Yuddha lesson questions and answers

Yuddha lesson questions and answers for class 10. SSLC Kannada Yuddha lesson notes are given in this post.

In this post we are going to explain questions and answer from the lesson Yuddha for 10th standard students. ಯುದ್ಧ ಪಾಠದ ಪ್ರಶ್ನೆ ಉತ್ತರಗಳು.

To get more video notes, visit our YouTube channel. This channel is very useful for 10th standard second language Kannada notes.

Questions and answer from the lesson Yuddha for 10th standard

ಯುದ್ಧ ಪಾಠದ ಪ್ರಶ್ನೆ ಉತ್ತರಗಳು

Yuddha lesson questions and answers

For SSLC students

) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1.ರಾಹಿಲನು ಯಾರು?

ರಾಹಿಲನು ಒಬ್ಬ ವೈದ್ಯ ಸೈನಿಕ.

2.ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು?

ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಬೇಕಾದ ಔಷಧ ಮತ್ತು ಶಾಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಭದ್ರವಾಗಿ ಹಿಡಿದುಕೊಂಡಿದ್ದನು.

3.ಗಡಿ ಪ್ರದೇಶದಲ್ಲಿಬ್ಲಾಕ್ ಔಟ್ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ?

ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್ ಔಟ್’ ನಿಯಮವನ್ನುಪಾಲಿಸಲಾಗುತ್ತದೆ.

4.ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು?

ರಾಹಿಲನು ಮುದುಕಿಯ  ಎದುರಿಗೆ “ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ, ಸಂಕಷ್ಟಕ್ಕಿಡಾದ ಮನುಷ್ಯರ ಕಡೆಯವನು”ಎಂದು ಗಂಭೀರವಾದ ಮಾತನ್ನು ನುಡಿದನು.

5.ಯುದ್ಧದ ಬಗೆಗೆ ಮುದುಕಿಯು ಏನೆಂದು ಗೊಣಗಿಕೊಂಡು ಬಾಗಿಲು ತೆರೆದಳು?

ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯಮಾಡುವುದೇ ಯುದ್ಧದ ಪರಿ ಎಂದು ಗೊಣಗಿಕೊಂಡು ಬಾಗಿಲು ತೆರೆದಳು.

) ಕೊಟ್ಟಿರುವ ಪ್ರಶ್ನೆಗಳಿಗೆ ಮೂರುನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಡಾಕ್ಟರ್ಗೆ ವಿಮಾನದ ಪೈಲಟ್ ಏನು ಹೇಳಿದನು?

ಡಾಕ್ಟರ್‌ಗೆ ವಿಮಾನದ ಪೈಲಟ್ “ಡಾಕ್ಟರ್! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ. ಭೂಪ್ರದೇಶದೊಂದಿಗೆ ಸಂಪರ್ಕ ಬೆಳೆಸಲು ಸಾಧ್ಯವಾಗುತಿಲ್ಲ. ಎಲ್ಲಾದರೂ ಹೇಗಾದರೂ ಇಳಿಯೋಣ ಎಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ”ಎಂದು ಹೇಳಿದನು.

2. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?

ಮಹಿಳೆಯ ಆರ್ತನಾದ  ಕೇಳಿ ರಾಹಿಲನ ಮನದಲ್ಲಿ“ಅಯ್ಯೋ  ಆ ಮಹಿಳೆ ಯಾವ  ರೀತಿ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ? ನಾನು ಈಗ ಆ ಮನೆಯ ಕದವನ್ನು ತಟ್ಟಿದರೆ ಪರಿಣಾಮ ಏನಾಗಬಹುದು? ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ‘ಬ್ಲಾಕ್ಔಟ್’ ನಿಯಮ ಪಾಲಿಸಲಾಗುತ್ತಿದೆ. ಇಂತಹ ಈ ಸಂದರ್ಭದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ? ಎಂಬ ಪ್ರಶ್ನೆಗಳು ಮೂಡಿದವು.

3. ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು?

