SSLC Science FA 1 question paper 2023-24. Download 10th class FA 1 question papers. Science FA 1 question papers for class 10.
In this post we have uploaded 10th standard FA 1 question papers with key answer. Formative assessment question papers for SSLC.
To get more video notes for class 10, visit our YouTube channel. This channel is very useful for SSLC exam preparation.
Subject: Science
Class: 10th
Medium: Kannada
State: Karnataka
Cost: Free
Sub-topic: FA 1 Question paper with key
File type: PDF
Answers: Given key answer
Share: Sharable link is given
Copyright: Protected
Download: Given download link
Year: 2023-24
Board: Karnataka KSEEB
Print Enable: Yes
Editable Text: No
Copy Text: No
Scanned Copy: Yes
Password Encrypted: No
File Size Reduced: No
Quality: High
Download Link Available: Yes
File View Available: Yes
Click here to download SSLC Science FA 1 question paper
Click here to download FA 1 key answer
Watch this video for the explanation of SSLC Science FA 1 question paper 2023-224.
Formative assessment question papers for class 10
ವಿಷಯ: ವಿಜ್ಞಾನ ರೂಪಣಾತ್ಮಕ ಪರೀಕ್ಷೆ 1 ಅಂಕಗಳು : ೨೦
ತರಗತಿ: ೧೦ನೇ ಸಮಯ: ೪೦ ನಿಮಿಷಗಳು
I. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 4×1=4
1. ಸರಿದೂಗಿಸಿದ ರಾಸಾಯನಿಕ ಸಮೀಕರಣ ಎಂದರೇನು?
2. ಪ್ಲಾಸ್ಟರ್ ಆಫ್ ಪ್ಯಾರಿಸ್ ಅನ್ನು ತೇವಾಂಶ ನಿರೋಧಕ ಸಂಗ್ರಾಹಕದಲ್ಲಿ ಸಂಗ್ರಹಿಸಬೇಕು ಏಕೆ?
3. ಉಭಯವರ್ತಿ ಆಕ್ಸೆಡ್ ಗಳು ಎಂದರೇನು?
4. ನಮ್ಮ ದೇಹದಲ್ಲಿ ಹೀಮೋಗ್ಲೋಬಿನ್ ಕೊರತೆಯಿಂದ ಉಂಟಾಗಬಹುದಾದ ಸಮಸ್ಯೆಗಳೇನು?
II. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 3×2=6
5. ಅಂತರುಷ್ಣಕ ಕ್ರಿಯೆ ಎಂದರೇನು? ಉದಾ ಕೊಡಿ.
6. ಮೊಸರು ಮತ್ತು ಹುಳಿ ಪದಾರ್ಥಗಳನ್ನು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಬಾರದು ಏಕೆ?
7. ಸಾರರಿಕ್ತ ಆಮ್ಲಗಳಿಂದ ಹೈಡ್ರೋಜನ್ ಅನ್ನು ಪಲ್ಲಟಗೊಳಿಸುವ ಎರಡು ಲೋಹಗಳನ್ನು ಹೆಸರಿಸಿ. ಮತ್ತು ಹೈಡ್ರೋಜನ್ ಅನ್ನು ಪಲ್ಲಟಗೊಳಿಸದ ಎರಡು ಲೋಹಗಳನ್ನು ಹೆಸರಿಸಿ.
III. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 2×3=6
8. ವಾಯುವಿಕ ಮತ್ತು ಅವಾಯುವಿಕ ಉಸಿರಾಟಗಳ ನಡುವಿನ ವ್ಯತ್ಯಾಸಗಳೇನು ?
9. ಆಲ್ಕೋಹಾಲ್ ಮತ್ತು ಗ್ಲೂಕೋಸ್ ಮುಂತಾದ ಸಂಯುಕ್ತಗಳೂ ಸಹ ಹೈಡ್ರೋಜನ್ ಅನ್ನು ಹೊಂದಿದ್ದರೂ ಅವುಗಳನ್ನು ಆಮ್ಲಗಳೆಂದು ವರ್ಗೀಕರಿಸಲಾಗಿಲ್ಲ. ಇದನ್ನು ಸಾಧಿಸಲು ಒಂದು ಚಟುವಟಿಕೆಯನ್ನು ವಿವರಿಸಿ.
