Sukumara Swami Kathe question and answer

Sukumara Swami Kathe question and answer for class 10. Sukumara Swamiya Kathe Kannada Lesson Notes is provided. ಸುಕುಮಾರಸ್ವಾಮಿ ಕಥೆ ಪಾಠದ ಪ್ರಶ್ನೆ ಹಾಗು ಉತ್ತರಗಳು.

In this post we are going to learn notes of the lesson Sukumara Swami Kathe for SSLC. Sukumara Swami Kathe questions and answers.

To get more video notes for class 10, visit our YouTube channel. This channel is very useful for SSLC Kannada notes.

Sukumara Swami Kathe question and answer

Notes of the lesson Sukumara Swami Kathe for SSLC

) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

1. ಯಶೋಭದ್ರೆಯು ರತ್ನ ಕಂಬಳಿಗಳನ್ನು ಯಾರಿಗೆ ಕೊಟ್ಟಳು?

ಯಶೋಭದ್ರೆಯು ರತ್ನ ಕಂಬಳಿಗಳನ್ನು ತನ್ನ ಮೂವತ್ತೆರಡು ಸೊಸೆಯರಿಗೆ ಕೊಟ್ಟಳು.

2. ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ ಬಿದ್ದಿತು?

ಅರಸ ವೃಷಭಾಂಕನ ಉಂಗುರವು ಸ್ನಾನ  ಮಾಡುವ ಸಮಯದಲ್ಲಿ ಕೆಳಕ್ಕೆ ಬಿದ್ದಿತು.

3. ಸುಕುಮಾರಸ್ವಾಮಿಯ ತಂದೆ ತಾಯಿಗಳ ಹೆಸರೇನು ?

ಸುಕುಮಾರಸ್ವಾಮಿಯ ತಂದೆ ಸೂರದತ್ತ , ತಾಯಿ ಯಶೋಭದ್ರೆ.

4. ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?

ಸುಕುಮಾರಸ್ವಾಮಿಗೆ ಸೆಟ್ಟಿಯ ಪಟ್ಟವನ್ನು ಕಟ್ಟಲಾಯಿತು.

5. ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?

ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಈತನು ಯಾವ ಒಂದು ಕಾಲದಲ್ಲಿ ಋಷಿಯರ ರೂಪವನ್ನು ಕಾಣುತ್ತಾನೋ ಅಂದು ತಪ್ಪಸ್ಸಿಗೆ ಹೋಗುತ್ತಾನೆಂದು ಹೇಳಿದನು.

) ಕೊಟ್ಟಿರುವ ಪ್ರಶ್ನೆಗಳಿಗೆ ಮೂರುನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಸುಕುಮಾರಸ್ವಾಮಿಯು ಹೇಗೆ ಸುಖಭೋಗಗಳನ್ನು ಅನುಭವಿಸುತ್ತಿದ್ದನು?

ಸುಕುಮಾರಸ್ವಾಮಿಯು ಅತ್ಯಂತ ರೂಪ ಲಾವಣ್ಯ, ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು. ಅವನಿಗೆ ಮೂವತ್ತೆರಡು ಲತಾಗೃಹಗಳೂ ಅತ್ಯಂತ ರೂಪ , ಲಾವಣ್ಯ , ಸೌಭಾಗ್ಯ , ಕಾಂತಿ , ಹಾವ , ಭಾವ , ವಿಲಾಸ , ವಿಭ್ರಮಗಳಿಂದ ಕೂಡಿದ ದೇವತಾಸ್ತ್ರೀಯರನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರೀಯರೂ ಇದ್ದರು , ಮೂವತ್ತೆರಡು ಬಗೆಯ ನಾಟ್ಯಗಳು , ಮೂವತ್ತೆರಡು ಕೋಟಿ ಹೊನ್ನು , ಐದು ಬಗೆಯ ರತ್ನಗಳು ಎಂಬಿವೆಲ್ಲವುಗಳನ್ನು ಹೊಂದಿದ್ದ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು .

2. ಅರಸ ವೃಷಭಾಂಕನು ಆಶ್ಚರ್ಯಗೊಳ್ಳಲು ಕಾರಣವೇನು?

ವೃಷಭಾಂಕನು ಕೊಂಡುಕೊಳ್ಳಲಾಗದ ರತ್ನಗಂಬಳಿಗಳನ್ನ  ಸುಕುಮಾರ ಸ್ವಾಮಿಯ ತಾಯಿ ಯಶೋಭದ್ರೆ ಖರೀದಿಸಿದಳು. ಅವುಗಳನ್ನು ಮೂವತ್ತೆರಡು ತುಂಡುಗಳನ್ನಗಿ ಮಾಡಿ ಸೊಸೆಯಂದಿರಿಗೆ ನೀಡಿದಳು. ಅವರು ಅವುಗಳನ್ನು ಚಪ್ಪಲಿಗಳಿಗೆ ಸಿಕ್ಕಿಸಿಕೊಂಡರು. ಈ ಸಂಗತಿಯನ್ನು ತಿಳಿದು ವೃಷಭಾಂಕನು ಆಶ್ಚರ್ಯಪಟ್ಟನು.

3. ವೃಷಭಾಂಕನು ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದುಕೊಳ್ಳಲು ಕಾರಣವೇನು?

ವೃಷಭಾಂಕನು ಸುಕುಮಾರಸ್ವಾಮಿಯ ಮನೆಗೆ ಆಗಮಿಸಿದಾಗ,ಸಜ್ಜನರೊ  ಸೇವಕರೊ ಬಿಳಿಸಾಸುವೆಗಳನ್ನು ಮಂಗಳಕರವೆಂದು  ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆ ಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ  ಒತ್ತಿದ್ದರಿಂದ ಸೊಂಟವನ್ನುಅಲುಗಾಡಿಸಿದನು . ದೀಪ ನೋಡಿದಾಗ ಅವನ ಕಣ್ಣೀರು ಸುರಿಯುತ್ತಿತ್ತು. ಊಟ ಮಾಡುವಾಗ ಸುಕುಮಾರಸ್ವಾಮಿ ಅರ್ಧ ಆಹಾರ ನುಂಗುತ್ತಾ ಇನ್ನುಳಿದ ಅರ್ಧ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು  ನೋಡಿ ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದು ಭಾವಿಸಿದನು.

4. ಸುಕುಮಾರಸ್ವಾಮಿಯ ವ್ಯಾದಿಗೆ ಮದ್ದನ್ನು ಏಕೆ ಮಾಡಿಸಿಲ್ಲ ಎಂದು ಅರಸನು ಕೇಳಿದಾಗ ತಾಯಿ ಯಶೋಭದ್ರೆಯು ಏನೆಂದು ಹೇಳಿದಳು?

ದೇವಾ ಆತನಿಗೆ ಇವು ರೋಗವಲ್ಲವು ಮಂತ್ರಾಕ್ಷತೆ  ಹಾಕಿದ್ದರಿಂದ ಬಿಳಿ ಸಾಸಿವೆಗಳು ಒತ್ತಲು ಸಹಿಸದೆ ಸೊಂಟವನ್ನು ಅಲುಗಾಡಿಸಿದನು. ಆತನೂ  ಯಾವ ಕಾಲದಲ್ಲೂ ಮಾಣಿಕ್ಯದ ಬೆಳಕಿನಲ್ಲಿ ಇರುವುದರಿಂದ ದೀಪದ ಬೆಳಕಿಗೆ ಸಹಿಸದೆ ಕಣ್ಣಿರು ಬರುತ್ತಿತ್ತು, ಮತ್ತೆ ನೀವು ಬಂದಿದ್ದರಿಂದ  ಸುವಾಸನೆ ಭರಿಸಿದ ಅಕ್ಕಿಯಲ್ಲಿ ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು  ಮಾಡಿದ್ದರಿಂದ ಸುವಾಸಿತ ಅಕ್ಕಿಯ ಅನ್ನವನ್ನು  ನುಂಗುತ್ತಿದ್ದನು, ಉಳಿದ ಅನ್ನವನ್ನು  ಉಗುಳುತ್ತಿದ್ದನು. ಆದುದರಿಂದ ಇವು ವ್ಯಾಧಿಗಳಲ್ಲ ಎಂದು ಹೇಳಿದಳು.