ಮುದುಕಿಯು  ರಾಹಿಲನ ಬಳಿ “ನೋಡಪ್ಪಾ, ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು. ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು. ಜಮೀನು ಆಸ್ತಿ ನಮಗೆ ಸಾಕಾಗುವಷ್ಟು ಇತ್ತು. ಈಗಲೂ ಇದೆ. ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ? ಯುದ್ದವಂತೆ ಯುದ್ಧ!” ಎಂದು ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳಾಗಿವೆ.

4. ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?

ನಿರ್ಜೀವವಾಗಿರುವ ಮಗುವನ್ನು  ನೋಡಿ ಮುದುಕಿ “ಇಷ್ಟು ವರ್ಷಗಳಿಂದ ಹಂಬಲಿಸಿ ಹುಟ್ಟಿದ ಮಗು  ಕೊನೆಗೂ ದಕ್ಕಲಿಲ್ಲವಲ್ಲ? ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ? ಈ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತೀಯಾ?” ಎಂದು ನಿರಾಶೆಯಿಂದ ಹೇಳಿದಳು.

ಯುದ್ಧ ಪಾಠದ ಪ್ರಶ್ನೆ ಉತ್ತರಗಳು

) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟುಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ಹೇಗೆ ವಿವರಿಸಿದಳು?

 “ನನ್ನ ಮಗ ಯುದ್ಧಕೆ ಹೋಗಿದ್ದಾನೆ! ನನ್ನ ಮಗ ಇನ್ನೂ ಚಿಕ್ಕ ಹುಡುಗನಾಗಿದ್ದಾಗ ಅವನ ತಂದೆಯನ್ನು ಯುದ್ಧಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಹಿಂತಿರುಗಲಿಲ್ಲ. ಎದೆ ತುಂಬ ಬೂದಿ ಮುಚ್ಚಿದ ಕೆಂಡ, ಎದೆಯ ಗಾಯ ಇಂದಿಗೂ ಇದೆ. ಎಲ್ಲ ದುಃಖ ನುಂಗಿಕೊ೦ಡು ಮಗನನ್ನು ಸಾಕಿ ಸಲಹಿದೆ. ಮದುವೆಯನ್ನೂ ಮಾಡಿದೆ. ಈಗ ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾದಳು. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು. ಅಷ್ಟರಲ್ಲಿ ಬಂತು ಯುದ್ಧ! ಅವನೊಮ್ಮೆ ಹಿಂತಿರುಗಿ ಬಂದಿದ್ದರೆ ಸಾಕಾಗಿತ್ತು. ಈ ವಿಷಯ ತಿಳಿದು ಅವನೆಷ್ಟು ಸಂಕಟ ಪಡುತ್ತಾನೋ…” ಎಂದು ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ಮುದುಕಿಯು ವಿವರಿಸಿದಳು.

2. ರಾಹಿಲನು ಮುದುಕಿಯ ಕುಟುಂಬಕ್ಕೂ, ಮುದುಕಿಯು ರಾಹಿಲನಿಗೂ ಮಾಡಿದ ಸಹಾಯವನ್ನು ಸಂಕ್ಷಿಪ್ತವಾಗಿ ವಿವರಿಸಿ.

ಮುದುಕಿಯು ಸೊಸೆ ಹೆರಿಗೆ ಬೇನೆ ತಿನ್ನುತ್ತಿದ್ದಳು. ಇದನ್ನು ತಿಳಿದ ರಾಹಿಲ “ಅಮ್ಮ ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ” ಎಂದು ಕೇಳಿದಾಗ ಮುದುಕಿಗೆ ಸಂತೋಷವಾಯಿತು. ನಂತರ ಮುದುಕಿ ರಾಹಿಲನ ಒದ್ದೆ ಬಟ್ಟೆಗಳನ್ನು ನೋಡಿ ತನ್ನ ಮಗನ ಬಟ್ಟೆಗಳನ್ನು ತಂದು ಕೊಟ್ಟಳು. ರಾಹಿಲ ಒದ್ದೆಯಾಗಿದೆ ಬಟ್ಟೆ ಬದಲಿಸಿಕೊಂಡು ಮುದುಕಿಯು ಸೊಸೆಯನು ಪರೀಕ್ಷೆಮಾಡ ತೊಡಗಿದ. ಬಹಳ ಹೊತ್ತಿನ ಪ್ರಯತ್ನದ ಬಳಿಕ ಮಗುವನ್ನು ಹೊರ ತೆಗೆದು ಸೊಸೆಯ ಜೀವ ಉಳಿಸಿದನು. ಆದರೆ ಮಗು ನಿರ್ಜೀವವಾಗಿತ್ತು.

