SSLC Science FA 4 question paper 2022-23

SSLC Science FA 4 question paper 2022-23

SSLC Science FA 4 question paper 2022-23. Download 10th class FA 4 question papers. Science FA 4 question papers for class 10.

In this post we have uploaded 10th standard FA 4 question papers with key answer. Formative assessment question papers for SSLC.

To get more video notes for class 10, visit our YouTube channel. This channel is very useful for SSLC exam preparation.

Subject: Science

Class: 10th

Medium: Kannada

State: Karnataka

Cost: Free

Sub-topic: Question paper with key

File type: PDF

Answers: Given key answer

Share: Sharable link is given

Copyright: Protected

Download: Given download link

Year: 2022-23

Board: Karnataka KSEEB

Print Enable: Yes

Editable Text: No

Copy Text: No

Scanned Copy: Yes

Password Encrypted: No

File Size Reduced: No

Quality: High

Download Link Available: Yes

File View Available: Yes

Click here to download SSLC Science FA 4 question paper

Click here to download key answer

Watch this video for the explanation of SSLC Science FA 4 question paper 2022-23.

10th standard FA 4 question papers

ವಿಷಯ: ವಿಜ್ಞಾನ                                   ರೂಪಣಾತ್ಮಕ ಪರೀಕ್ಷೆ ೪                ಅಂಕಗಳು : ೨೦

ತರಗತಿ: ೧೦ನೇ                                                                                                               ಸಮಯ: ೪೦ ನಿಮಿಷಗಳು

I. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿಉತ್ತರಿಸಿ.  4×1=4

1. ನೇರ ವಿದ್ಯುತ್ ಪ್ರವಾಹದ ಕೆಲವು ಆಕರಗಳನ್ನು ಹೆಸರಿಸಿ.

2. ಓಝೋನ್ ಎಂದರೇನು?

3. ಸೌರ ಜಲತಾಪಕವನ್ನು ಬಿಸಿನೀರನ್ನು ಪಡೆಯಲು ಯಾವಾಗ ಬಳಸುವುದಿಲ್ಲ?

4. ಕಾಡುಗಳ ಸಂರಕ್ಷಣೆಗಾಗಿ ಒಂದು ಸಲಹೆ ನೀಡಿ.

II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.   3×2=6

5. ವಿದ್ಯುತ್ ಜನಕದ ತತ್ವವನ್ನು ತಿಳಿಸಿರಿ.

                       ಅಥವಾ

ಪೋಷಣಾ ಸ್ತರಗಳು ಎಂದರೇನು? ಆಹಾರ ಸರಪಳಿಗೆ ಒಂದು ಉದಾಹರಣೆ ಕೊಡಿ ಮತ್ತು ಅದರಲ್ಲಿನ ವಿವಿಧಪೋಷಣಾಸ್ತರಗಳನ್ನು ಹೆಸರಿಸಿ.

6. ಜ್ಯ ವಿಲೇವಾರಿಯನ್ನು ಕಡಿಮೆ ಮಾಡಲು ಯಾವುದಾದರೂ ಎರಡು ವಿಧಾನ ತಿಳಿಸಿ.

7. ಅಲ್ಪಾವಧಿಯ ಗುರಿಗಳೊಂದಿಗೆ ಪರಿಸರವನ್ನು ದುರ್ಬಳಕೆ ಮಾಡಿಕೊಳ್ಳುವುದರ ಅನುಕೂಲಗಳೇನು?

                                                          ಅಥವಾ

ಹೈಡೋಜನ್ ಅನ್ನು ರಾಕೆಟ್ ನಲ್ಲಿ ಶಕ್ತಿ ಮೂಲವಾಗಿ ಬಳಸಲಾಗಿದೆ. ನೀವು ಇದನ್ನು ಸಂಪೀಡಿತ ನೈಸರ್ಗಿಕ ಅನಿಲ (CNG) ಕ್ಕಿಂತ ಸ್ಥಳ ಎಂದು ಪರಿಗಣಿಸುವಿರಾ? ಏಕೆ? ಅಥವಾ ಎಕಿಲ್ಲಾ?

III. ಈ ಕೆಳಗಿನ ಪ್ರಶ್ನೆಗಳಿಗೆ ಐದುಅಥವಾ ಆರುವಾಕ್ಯಗಳಲ್ಲಿ ಉತ್ತರಿಸಿ.   2×3=6

8. ಪಳೆಯುಳಿಕೆ ಇಂಧನಗಳು ಮತ್ತು ಸೂರ್ಯನನ್ನು ಶಕ್ತಿಯ ನೇರ ಆಕರ ಎಂದು ಪರಿಗಣಿಸಿ ಹೋಲಿಸಿ ಮತ್ತು ವ್ಯತ್ಯಾಸ ತಿಳಿಸಿ.