IV. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 1×4=4
10. ಈ ಕೆಳಗಿನವುಗಳಿಗೆ ಕಾರಣ ಕೊಡಿ.
a) ಪ್ಲಾಟಿನಂ, ಚಿನ್ನ ಮತ್ತು ಬೆಳ್ಳಿ ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.
b) ಸೋಡಿಯಂ, ಪೊಟ್ಯಾಸಿಯಂ ಮತ್ತು ಲೀಥಿಯಂಗಳನ್ನು ಎಣ್ಣೆಯಲ್ಲಿ ಸಂಗ್ರಹಿಸಿ ಇಡುವರು.
c) ಅಲ್ಯೂಮಿನಿಯಂ ಅತ್ಯಂತ ಕ್ರಿಯಾಶೀಲ ಲೋಹವಾಗಿದ್ದರೂ ಇದನ್ನು ಅಡುಗೆಮನೆ ಪಾತ್ರೆಗಳ ತಯಾರಿಕೆಯಲ್ಲಿ ಬಳಸುತ್ತಾರೆ.
d) ಲೋಹೋದ್ಧರಣದ ಸಂದರ್ಭದಲ್ಲಿ ಕಾರ್ಬೋನೆಟ್ ಮತ್ತು ಸಲ್ಫೈಡ್ ಅದುರುಗಳನ್ನು ಸಾಮಾನ್ಯವಾಗಿ ಆಕ್ಸೈಡ್ ಗಳನ್ನಾಗಿ ಪರಿವರ್ತಿಸುವರು.
10th standard FA 1 question papers with key answer
KEY ANSWER
ವಿಷಯ: ವಿಜ್ಞಾನ ರೂಪಣಾತ್ಮಕ ಪರೀಕ್ಷೆ 1 ಅಂಕಗಳು : ೨೦
ತರಗತಿ: ೧೦ನೇ ಸಮಯ: ೪೦ ನಿಮಿಷಗಳು
I.
1. ಪ್ರತಿವರ್ತಕ ಮತ್ತು ಉತ್ಪನ್ನಗಳಲ್ಲಿರುವ ಧಾತು / ಸಂಯುಕ್ತಗಳ ರಾಶಿ ಮತ್ತು ಆವೇಶ ಸಮನಾಗಿರುವ ಸಮೀಕರಣವೇ ಸರಿದೂಗಿಸಿದ ರಾಸಾಯನಿಕ ಸಮೀಕರಣ.
2. ಏಕೆಂದರೆ ಅದು ವಾತಾವರಣದಲ್ಲಿರುವ ವಾತಾವರಣವನ್ನು ಹೀರಿಕೊಂಡು ಘನ ಜಿಪ್ಸಂ ಲವಣವಾಗಿ ಪರಿವರ್ತಿಸುತ್ತದೆ.
3. ಯಾವ ಆಕ್ಸೆಡ್ ಗಳು ಆಮ್ಲಿಯ ಮತ್ತು ಪ್ರತ್ಯಾಮ್ಲಿಯ ಆಕ್ಸೆಡ್ ಗಳಂತೆ ವರ್ತಿಸುತ್ತವೆಯೋ ಅಂತಹ ಆಕ್ಸೆಡ್ ಗಳನ್ನು ಉಭಯವರ್ತಿ ಆಕ್ಸೆಡ್ ಎನ್ನುವರು .
4. ಹೀಮೋಗ್ಲೋಬಿನ್ ಕೊರತೆಯಿಂದ ಆಮ್ಲಜನಕದ ಸಾಗಾಣಿಕೆ ಕುಂಠಿತವಾಗುತ್ತದೆ ಮತ್ತು ರಕ್ತ ಹೀನತೆ ಕಂಡುಬರುತ್ತದೆ .