ಶತ್ರುದೇಶದ ಸೈನಿಕರು ರಾಹಿಲನನ್ನು ಹುಡುಕಿಕೊಂಡು ಬಂದರು. ಆಗ ಮುದುಕಿಯು ರಾಹಿಲನ ಅಸಹಾಯಕತೆಯನ್ನು ದನೀಯವಾದ ನೋಟವನ್ನು ನೋಡಿ ಯುದ್ಧಕ್ಕೆ ಹೋದ ತನ್ನ ಮಗನಂತೆ ಭಾವಿಸಿಕೊಂಡು ಸೊಸೆ ಮಲಗಿದ ಕೋಣೆಯ ಮಂಚದಡಿ ಕಳುಹಿಸಿ ಅವರಿಂದ ರಕ್ಷಿಸಿದಳು. ಶತ್ರುಸೈನಿಕರು ಹೋದ ಮೇಲೆ ರಾಹಿಲನು ರಾತ್ರಿ ಒಂದು ಕೋಣೆಯಲ್ಲಿ ಮಲಗುವಂತೆ ಏರ್ಪಾಟು ಮಾಡಿದಳು. ಒಂದೆರಡು ದಿನಗಳಲ್ಲಿ ಪರಸ್ಪರರಲ್ಲಿ ವಿಶ್ವಾಸ ಮೂಡಿತು. ಇಬ್ಬರೂ ಪರಸ್ಪರ ಸುಖ-ದುಃಖಗಳಗಳನ್ನೂ ಹಂಚಿಕೊಂಡರು. ಹೀಗೆ ರಾಹಿಲನು ಮುದುಕಿಯ ಕುಟುಂಬಕ್ಕೂ, ಮುದುಕಿಯು ರಾಹಿಲನಿಗೂ ಪರಸ್ಪರ ಸಹಾಯವನ್ನು ಮಾಡಿದರು.

3. ಯುದ್ಧದಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬರೆಯಿರಿ.

ಯುದ್ಧದದಲ್ಲಿ ಇತಿಹಾಸದ ಉದ್ದಕ್ಕೂ ಇರುವಂತಹದ್ದೇ ಆಗಿದೆ. ಸಾಮ್ರಾಜ್ಯ ವಿಸ್ತರಣೆ, ಲೋಭ, ಶಕ್ತಿಯ ಪ್ರದರ್ಶನ, ಕೌಟುಂಬಿಕ ಕಲಹಗಳು, ದ್ವೇಷ ಸಾಧನೆ ಮುಂತದವು ಯುದ್ಧಕ್ಕೆ ಕಾರಣವಾಗುತ್ತವೆ. ಈ ಯುದ್ಧದ ಭೀಕರತೆಯನ್ನು ಧರ್ಮ, ದೇಶಗಳ ಭೇದವಿಲ್ಲದೆ ಭಾಗಿಯಾಗಿ ಸೈನಿಕರಿಗೂ ಅವರ ಕುಟುಂಬ ವರ್ಗದವರಿಗೂ ಹಾಗೂ ದೇಶಕ್ಕೂ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಸಂಕಟಕ್ಕೆ ಗಡಿಯಿಲ್ಲ – ಧರ್ಮವಿಲ್ಲ. ಯುದ್ಧ ಕಥೆಯಲ್ಲಿ ಮುದುಕಿ ಯುದ್ಧಕ್ಕೆ ಹೋದ ತನ್ನ ಗಂಡನನ್ನು ಕಳೆದುಕೊಂಡಿದ್ದಳು. ಎಲ್ಲರ ಮನಸ್ಸಿಗೂ, ದೇಹಕ್ಕೂ ಗಾಯ ಮಾಡುವುದೆ ಯುದ್ಧದಲ್ಲಿ ಪರಿ. ಈ ಯುದ್ಧದಲ್ಲಿ ತನ್ನ ಮೊಮ್ಮಗನನ್ನು ಉಳಿಸಲು ಆಗಲಿಲ್ಲ. ಮುದುಕಿ ಹೇಳಿದ ಮಾತಿನಿಂದ ಯುದ್ಧದ ಪರಿಣಾಮ ಅರಿವಾಗಬಹುದು. ಆದ್ದರಿಂದ ಯುದ್ಧದಲ್ಲಿ ನೊಂದವರು ಧರ್ಮಭಿನ್ನತೆ, ದೇಶಭಿನ್ನತೆ, ವೈರಿ-ಮಿತ್ರ ಎಂಬುದನ್ನೆಲ್ಲ ಪರಿಗಣಿಸದೆ ಪರಸ್ಪರರು ಸಂಕಷ್ಟ ಪರಿಹಾರಕ್ಕೆ, ರಕ್ಷಣೆಗೆ ತೊಡಗುವ ಮಾನವೀಯ ಮೌಲ್ಯಯುತ ನಡೆವಳಿಕೆಗಳನ್ನು ಬೆಳೆಸಿಕೊಳ್ಳಬೇಕು ಎಂಬುದೇ ಅಭಿಪ್ರಾಯವಾಗಿದೆ.

10th class Kannada notes

) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ದಯವಿಟ್ಟು ಬಾಗಿಲು ತೆಗೆಯಿರಿ, ನಾನು ಗಾಯಗೊಂಡಿದ್ದೇನೆ.

ಆಯ್ಕೆ: ಈ ವಾಕ್ಯವನ್ನ ಶ್ರೀಮತಿ ಸಾರಾ ಅಬೂಬಕ್ಕರ್ ಅವರ ‘ಚಪ್ಪಲಿಗಳು’ ಕಥಾ ಸಂಕಲನದಿಂದ  ಆಯ್ದ  ‘ಯುದ್ಧ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಈ ವಾಕ್ಯವನ್ನು ವೈದ್ಯಸೈನಿಕನಾಗಿ  ರಾಹಿಲನು ಮುದುಕಿಗೆ ಹೇಳಿದನು. ಯುದ್ಧದಲ್ಲಿ ಗಯಾಗೊಂಡು ಸಮುದ್ರಕ್ಕೆ ಬಿದ್ದ ರಾಹಿಲನು ಈಜುತ್ತ ದಡವನ್ನು ಸೇರುತ್ತಾನೆ. ದಡದಲ್ಲಿದ್ದ ಒಂಟಿ ಮನೆಯನ್ನು ನೋಡಿ ಅಲ್ಲಿಗೆ ಬರುತ್ತಾನೆ. ರಾಹಿಲ್ ತೆವಳುತ್ತಾ ಹೇಗೋ ಆ ಮನೆಯ ಮೆಟ್ಟಲು ಹತ್ತಿ ಬಾಗಿಲು ಬಡಿದು “ಅಮ್ಮಾ, ಬಾಗಿಲು ತೆಗಿಯಿರಿ…” ಎಂದನು. “ಹಾಂ….ಯಾರಪ್ಪಾ ಅದೂ? ಈ ಮಳೆಯಲ್ಲಿ, ಈ ಕತ್ತಲ ಗುಹೆಯಲ್ಲಿ…ಯಾರೂ?” ಎಂದು ಮನೆಯ ಒಳಗಿನಿಂದ ಹೆಂಗಸೊಬ್ಬಳು ಕೇಳಿದಳು. ಆಗ ರಾಹಿಲ್ “ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ. ಪ್ಲೀಸ್…” ಎಂದು ಅಂಗಲಾಚುವ ಸಂದರ್ಭವಾಗಿದೆ.