9. ಗೃಹ ವಿದ್ಯುತ್ ಮಂಡಲಗಳಲ್ಲಿ ಉಂಟಾಗುವ ಓವರ್ ಲೋಡನ್ನು ತಪ್ಪಿಸಲು ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು?

                                                                            ಅಥವಾ

ಮೇಜಿನ ಸಮತಲದ ಮೇಲಿರುವ ಒಂದು ವೃತ್ತಾಕಾರದ ವಾಹಕ ಸುರುಳಿಯನ್ನು ಪರಿಗಣಿಸಿ ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಪ್ರದಕ್ಷಿಣಾಕಾರವಾಗಿ ಪ್ರವಹಿಸುವಂತಿರಲಿ. ಬಲಗೈ ನಿಯಮ ಅನ್ವಯಿಸಿ ಸುರುಳಿಯ ಒಳಭಾಗ ಮತ್ತು ಹೊರಭಾಗದಲ್ಲಿ ಕಾಂತಕ್ಷೇತ್ರದ ದಿಕ್ಕನ್ನು ಕಂಡುಹಿಡಿಯಿರಿ

V. ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸಿ.     2×2=4

10.

ಅ) ದಂಡಾಕಾಂತದ ಸುತ್ತ ಕಾಂತೀಯ ಬಲರೇಖೆಗಳನ್ನು ಎಳೆಯಿರಿ.

ಆ) ವಿದ್ಯುತ್ ಮೋಟಾರಿನ ಅಂದವಾದ ಚಿತ್ರವನ್ನು ಬರೆದು ಭಾಗಗಳನ್ನು ಗುರುತಿಸಿ.

Formative assessment question papers for class 10

I. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿಉತ್ತರಿಸಿ.   4×1=4

1. ಶುಷ್ಕ ಕೋಶ / ಬ್ಯಾಟರಿ , ನೇರ ವಿದ್ಯುತ್‌ ಜನಕ. ( ಡಿ.ಸಿ ಜನರೇಟರ್ )

2. ಓಝೋನ್ ಎನ್ನುವುದು ಆಕ್ಸಿಜನ್ ನ ಮೂರು ಪರಮಾಣುಗಳಿಂದ ರೂಪುಗೊಂಡ ಒಂದು ಅಣುವಾಗಿದೆ.

3. ಮೋಡ ಕವಿದ ದಿನ ಬಳಸುವುದಿಲ್ಲ.

4. ಗಿಡಗಳನ್ನು ನೆಡುವ ಪ್ರಮಾಣವನ್ನು ಹೆಚ್ಚಿಸಬೇಕು. ಜೊತೆಗೆ ಅವುಗಳ ಪೋಷಣೆ ಕೂಡಾ ಮಾಡಬೇಕು.

II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.       3×2=6

5. ವಿದ್ಯುತ್ ಕಾಂತೀಯ ಪ್ರೇರಣೆಯ ತತ್ವದ ಆಧಾರದ ಮೇಲೆ ವಿದ್ಯುತ್‌ ಜನಕ ಕಾರ್ಯ ನಿರ್ವಹಿಸುತ್ತದೆ. ವಾಹಕವನ್ನು ಕಾಂತಕ್ಷೇತ್ರದಲ್ಲಿ ಯಾಂತ್ರಿಕ ಶಕ್ತಿಯ ಸಹಾಯದಿಂದ ತಿರುಗುವಂತೆ ಮಾಡಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ.

6. ಅ) ಜೈವಿಕ ವಿಘಟನೆಯಾಗುವ ವಸ್ತುಗಳಿಗೆ ಹಸಿರು ಬಣ್ಣದ ಮತ್ತು ಜೈವಿಕ ವಿಘಟನೆಯಾಗದ ವಸ್ತುಗಳಿಗೆ ನೀಲಿ ಬಣ್ಣದ ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಡುವುದು.

ಆ) ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು .

7. ಅಲ್ಪಾವಧಿಯ ಗುರಿಗಳೊಂದಿಗೆ ಪರಿಸರವನ್ನು ದುರ್ಬಳಕೆ ಮಾಡುವುದರಿಂದ ಪರಿಸರದಲ್ಲಿರು ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲಗಳು ನಶಿಸಿ ಹೋಗುತ್ತವೆ. ಇದರಿಂದ ಯಾವುದೇ ಅನುಕೂಲಗಳಾವುದಿಲ್ಲ.