II.
5. ಅಂತರುಷಕ ಕ್ರಿಯೆ ಎಂದರೆ ಉಷ್ಣವನ್ನು ಪ್ರಾರಂಭಿಸುವ ರಾಸಾಯನಿಕ ಕ್ರಿಯೆ . ಉದಾಹರಣೆಗೆ ಬೆಳ್ಳಿಯ ಕ್ಲೋರೈಡ್ ನ ಬಿಳಿ ಬಣ್ಣವು ಸೂರ್ಯನ ಬೆಳಕನ್ನು ಹೀರಿಕೊಂಡು ಬೂದು ಬಣ್ಣಕ್ಕೆ ತಿರುಗುತ್ತದೆ.
6. ಮೊಸರು ಮತ್ತು ಹುಳಿ ಪದಾರ್ಥಗಳಲ್ಲಿ ಆಮ್ಲಗಳಿರುವ ಕಾರಣ ಅವು ಹಿತ್ತಾಳೆ ಅಥವಾ ತಾಮ್ರದ ಜೊತೆ ವರ್ತಿಸಿ ಅವುಗಳ ಸಂಯುಕ್ತಗಳನ್ನು ಉತ್ಪತ್ತಿ ಮಾಡಿ ಆಹಾರ ಪದಾರ್ಥವನ್ನು ವಿಷಕಾರಿಯಾಗಿಸಬಹುದು.
7. ಸಾರರಿಕ್ತ ಆಮ್ಲಗಳಿಂದ ಹೈಡೋಜನನ್ನು ಪಲ್ಲಟಗೊಳಿಸುವ ಎರಡು ಲೋಹಗಳೆಂದರೆ ಸೋಡಿಯಂ ಮತ್ತು ಪೊಟ್ಯಾಶಿಯಂ. ಪಲ್ಲಟಗೊಳಿಸದ ಲೋಹಗಳೆಂದರೆ ತಾಮ್ರ ಮತ್ತು ಬೆಳ್ಳಿ.
III. 8.
ವಾಯುವಿಕ ಉಸಿರಾಟ | ಅವಾಯುವಿಕ ಉಸಿರಾಟ |
ಆಮ್ಲಜನಕದ ಸಹಾಯದಿಂದ ನಡೆಯುತ್ತದೆ. | ಆಮ್ಲಜನಕದ ಸಹಾಯವಿಲ್ಲದೆ ನಡೆಯುತ್ತದೆ. |
ಅನಿಲಗಳವಿನಿಮಯವನ್ನು ಒಳಗೊಂಡಿದೆ. | ಅನಿಲಗಳ ವಿನಿಮಯ ಇರುವುದಿಲ್ಲ. |
ಇದು ಕೋಶರಸ ಮತ್ತು ಮೈಟೋಕಾಂಡ್ರಿಯಾದಲ್ಲಿ ನಡೆಯುತ್ತದೆ. | ಇದು ಕೇವಲ ಕೋಶರಸದಲ್ಲಿ ನಡೆಯುತ್ತದೆ. |
36 ATP ಅಣುಗಳನ್ನು ಉತ್ಪಾದಿಸುತ್ತದೆ. | ಕೇವಲ 2 ATP ಅಣುಗಳನ್ನು ಉತ್ಪಾದಿಸುತ್ತದೆ. |
9. ರಬ್ಬರ್ ಕಾರ್ಕ್ ಮೇಲೆ ಎರಡು ಮೊಳೆಗಳನ್ನು ಜೋಡಿಸಬೇಕು. ಮತ್ತು ಅದರ 100 ಮಿಲಿ ಬೀಕರಿನಲ್ಲಿಡಬೇಕು. ಮೊಳೆಗಳನ್ನು 6V ಬ್ಯಾಟರಿಯ ಎರಡು ದ್ರುವಗಳಿಗೆ ಸ್ವಿಚ್ ಮತ್ತು ಬಲ್ಟ್ ಮೂಲಕ ಸಂಪರ್ಕಿಸಬೇಕು. ಈಗ ಬೀಕರಿಗೆ ಸ್ವಲ್ಪ ಸಾರರಿಕ್ತ HCI ಸುರಿಯಬೇಕು ಮತ್ತು ವಿದ್ಯುತ್ ಹಾಯಿಸಬೇಕು. ಗ್ಲೋಕೋಸ್ ಮತ್ತು ಆಲ್ನೋಹಾಲ್ ದ್ರಾವಣಗಳೊಂದಿಗೆ ಪ್ರತ್ಯೇಕವಾಗಿ ಈ ಚಟುವಟಿಕೆಯನ್ನು ಪುನರಾವರ್ತಿಸಬೇಕು. ಬಲ್ಸ್ನ ಉರಿಯ ದ್ರಾವಣದ ಮೂಲಕ ವಿದ್ಯುತ್ ಪ್ರವಾಹ ಹರಿಯುವುದನ್ನು ಸೂಚಿಸುತ್ತದೆ. ದ್ರಾವಣದಲ್ಲಿ ವಿದ್ಯುತ್ವವಾಹವು ಅಯಾನುಗಳ ಮೂಲಕ ಸಾಗಿಸಲು ಗೂಕೋಸ್ ದ್ರಾವಣದಲ್ಲಿ ಅಯಾನುಗಳನ್ನು ಉಂಟುಮಾಡುವ ಕಾರಣ ವಿದ್ಯುತ್ ಹರಿಯುವುದಿಲ್ಲ.
IV. 10.
a) ಅವುಗಳು ಕಡಿಮೆ ಕ್ರಿಯಾಶೀಲ ಮತ್ತು ಬೇಗನೆ ನಶಿಸುವುದಿಲ್ಲ. ಹಾಗು ಕಾಂತಿಯುತವಾಗಿವೆ .
b) ಅವುಗಳು ಅತ್ಯಂತ ಕ್ರಿಯಾಶೀಲ ಧಾತುಗಳಾಗಿವೆ ಮತ್ತು ವಾತಾವರಣದಲ್ಲಿನ ಆಮ್ಲಜನಕ ಮತ್ತು ನೀರಾವಿಯೊಂದಿಗೆ ಥಟ್ಟನೆ ವರ್ತಿಸುತ್ತವೆ.ಆದರೆ ಎಣ್ಣೆಯ ಜೊತೆ ವರ್ತಿಸುವುದಿಲ್ಲ .
c) ಅಲ್ಯುಮಿನಿಯಂ ಸುಲಭವಾಗಿ ನಶಿಸುವಕೆಗೆ ಒಳಗಾಗುವುದಿಲ್ಲ . ಯಾಕೆಂದರೆ ಅದು ಗಾಳಿಯಲ್ಲಿನ ಆಮ್ಲಜನಕದೊಂದಿಗೆ ವರ್ತಿಸಿ ಅಲ್ಯುಮಿನಿಯಂ ಆಕ್ಸೆಡ್ ನ ತೆಳ್ಳನೆಯ ಪದರವನ್ನು ನಿರ್ಮಿಸುತ್ತದೆ . ಈ ಪದರವು ಸ್ಥಿರವಾಗಿರುತ್ತದೆ ಮತ್ತು ಇನ್ನಷ್ಟು ಅಲ್ಯುಮಿನಿಯಂ ಆಕ್ಸಿಜನ್ ಜೊತೆ ವರ್ತಿಸದಂತೆ ತಡೆಯುತ್ತದೆ.ಅಲ್ಲದೆ ಅಲ್ಯುಮಿನಿಯಂ ಹಗುರವಾಗಿರುವ ಲೋಹ ಮತ್ತು ಉಷ್ಣದ ಉತ್ತಮ ವಾಹಕವಾಗಿದೆ .
d) ಯಾಕೆಂದರೆ ಲೋಹಗಳನ್ನು ಸುಲಭವಾಗಿ ಅವುಗಳ ಆಕೈಡ್ ಗಳಿಂದ ಉದ್ದರಿಸಬಹುದು.