ಸ್ವಾರಸ್ಯ: ಯುದ್ಧದ  ಸಂದರ್ಭದಲ್ಲಿ ಗಯಾಗೊಂಡಿರುವ ರಾಹಿಲನು ರಕ್ಷಣೆಗಾಗಿ ಇನ್ನೊಬ್ಬರ ಸಹಾಯವನ್ನು ಬೇಡುವ ದಯನೀಯ  ಸ್ಥಿತಿ ಇಲ್ಲಿ ಅಭಿವ್ಯಕ್ತಗೊಂಡಿದೆ.

2. “ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ಧಪಡಿಸಿ.”

ಆಯ್ಕೆ: ಈ ವಾಕ್ಯವನ್ನು ಶ್ರೀಮತಿ ಸಾ.ರಾ ಅಬೂಬಕ್ಕರ್ ಅವರ ‘ಚಪ್ಪಲಿಗಳು’ ಕಥಾಸಂಕಲನದಿಂದ  ಆಯ್ದ ‘ಯುದ್ಧ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ: ಈ ಮಾತನ್ನು ರಾಹಿಲನು ಮುದುಕಿಗೆ ಹೇಳಿದನು. ಮನೆಯ ಒಳಗಡೆಗೆ ಹೋದ ರಾಹಿಲನಿಗೆ ಮುದುಕಿಯ ಸೊಸೆ ಹೆರಿಗೆ ನೋವು ತಿನ್ನುತ್ತಿದ್ದಾಳೆ ಎಂದು ಗೊತ್ತಾಗುತ್ತದೆ. ರಾಹಿಲನು ತಾನು ಡಾಕ್ಟರ್  ಎಂದು ಹೇಳಿದಾಗ ಮುದುಕಿಯು ಆತನನ್ನು ತನ್ನ ಸೊಸೆ  ಇರುವ ಕೋಣೆಗೆ ಕರೆದು ಕೊಂಡು ಹೋದಳು. ಆಗ ರಾಹಿಲನು “ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ಧಪಡಿಸಿ.” ಎಂದು ಮುದುಕಿಗೆ ಹೇಳಿದ ಸಂದರ್ಭವಾಗಿದೆ.

ಸ್ವಾರಸ್ಯ : ರಾಹಿಲನು ಗಾಯಗೊಂಡು ನೋವಿನಲ್ಲಿದ್ದರೂ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಪರೋಪಕಾರ, ಮಾನವೀಯತೆ  ಗುಣ ಈ ವಾಕ್ಯದಲ್ಲಿ ಅಭಿವ್ಯಕ್ತಗೊಂಡಿದೆ.

3. “ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ?”

ಆಯ್ಕೆ: ಈ ವಾಕ್ಯವನ್ನು ಶ್ರೀಮತಿ ಸಾರಾ ಅಬೂಬಕ್ಕರ್ ಅವರ ‘ಚಪ್ಪಲಿಗಳು’ ಕಥಾಸಂಕಲನದಿಂದ ಆಯ್ದ ‘ಯುದ್ಧ’ ಎಂಬ ಪಾಠದಿಂದ ಆರಿಸಿಕೊಳ್ಳಲಾದೆ.