question and answer of the lesson Sukumara Swami Kathe

) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟುಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಸುಕುಮಾರಸ್ವಾಮಿಯ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

ಉಜ್ಜಯಿನಿಯೆಂಬ ಪಟ್ಟಣದಲ್ಲಿ ಯಶೋಭದ್ರೆ ಮತ್ತು ಸೂರದತ್ತ ಎಂಬ ದಂಪತಿಗೆ ಸುಕುಮಾರಸ್ವಾಮಿಯೆಂಬ ಮಗ ಜನಿಸಿದನು . ಆ ದಿನವೇ ವೈರಾಗ್ಯವುಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟ ಪಟ್ಟವನ್ನು ಕಟ್ಟಿ ತಪಸ್ಸಿಗೆ ತೆರಳಿದನು . ಸುಕುಮಾರಸ್ವಾಮಿಯು ಬೆಳೆದು ದೊಡ್ಡವನಾಗಿ ಅತ್ಯಂತ ಸುಂದರನಾಗಿದ್ದನಲ್ಲದೆ ಬಹಳ ವೈಭವ – ಸುಖ – ಸಂತೋಷಗಳಿಂದ ಕೂಡಿದ್ದನು.

ವೃಷಭಾಂಕನು ಸುಕುಮಾರಸ್ವಾಮಿಯ ಮನೆಗೆ ಆಗಮಿಸಿದಾಗ,ಸಜ್ಜನರೊ  ಸೇವಕರೊ ಬಿಳಿಸಾಸುವೆಗಳನ್ನು ಮಂಗಳಕರವೆಂದು  ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆ ಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ  ಒತ್ತಿದ್ದರಿಂದ ಸೊಂಟವನ್ನುಅಲುಗಾಡಿಸಿದನು . ದೀಪ ನೋಡಿದಾಗ ಅವನ ಕಣ್ಣೀರು ಸುರಿಯುತ್ತಿತ್ತು. ಊಟ ಮಾಡುವಾಗ ಸುಕುಮಾರಸ್ವಾಮಿ ಅರ್ಧ ಆಹಾರ ನುಂಗುತ್ತಾ ಇನ್ನುಳಿದ ಅರ್ಧ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು  ನೋಡಿ ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದು ಭಾವಿಸಿದನು.

ಸುಕುಮಾರಸ್ವಾಮಿಯ ವ್ಯಾದಿಗೆ ಮದ್ದನ್ನು ಏಕೆ ಮಾಡಿಸಿಲ್ಲ ಎಂದು ಅರಸನು ಕೇಳಿದಾಗ ತಾಯಿ ಯಶೋಭದ್ರೆಯು ದೇವಾ ಆತನಿಗೆ ಇವು ರೋಗವಲ್ಲವು ಮಂತ್ರಾಕ್ಷತೆ  ಹಾಕಿದ್ದರಿಂದ ಬಿಳಿ ಸಾಸಿವೆಗಳು ಒತ್ತಲು ಸಹಿಸದೆ ಸೊಂಟವನ್ನು ಅಲುಗಾಡಿಸಿದನು. ಆತನೂ  ಯಾವ ಕಾಲದಲ್ಲೂ ಮಾಣಿಕ್ಯದ ಬೆಳಕಿನಲ್ಲಿ ಇರುವುದರಿಂದ ದೀಪದ ಬೆಳಕಿಗೆ ಸಹಿಸದೆ ಕಣ್ಣಿರು ಬರುತ್ತಿತ್ತು, ಮತ್ತೆ ಭರಿಸಿದ ಅಕ್ಕಿಯಲ್ಲಿ ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು  ಮಾಡಿದ್ದರಿಂದ ಸುವಾಸಿತ ನುಂಗುತ್ತಿದ್ದನು, ಉಳಿದದ್ದನು   ಉಗುಳುತ್ತಿದ್ದನು. ಇವು ವ್ಯಾಧಿಗಳಲ್ಲ ಎಂದು ಹೇಳಿದಳು. ಅದನ್ನೆಲ್ಲ ಕೇಳಿ ಅರಸನು ಆಶ್ಚರ್ಯಪಟ್ಟನು. ಈತನ ಒಂದು ಕ್ಷಣದ ಸುಖ – ಭೋಗ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ, ಉಪಭೋಗಗಳು ಸಮಾನವಾಗುವುದಿಲ್ಲ . ಆದುದರಿಂದ ಲೋಕದಲ್ಲಿ ನಿಜವಾಗಿಯೂ ಈತನೇ ಸುಖಿ ಎಂದು ಅರಸನು ಅವನಿಗೆ ‘ ಅವಂತಿ ಸುಕುಮಾರ ‘ ಎಂದು ಹೆಸರನ್ನಿಟ್ಟನು.

