Adopt these habits to live happily. ಸಂತೋಷದಿಂದ ಬದುಕಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. Motivational speech in Kannada.
Follow these habits to live happily every day. This video about How to stay happily. Adopt these habits to live happily. Motivation video in kannada.
Inspiring speech in kannada. Best motivational speech. 7 tips to be happy in life. 10 ways to be happy. 5 Subscribe to our YouTube channel for motivational words.
Motivation video in kannada for living happy life
ಸಂತೋಷದಿಂದ ಬದುಕಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
ಇತ್ತೀಚಿ ದಿನಗಳಲ್ಲಿ ಒತ್ತಡವು ಸಾಮಾನ್ಯವಾಗಿದೆ. ಈ ಒತ್ತಡದ ಕಾರಣದಿಂದಾಗಿ ಅನೇಕ ಜನರು ಖಿನ್ನತೆಗೆ ಒಳಗಾಗಿ ಜೀವನದ ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾರೆ. ಇರುವುದೊಂದು ಜೀವನ, ಆ ಅಮೂಲ್ಯ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುವುದು ಬಹಳ ಮುಖ್ಯವಾಗಿದೆ. ಹಾಗಾಗಿ ಪ್ರತಿದಿನ ಸಂತೋಷದಿಂದ ಬದುಕಲು ಈ ಅಭ್ಯಾಸಗಳನ್ನು ಪಾಲಿಸಿ.
ಸ್ತುತ ಜಗತ್ತಿನಲ್ಲಿ ಒತ್ತಡ ಮತ್ತು ಖಿನ್ನತೆ ಸಾಮಾನ್ಯ, ಇದಕ್ಕೆ ಮುಖ್ಯ ಕಾರಣ ನಮ್ಮ ಬಿಡುವಿಲ್ಲದ ಜೀವನಶೈಲಿ. ಈ ಖಿನ್ನತೆಯು ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದೆ, ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಆರೋಗ್ಯಕರ ಬದಲಾವಣೆಗಳನ್ನು ರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಖಂಡಿತವಾಗಿಯು ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯು ಸಾಧ್ಯವಾಗುತ್ತದೆ. ಅಲ್ಲದೆ ಈ ಅಭ್ಯಾಸಗಳು ನೀವು ನಿಮ್ಮ ಜೀವನವನ್ನು ಪರಿಪೂರ್ಣವಾಗಿ ಆನಂದಿಸುವಂತೆ ಮಾಡುತ್ತದೆ.
ಒತ್ತಡವನ್ನು ನಿವಾರಿಸಿ ಸಂತೋಷವಾಗಿರಲು ಈ ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳಿ:
ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರಬೇಕು:
ಜೀವನದಲ್ಲಿ ಸಂತೋಷವಾಗಿರಲು ಧನಾತ್ಮಕ ಆಲೋಚನೆಗಳು ಬಹಳ ಮುಖ್ಯ. ಈ ಸಕಾರಾತ್ಮಕ ಆಲೋಚನೆಗಳು ನೀವು ನಿಮ್ಮ ಜೀವನವನ್ನು ಪರಿಪೂರ್ಣವಾಗಿ ಆನಂದಿಸಲು ಸಹಾಯ ಮಾಡುತ್ತದೆ. ಹಾಗೂ ಜೀವನದಲ್ಲಿ ಎದುರಾಗುವಂತಹ ಒತ್ತಡದ ಪರಿಸ್ಥಿತಿಯನ್ನು ಸಮರ್ಪಕ ರೀತಿಯಲ್ಲಿ ಎದುರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಸಕಾರಾತ್ಮಕ ಮನಸ್ಥಿತಿಯು ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳನ್ನು ಮೂಡಿಸುತ್ತದೆ. ನಿಮ್ಮ ಮನಸ್ಥಿತಿ ಸಕಾರಾತ್ಮಕವಾಗಿದ್ದರೆ, ನೀವು ಒತ್ತಡಕ್ಕೆ ಒಳಗಾಗವ ಸಾಧ್ಯತೆ ಇರುವುದಿಲ್ಲ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.
ಇಂದಿನ ಕೆಲಸವನ್ನು ಇಂದೇ ಮಾಡಿ:
ಜೀವನದಲ್ಲಿ ಸಂತೋಷವಾಗಿರಲು, ಸೋಮಾರಿತನವನ್ನು ತ್ಯಜಿಸುವುದು ಬಹಳ ಮುಖ್ಯ. ಸೋಮಾರಿತನದಿಂದ ಇಂದಿನ ಕೆಲಸವನು ಇಂದೇ ಮಾಡದೇ, ನಾಳೆ ಮಾಡಿದರಾಯಿತು ಎಂದು ಕೆಲಸವನ್ನು ಮುಂದೂಡಿದರೆ, ಕೆಲಸದ ಭಾರವು ನಿಮ್ಮ ಹೆಗಲೇರುತ್ತದೆ. ಇದು ಖಂಡಿತವಾಗಿಯೂ ನಿಮ್ಮನ್ನು ಒತ್ತಡಕ್ಕೆ ನೂಕುತ್ತದೆ. ಹಾಗಾಗಿ ಆಯಾ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ. ಇದು ಜೀವನದಲ್ಲಿ ನಿಮಗೆ ಮುಂದುವರೆಯಲು ನಿಮಗೆ ಅವಕಾಶ ನೀಡುತ್ತದೆ. ಇದಲ್ಲದೆ ಕೆಲಸಗಳು ಒತ್ತಡವಿಲ್ಲದೆ ಸರಾಗವಾಗಿ ಸಾಗಿದ ಸಂತೃಪ್ತಿ ನಿಮಗಿರುತ್ತದೆ.