ಸಂದರ್ಭ: ಈ ಮಾತನ್ನು ಮುದುಕಿ ಮನದಲ್ಲಿ ಸ್ಮರಿಸಿಕೊಳ್ಳುತ್ತಾಳೆ. ತಮ್ಮ ಮನೆಯೋಳಗಿರುವ ರಾಹಿಲನು ತಮ್ಮ ದೇಶದವರಲ್ಲ, ತಮ್ಮ ದೇಶಕ್ಕೆ ದ್ರೋಹ ಬಗೆವವನು ಎಂಬ ಸಂದೇಹ ಮೂಡಿ ಕ್ಷಣಕಾಲ ಕಣ್ಣನ್ನು ಕೆಂಪು ಮಾಡಿಕೊಂಡಳು. ಸಮೀಪದಲ್ಲಿದ್ದ ರಾಹಿಲನ ಮುಖ ನೋಡಿದಳು. ಆತನ ಅಸಹಾಯಕತೆಯನ್ನು, ದಯನೀಯ ನೋಟವನ್ನು ನೋಡಿ “ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ?” ಎಂದು ತನ್ನ ಮನದಲ್ಲಿ ಅಂದುಕೊಳ್ಳುವ ಸಂದರ್ಭವಾಗಿದೆ. ಸ್ವಾರಸ್ಯ : ರಾಹಿಲನು ತಮ್ಮ  ವೈರಿ ದೇಶದವನ್ನು ಎಂದು ತಿಳಿಸಿದರೂ ಸಹ ಆತನ ಸಹಾಯ, ಮಾನವೀಯತೆ ಗುಣ, ದಯನಿಯವಾದ ನೋಟವನ್ನು ನೋಡಿ ಮುದುಕಿ ಮಾತೃವಾತ್ಸಲ್ಯ ತೋರಿಸಿದ ಗುಣ ಸ್ವಾರಸ್ಯವಾಗಿ ಮೂಡಿಬಂದಿದೆ.

Yuddha lesson questions

4. ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ!”

ಆಯ್ಕೆ: ಈ ವಾಕ್ಯವನ್ನು ಶ್ರೀಮತಿ ಸಾರಾ ಅಬೂಬಕ್ಕರ್ ಅವರ ‘ಚಪ್ಪಲಿಗಳು’ ಕಥಾಸಂಕಲನದಿಂದ ಆಯ್ದ ‘ಯುದ್ಧ’ ಎಂಬ ಪಾಠದಿಂದ ಆರಿಸಿಕೊಳ್ಳಲಾದೆ.

ಸಂದರ್ಭ: ಈ ಮಾತನ್ನು ಮುದುಕಿಯು ತನ್ನ ದೇಶದ ಸೈನಿಕರಿಗೆ ಹೇಳಿದಳು. ರಾಹಿಲನು ಮುದುಕಿಯ ಮನೆಯಲ್ಲಿ ರಕ್ಷಣೆ  ಪಡೆಯುತ್ತಿದ್ದ ಸಂದರ್ಭದಲ್ಲಿ ಸೈನಿಕ ಉಡುಪಿನಲ್ಲಿದ್ದ ನಾಲ್ಕೈದು  ಜನರು ಮುದುಕಿಯ ಮನೆಗೆ ಬಂದು “ಈ ಕಡೆ ಯಾರಾದರೂ ಗಾಯಗೊಂಡ ಸೈನಿಕರು ಬಂದಿದ್ದಾರೆಯೇ?” ಎಂದು ಕೇಳುತ್ತಾ ಒಳನುಗ್ಗಿದರು. ಮುದುಕಿ “ಇಲ್ಲವಲ್ಲಾ?” ಎಂದು ನುಡಿದಳು. “ಆದರೂ ಈ ಮನೆಯಲ್ಲೊಮ್ಮೆ ನೋಡಿ ಬಿಡಿ.” ಎಂದು ಒಬ್ಬ ಅಪ್ಪಣೆ ಇಟ್ಟನು. ಉಳಿದವರು ಒಳಹೊಕ್ಕು ಶೋಧಿಸುವಾಗ ಮುದುಕಿ ಅಳುತ್ತಾ, ಹೂಂ…ನೋಡಿ; “ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ!” ಎಂದು ಹೇಳಿದ ಸಂದರ್ಭವಾಗಿದೆ. ಸ್ವಾರಸ್ಯ: ಯುದ್ಧ ತನ್ನ ಮೊಮ್ಮಗನನ್ನು ಬಲಿ ತೆಗೆದುಕೊಂಡಿತು ಎಂಬ ಮುದುಕಿ  ದುಃಖದ ಭಾವನೆ ಈ ವಾಕ್ಯದಲ್ಲಿ ಮಡುಗಟ್ಟಿದೆ.

Watch this video for the explanation of Yuddha lesson questions and answers for class 10.

Click here to download Yuddha lesson notes