10th class Kannada notes download

2. ‘ಸುಕುಮಾರ’ – ಎಂಬ ಹೆಸರು ಸುಕುಮಾರ ಸ್ವಾಮಿಗೆ ಹೇಗೆ ಅನ್ವರ್ಥವಾಗುತ್ತದೆ ? ವಿವರಿಸಿ.

ಸುಕುಮಾರಸ್ವಾಮಿಯು ಯುವಕನಾಗಿ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿಯಿಂದ  ಕೂಡಿದವನಾಗಿದ್ದು. ಆತನಿಗೆ ಮೂವತ್ತೆರಡು ಲತಾಗೃಹಗಳು, ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವಭಾವ ವಿಲಾಸದಿಂದ ಒಡತಿಯರಾದ ದೇವಲೋಕದ ಅಪ್ಸರ ಸ್ತೀಯರನ್ನೇ ಹೋಲುವಂತಹ ಮೂವತ್ತೆರಡು ದಿವ್ಯಸ್ತ್ರೀಯರು ಇದ್ದರು. ಮೂವತ್ತೆರಡು ನಾಟ್ಯಶಾಲೆಗಳು, ಮೂವತ್ತೆರಡು ಕೋಟಿಸಂಪತ್ತು ಇದ್ದವು. ಇವುಗಳೊಂದಿಗೆ ಕೂಡಿ ಭೋಗೋಪಭೋಗ ಸುಖಗಳನ್ನು ಅನುಭವಿಸುತ್ತಿದ್ದನು.

ವೃಷಭಾಂಕ ಅರಸನು  ಸುಕುಮಾರ ಸ್ವಾಮಿಯ ಕೋಮಲವಾದ ಶರೀರವನ್ನು ನೋಡಿ ಮನ್ಮಥನನ್ನ  ಅಪ್ಪಿಕೊಳ್ಳುವಂತೆ ಅಪ್ಪಿಕೊಂಡನು. ಸ್ವಜನ ಒತ್ತಿದಾಗ ಸೊಂಟವನ್ನು ಅಲುಗಾಡಿಸಿದ್ದನ್ನು ಗಮನಿಸಿದಾಗ ಆತ ಮೃದು ಶರೀರವುಳ್ಳವನಾಗಿದ್ದನೆಂದು ತಿಳಿಯಬಹುದು. ದೀಪವನ್ನು ನೋಡಿದಾಗ ಕಣ್ಣೀರು ಸುರಿಸಿದನು ಎಂಬುದನ್ನು ನೋಡಿದಾಗ ಯಾವಾಗಲೂ ಮಾಣಿಕ್ಯದ ಬೆಳಕಿನಲ್ಲಿ ಇರುತ್ತಿದ್ದನು ಎಂಬ ಆತನ ಸೂಕ್ಷ್ಮದ್ರುಷ್ಟಿಯನ್ನು ಅರಿಯಬಹುದು.