ದೈಹಿಕ ವ್ಯಾಯಾಮ ಮತ್ತು ಯೋಗ ಮಾಡುವುದು:
ಜೀವನದಲ್ಲಿ ಒತ್ತಡದಿಂದ ಹೊರಬರಲು ದೈಹಿಕ ವ್ಯಾಯಾಮ ಮತ್ತು ಯೋಗವನ್ನು ಪ್ರತಿದಿನ ಮಾಡಬೇಕು. ಯೋಗದಿಂದ ಮನಸ್ಸಿಗೆ ನಮ್ಮದಿ ದೊರೆಯುತ್ತದೆ. ದೈಹಿಕ ವ್ಯಾಯಾಮವು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಮನಸ್ಸು ಮತ್ತು ದೇಹ ಆರೋಗ್ಯವಾಗಿದ್ದರೆ ನೆಮ್ಮದಿಯಿಂದ ಇರಲು ಸಾಧ್ಯ. ಆದ್ದರಿಂದ ಜೀವನಶೈಲಿಯ ಬದಲಾವಣೆಯ ಭಾಗವಾಗಿ ಪ್ರತಿನಿತ್ಯ ದೈಹಿಕ ವ್ಯಾಯಾಮ ಮತ್ತು ಯೋಗವನ್ನು ಮಾಡಬೇಕು.
ಮೊಬೈಲ್ ಲ್ಯಾಪ್ಟಾಪ್ ಜೊತೆ ಸಮಯ ಕಳೆಯುವುದನ್ನು ಕಡಿಮೆ ಮಾಡಿ:
ಇಂದಿನ ದಿನಗಳಲ್ಲಿ ಅನೇಕರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಲ್ಯಾಪ್ ಟಾಪ್ ನೋಡುವುದರಲ್ಲಿಯೇ ಕಳೆಯುತ್ತಾರೆ. ಇದು ಖಂಡಿತವಾಗಿಯೂ ದಣಿದ ಭಾವನೆಯನ್ನು ಮೂಡಿಸುತ್ತದೆ. ಅದರ ಬದಲಿಗೆ ಪ್ರಕೃತಿಯ ಮಡಿಲಲ್ಲಿ ನಡೆಯುವುದು, ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿ. ಈ ಬದಲಾವಣೆಯು ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
how to live a simple life and be happy
ಕೆಲಸದ ಹೊರತಾಗಿ ಹೊಸದನ್ನು ಏನಾದರೂ ಕಲಿಯಿರಿ:
ಹೆಚ್ಚಿನ ಜನರು ಕೆಲಸದಲ್ಲಿ ಮಾತ್ರ ಗಮನವನ್ನು ಇಟ್ಟುಕೊಂಡಿರುತ್ತಾರೆ. ಕೆಲಸದ ಹೊರತಾಗಿ ಬೇರೆ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ. ಈ ಅಭ್ಯಾಸ ಸಾಮಾನ್ಯವಾಗಿ ಜೀವನದ ಮೇಲೆ ನಿರಾಶಾ ಭಾವವನ್ನು ಮೂಡಿಸುತ್ತದೆ. ಜೀವದಲ್ಲಿ ಸಂತೋಷವಾಗಿರಬೇಕೆಂದರೆ ಹೊಸ ಹೊಸ ಕಲಿಕೆಗಳನ್ನು ರೂಢಿಸಿಕೊಳ್ಳಬೇಕು. ಇದು ನಮ್ಮನ್ನು ಕ್ರೀಯಾಶೀಲರನ್ನಾಗಿಸುವುದು ಮಾತ್ರವಲ್ಲದೆ, ಮನಸ್ಸಿಗೆ ಉಲ್ಲಾಸ ನೀಡುತ್ತದೆ.
ಸಣ್ಣ ಸಣ್ಣ ಗೆಲುವನ್ನು ಸಹ ಆಚರಿಸಿ:
ನಾವು ಯಶಸ್ಸಿನ ಹಿಂದೆ ಓಡುತ್ತಲೇ ಇರುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು ನಮ್ಮ ಸಣ್ಣ ಸಾಧನೆಗಳನ್ನು ಆಚರಿಸಲು ಮರೆಯುತ್ತೇವೆ. ದೊಡ್ಡದನ್ನು ಸಾಧಿಸುವ ಹಾದಿಯಲ್ಲಿ ನಾವು ಯಾವಾಗಲು ಸಣ್ಣ ಸಂತೋಷಗಳನ್ನು ನಿರ್ಲಕ್ಷಿಸುತ್ತೇವೆ. ಇದರ ಬದಲು ಸಣ್ಣಪುಟ್ಟ ಗೆಲುವನ್ನು ಉತ್ಸಾಹದಿಂದ ಆಚರಿಸಿ, ಇದು ನೀವು ನಿಮ್ಮ ಜೀವನವನ್ನು ಆನಂದಿಸುವಂತೆ ಮಾಡುತ್ತದೆ.
ಚೆನ್ನಾಗಿ ನಿದ್ರೆ ಮಾಡಿ:
ನಿದ್ರೆ ಪೂರ್ಣವಾಗದಿದ್ದರೂ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಮತ್ತು ಯಾವುದೇ ಕೆಲಸದಲ್ಲಿ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತಿದಿನ 7 ರಿಂದ 8 ಗಂಟೆಗಳ ನಿದ್ರೆ ಪಡಯುವುದು ತುಂಬಾ ಮುಖ್ಯವಾಗಿದೆ.
Watch this video for the explanation of Adopt these habits to live happily.