III. ಈ ಕೆಳಗಿನ ಪ್ರಶ್ನೆಗಳಿಗೆ ಐದುಅಥವಾ ಆರುವಾಕ್ಯಗಳಲ್ಲಿ ಉತ್ತರಿಸಿ.      2×3=6

8. ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಇಂಧನಗಳನ್ನು ಪಳೆಯುಳಿಕೆ ಇಂಧನಗಳೆನ್ನುವರು.ಇವು ನಮಗೆ ಭೂಮಿಯ ಅಂತರಾಳದಿಂದ ದೊರೆಯುತ್ತವೆ.ಅವು ಮಾನವನ ಉಪಯೋಗಕ್ಕೆ ನೇರವಾಗಿ ದೊರಕುವ ಕಾರಣ ಅವುಗಳನ್ನು ಶಕ್ತಿಯ ನೇರ ಆಕರ ಎನ್ನಬಹುದು.ಆದರೆ ಅವು ಸೀಮಿತ ಶೇಖರಣೆ ಹೊಂದಿವೆ. ಅವು ನವೀಕರಿಸಲಾಗದ ಶಕ್ತಿಯ ಸಂಪನ್ಮೂಲಗಳಾಗಿವೆ. ಒಮ್ಮೆ ಖಾಲಿಯಾದರೆ ಅವುಗಳನ್ನು ಮತ್ತೆ ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಪಳೆಯುಳಿಕೆ ಇಂಧನಗಳು ರೂಪುಗೊಳ್ಳಲು ಮಿಲಿಯಾಂತರ ವರ್ಷಗಳೇ ಬೇಕು. ಅವುಗಳು ಆರ್ಥಿಕವಾಗಿ ತುಂಬಾ ದುಬಾರಿಯಾಗಿವೆ.

ಸೌರಶಕ್ತಿಯು ನವೀಕರಣಗೊಳ್ಳುವ ಶಕ್ತಿಯ ಆಕರವಾಗಿದೆ. ಮತ್ತು ಶಕ್ತಿಯ ನೇರ ಆಕರವಾಗಿದೆ. ಸೂರ್ಯನು ಅಗಾಧವಾದ ಶಕ್ತಿಯನ್ನು ಸುಮಾರು ಐದು ಬಿಲಿಯನ್ ವರುಷಗಳಿಂದ ಹೊರಹೊಮ್ಮಿಸುತ್ತಿದ್ದು ಇನ್ನೂ ಇಷ್ಟು ವರುಷಗಳ ಕಾಲ ಶಕ್ತಿಯನ್ನು ಹೊರಹೊಮ್ಮಿಸುತ್ತಿರುತ್ತಾನೆ. ಸೌರಶಕ್ತಿಯು ನಮಗೆ ಉಚಿತವಾಗಿ ಮತ್ತು ಹೇರಳವಾಗಿ ಸಿಗುವ ಶಕ್ತಿಯ ಆಕರವಾಗಿದೆ.

9.

೧) ಒಂದೇ ಸಾಕೆಟಿಗೆ ಅನೇಕ ಉಪಕರಣಗಳನ್ನು ಜೋಡಿಸಬಾರದು.

೨) ಅನೇಕ ಉಪಕರಣಗಳನ್ನು ಒಟ್ಟಿಗೆ ಬಳಸಬಾರದು.

೩) ಸರಿಯಾಗಿ ಕಾರ್ಯನಿರ್ವಹಿಸದ ಉಪಕರಣಗಳನ್ನು ಬಳಸಲೇಬಾರದು.

೪) ಮಂಡಲದಲ್ಲಿ ಪ್ಯೂಸ್ ಸರಿಯಾಗಿ ಜೊಡಿಸಿರಬೇಕು.

೫) ಅಧಿಕ ಸಾಮರ್ಥ್ಯದ ಉಪಕರಣಗಳನ್ನು ಬಳಸಬಾರದು.

V. ಚಿತ್ರ ಬಿಡಿಸಿ ಭಾಗಗಳನ್ನು ಗುರುತಿಸಿ.       2×2=4

10. ಅ) ದಂಡಾಕಾಂತದ ಸುತ್ತ ಕಾಂತೀಯ ಬಲರೇಖೆಗಳನ್ನು ಎಳೆಯಿರಿ.

ಆ) ವಿದ್ಯುತ್ ಮೋಟಾರಿನ ಅಂದವಾದ ಚಿತ್ರವನ್ನು ಬರೆದು ಭಾಗಗಳನ್ನು ಗುರುತಿಸಿ.