ಊಟ ಮಾಡವಾಗ ಸುಕುಮಾರಸ್ವಾಮಿಯು ಸುವಾಸನೆ ಭರಿಸಿದ ಅಕ್ಕಿಯಲ್ಲಿ ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು ಮಾಡಿದ್ದರೂ ಸುವಾಸಿತ ಅನ್ನವನ್ನು  ಮಾತ್ರ ನುಂಗುತ್ತಿದ್ದನು, ಉಳಿದದ್ದನು ಉಗುಳುತ್ತಿದ್ದನು ಎಂಬುದನ್ನು  ಗಮನಿಸಿದರೆ ಆತನ ಸುಆಹಾರದ ವಿಚಾರ ತಿಳಿಯುತ್ತದೆ. ಇಂತಹ ವಿಚಾರಗಳನ್ನು  ತಿಳಿದ ಅರಸ ಆಶ್ಚರ್ಯಗೊಂಡು ಈತನ ಕ್ಷಣಮಾತ್ರದ ಭೋಗಕ್ಕೋ ಸುಖಕ್ಕೂ ನಮ್ಮ ಎಲ್ಲಾ ಕಾಲದಲ್ಲೂ ಅರಸುತನವನ್ನು ಮಾಡಿದ ಭೋಗೋಪಭೋಗಗಳು  ಸಮಾನವಲ್ಲ. ಅದರಿಂದ ಶ್ರೇಷ್ಠನಾದ ಸುಖಿ ಎಂದು ಹೇಳಿ ಅರಸನು ಆವಂತಿ ಸುಕುಮಾರ ಎಂದು ಹೆಸರನ್ನು ಇಟ್ಟದ್ದು ಆತನ ಹೆಸರಿಗೆ ಅನ್ವಯ  ವಾಗುತ್ತದೆ.

SSLC Kannada notes

) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು.”

ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ವಡ್ಡಾರಾಧನೆ ’ ಎಂಬ ಕೃತಿಯಿಂದ ಆರಿಸಲಾದ ‘ಸುಕುಮಾರಸ್ವಾಮಿ ಕಥೆ ’ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ರಾಜ ವೃಷಭಾಂಕನು ಸುಕುಮಾರಸ್ವಾಮಿಯ ಮನೆಗೆ ಬಂದು ಸುಕುಮಾರನು ಎಲ್ಲಿದ್ದಾನೆ  ಎಂದಾಗ ಅದಕ್ಕೆ ಉತ್ತರವಾಗಿ ಸ್ವಾಮಿ , ಅವನು ಬಹಳ ಸಾಧು, ನೀವು ಬಂದಿರುವುದನ್ನು ಅವನು ತಿಳಿದಿಲ್ಲ. ಉಪ್ಪರಿಗೆಯ ಮೇಲೆ ಇದ್ದಾನೆ ಎಂದು ಹೇಳಿದಳು. ಯಶೋಭದ್ರೆ ಸುಕುಮಾರನಲ್ಲಿಗೆ ಹೋಗಿ ಮಗನೇ, ರಾಜರು ಬಂದಿದ್ದಾರೆ ಬಾ ಹೋಗೋಣ  ಎಂದಳು. ಆಗ ಸುಕುಮಾರನು ರಾಜರೆಂದರೆ ಯಾರು? ಎಂದು ಕೇಳಲು, ತಾಯಿಯು ನಮ್ಮನ್ನು ಆಳುವವರು ಎಂದು ಹೇಳಿದ ಸಂದರ್ಭದಲ್ಲಿ ಸುಕುಮಾರನು ಈ ಮಾತನ್ನು ಹೇಳುತ್ತಾನೆ.

ಸ್ವಾರಸ್ಯ : ಹೊರಗಿನ ಪ್ರಪಂಚದ ಅರಿವೇ ಇಲ್ಲದ ಸುಕುಮಾರನು ತನ್ನ ಮನೆಯೇ ಅರಮನೆ, ನಾವೇ ಆಳುವವರೆಂದು ಭಾವಿಸಿದ್ದ. ಸುಕುಮಾರಸ್ವಾಮಿಯು ನಮ್ಮನ್ನು ಆಳುವವರೂ ಇದ್ದಾರೆಯೇ ಎಂದು ವಿಸ್ಮಯಪಡುವುದು ಇಲ್ಲಿ ಸ್ವಾರಸ್ಯಕರವಾಗಿದೆ.

