ಬಿರುದು / ಪ್ರಶಸ್ತಿ ಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ. 2×2=4
1. ಡಾ. ಜಿ. ಎಸ್. ಶಿವರುದ್ರಪ್ಪ 2. ಪು.ತಿ.ನರಸಿಂಹಚಾರ್
1. ಡಾ. ಜಿ. ಎಸ್. ಶಿವರುದ್ರಪ್ಪ:
ಜಿ.ಎಸ್.ಶಿವರುದ್ರಪ್ಪ ಎಂದೇ ಪ್ರಸಿದ್ಧ ರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ನವರು ಕ್ರಿ.ಶ.೧೯೨೬ರಲ್ಲಿ ಶಿವವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಆಧುನಿಕ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಶಿವರುದ್ರಪ್ಪನವರು ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದರ್ಯ ಸಮೀಕ್ಷೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ‘ಕಾವ್ಯಾರ್ಥಚಿಂತನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶಿವರುದ್ರಪ್ಪ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಕವಿ ಅಭಿಧಾನ ಮತ್ತು ಪಂಪಪ್ರಶಸ್ತಿಗೆ ಪಾತ್ರರಾಗಿದ್ದಾರೆ.
2. ಪು.ತಿ.ನರಸಿಂಹಚಾರ್:
ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಇವರು ಕ್ರಿ.ಶ.೧೯೦೫ ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ ಎಂಬ ಊರಿನಲ್ಲಿ ಜನಿಸಿದ್ದಾರೆ. ಇವರು ಶಬರಿ, ಅಹಲ್ಯೆ, ಗೋಕುಲ ನಿರ್ಗಮನ, ವಿಕಟಕವಿವಿಜಯ, ಹಂಸದಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಶ್ರೀಹರಿಚರಿತೆ ಕಾವ್ಯಕ್ಕೆ ಪಂಪಪ್ರಶಸ್ತಿ ಗಳನ್ನು ಪಡೆದಿದ್ದಾರೆ.
Click here to download Important questions and answers
Watch this video for the explanation of Important questions and answers for SSLC exam part 1.