2. “ರಿಸಿಯರ ರೂಪಂ ಕಾಣ್ಗುಮಂದೀತನು೦ ತಪಂಬಡುಗುಮ್.”

ಆಯ್ಕೆ : ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು’ ಬರೆದಿರುವ ‘ವಡ್ಡಾರಾಧನೆ ’ ಕೃತಿಯಿಂದ ಆರಿಸಲಾದ

‘ಸುಕುಮಾರಸ್ವಾಮಿ ಕಥೆ ’ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಈ ಮಾತನ್ನು  ನೈಮಿತ್ತಕನು  ಯಶೋಭದ್ರೆಗೆ ಹೇಳುತ್ತಾನೇ.  ಸುಕುಮಾರ ಸ್ವಾಮಿಯು ¨ಭೋಗೋಪಬೋಗ ಸುಖಗಳನ್ನು ಅನುಭವಿಸುತ್ತಇರುವಾಗ ಒಂದು ದಿನ ನೈಮಿತ್ತಿಕನೋಬ್ಬನು ಅರಮನೆಗೆ ಬರುತ್ತಾನೆ. ಅರಮನೆಯಲ್ಲಿದ್ದ ಸುಕುಮಾರಸ್ವಾಮಿಯನ್ನು ನೋಡಿ ಯಾವ ಒಂದು ಕಾಲದಲ್ಲಿ “ರಿಸಿಯರ ರೂಪಂ ಕಾಣ್ಗುಮಂದೀತನು೦ ತಪಂಬಡುಗುಮ್” (ಋಷಿಗಳ ರೂಪವನ್ನು ಕಾಣುವನೋ ಅಂದು ಈತನು  ತಪಸ್ಸಿಗೆ ಹೋಗುವನು ) ಎಂದು ಹೇಳಿದ ಸಂದರ್ಭವಾಗಿದೆ.

ಸ್ವಾರಸ್ಯ : ಸುಕುಮಾರಸ್ವಾಮಿ ವೈರಾಗ್ಯ ಹೊಂದಿ ತಪಸ್ಸಿಗೆ  ಹೋಗುವುದ ಮುನ್ಸೂಚನೆ ನೀಡುವ ನೈಮಿತ್ತಿಕನ ಮಾತು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.

3. “ಆವಂತಿ ಸುಕುಮಾರನೆಂದು ಹೆಸರನಿಟ್ಟಂ. ”

ಆಯ್ಕೆ : ಈ ವಾಕ್ಯವನ್ನು ಶಿವಕೋಟ್ಯಾಚಾರ್ಯರು ಬರೆದಿರುವ ‘ವಡ್ಡಾರಾಧನೆ’ ಎಂಬ ಕೃತಿಯಿಂದ ಆರಿಸಲಾದ ‘ಸುಕುಮಾರಸ್ವಾಮಿ ಕಥೆ ‘ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ಸುಕುಮಾರನ ತಾಯಿಯ ಮೂಲಕ ಆತನ ವೈಭವ – ಗುಣ – ನಡತೆಗಳನ್ನೂ ಆತನು ಅನುಭವಿಸುತ್ತಿದ್ದ ಸುಖ ಭೋಗಗಳನ್ನೂ ಕೇಳಿದ ಕೂಡಲೇ ಸ್ವತಃ ರಾಜನೇ ಈತನ ಒಂದು ಕ್ಷಣದ ಸುಖ – ಭೋಗಗಳಿಗೆ ನನ್ನ ಇಡೀ ಅರಸುತನದ ಕಾಲದಲ್ಲಿ ಅನುಭವಿಸಿದ ಭೋಗ ಉಪಭೋಗಗಳು ಸಮಾನವಾಗುವುದಿಲ್ಲ. ಆದುದರಿಂದ ಲೋಕದಲ್ಲಿ ನಿಜವಾಗಿಯೂ ಈತನೇ ಸುಖಿ ಎಂದು ಸಂತಸಗೊಂಡ ಸಂದರ್ಭದಲ್ಲಿ ಅರಸನು ಅವನಿಗೆ ‘ಅವಂತಿ ಸುಕುಮಾರ’ ಎಂದು ಹೆಸರನ್ನಿಟ್ಟನು ಎಂಬಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ : ಸ್ವತಃ ರಾಜನೇ ಸುಕುಮಾರಸ್ವಾಮಿಯ ವೈಭವವನ್ನು ಮೆಚ್ಚಿ , ಈತನ ವೈಭವದ ಮುಂದೆ ತನ್ನ ವೈಭವ ಏನೇನೂ ಅಲ್ಲ . ಎಂದು ಅವನಿಗೆ ‘ಅವಂತಿ ಸುಕುಮಾರ ‘ ಎಂದು ಹೆಸರಿಟ್ಟದ್ದು ಸ್ವಾರಸ್ಯಮೂರ್ಣವಾಗಿ ಮೂಡಿಬಂದಿದೆ.

ಸುಕುಮಾರಸ್ವಾಮಿ ಕಥೆ ಪಾಠದ ಪ್ರಶ್ನೆ ಹಾಗು ಉತ್ತರಗಳು

4. “ಅರ್ಧಾಹಾರಮಂ ನುಂಗುಗುದರ್ಧಾಹಾರಮನುಗುಟ್ಟುಮದಂ ನೋಡಿ.”

ಆಯ್ಕೆ : ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು’ ಬರೆದಿರುವ ‘ವಡ್ಡಾರಾಧನೆ’ ಕೃತಿಯಿಂದ ಆರಿಸಲಾದ ‘ಸುಕುಮಾರಸ್ವಾಮಿ ಕಥೆ ’ಎಂಬ ಪಾಠ ದಿಂದ ಆರಿಸಿಕೊಳ್ಳಲಾಗಿದೆ.

ಸಂದರ್ಭ : ವೃಷಭಾಂಕನು ಸುಕುಮಾರನೊಂದಿಗೆ ಕುಳಿತುಕೊಂಡು ನಾನಾ ಪ್ರಕಾರದ ಸಿಹಿಯಾದ ತಿನಿಸುಗಳನ್ನು ಊಟಮಾಡುತ್ತಿದ್ದ ಸಂದರ್ಭದಲ್ಲಿ ಸುಕುಮಾರಸ್ವಾಮಿ “ಅರ್ಧಾಹಾರಮಂ ನುಂಗುಗುಮರ್ಧಾಹಾರಮನುಗುೞ್ಗುಮದ೦ ನೋಡಿ” (ಅರ್ಧ ಆಹಾರವನ್ನು  ನುಂಗುತ್ತಿರಲು ಅರ್ಧ ಆಹಾರವನ್ನು  ಉಗುಳುವುದನ್ನು  ನೋಡಿ) ಇದು ಸಹ ಒಂದು ರೋಗ, ಊಟದ ಮೇಲೆ ರುಚಿಯಿಲ್ಲದುದು” ಎಂದು ರಾಜನು ಭಾವಿಸಿಕೊಂಡ ಸಂದರ್ಭವಾಗಿದೆ ವಾಗಿದೆ.

ಸ್ವಾರಸ್ಯ : ಸುಕುಮಾರಸ್ವಾಮಿ ಸುವಾಸನೆಯಿಂದ ಕೂಡಿದ ಅಕ್ಕಿಯ ಅನ್ನವನ್ನು ಮಾತ್ರ ನುಂಗುತ್ತಿದ್ದನು  ಬೇರೆ ಅಕ್ಕಿಯಿಂದ ಮಾಡಿದ ಅನ್ನುವನ್ನು ಉಗುಳುತ್ತಿದ್ದದ್ದನ್ನು ನೋಡಿದರೆ ಆತನ ಜೀವನ ಸುಖೋಪಭೋಗವಾಗಿತ್ತು ಎಂಬುದನ್ನು  ಈ ವಾಕ್ಯದ ಮೂಲಕ ಕವಿ ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ.

Watch this video for the explanation of Sukumara Swami Kathe question and answer for class 10.

Click here to download Sukumara Swami Kathe question and answer