SSLC Kannada Question Bank 2. We will learn 10th class Kannada important notes for exam. Study material for 10th standard exam preparation.
Study 10th class Kannada question bank. We have provided most expected Kannada questions for SSLC exam. 10th class important questions and answers.
To get more video notes for SSLC, visit our YouTube channel. This channel is very useful for 10th class exam preparation.
Click here to download question bank
most expected Kannada questions for SSLC exam
1. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?
ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣ “ತಾಯಿ ನಿನ್ನ ಪ್ರೀತಿಯಲ್ಲಿ , ನಿನ್ನ ಸುಖದಲ್ಲಿ ನಾವು ಸುಖಿಗಳಾಗಿದ್ದೇವೆ. ಕಾಡಿನಲ್ಲಿ ಈ ಆನಂದ ಕಾಣುವ ಪುಣ್ಯಕ್ಕೆ ಎಂದೆದಿಗೂ ನಿನಗೆ ನಾವು ಚಿರಋಣಿಗಳಾಗಿದ್ದೇವೆ. ನಿಮ್ಮ ಆತಿಥ್ಯದಲ್ಲಿ ಸ್ವಲ್ಪವೂ ಕೊರೆತ ಕಾಣಲಿಲ್ಲ. ನಮ್ಮ ಅಯೋದ್ಯೇಯ ಅರಮನೆಯಲ್ಲೂ ಕೂಡ ಇದಕ್ಕಿಂತ ಹಿತವಾದದ್ದು ಇಲ್ಲ. ಇಂದು ನಾವು ಕಾಡು ಎಂಬುದನ್ನು ಮರೆತು ಮನೆಯೆಂದೇ ತಿಳಿದೆ. ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದೆ ತಿಳಿದೆವು” ಎಂದು ಶಬರಿಗೆ ಹೇಳಿದರು.
2. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ?
ಟೊಪ್ಪಿಗೆಯ ವಿಶೇಷತೆಯನ್ನು ಕುರಿತು “ಒಂದ“ಒಂದು ಟೊಪ್ಪಿಗೆ ಇನ್ನೊಂದಿರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ ಕನಿಷ್ಟಪಕ್ಷ ಬೇರೆಯಾಗಿರುತ್ತದೆ. ಕೋಟ್ಯಾವಧಿ ಟೊಪ್ಪಿಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು. ಮನುಷ್ಯನಂತೆ ಟೊಪ್ಪಿ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ” ಎಂದು ಲೇಖಕರು ದಾಖಲಿಸಿದ್ದಾರೆ.
3. ದುಡ್ಡಿನ ನಿಜರೂಪವೇನು?
ದುಡ್ಡು ಆಸೆಯ ವಿಷಲತೆಗೆ ಎರೆಯುವ ನೀರು, ಇಂದ್ರಿಯಗಳೆಂಬ ಜಿಂಕೆಗಳನ್ನು ಮರುಳುಗೊಳಿಸುವ ಬೇಡನ ಸಂಗೀತ. ಒಳ್ಳೆಯ ನಡತೆಯೆಂಬ ಚಿತ್ರಕ್ಕೆ ಬಳಿದ ಮಸಿ, ಅವಿವೇಕದ ಸವಿನಿದ್ದೆಗೆ ಹಾಸಿದ ಮೆಲುಹಾಸೆ, ಅಹಂಕಾರದ ಪಿಶಾಚಿಗಳಿಗೆ ನೆಲೆಮನೆಯಾದ ಹಳೆಯಟ್ಟ ,ಶಾಸ್ತ್ರದ ತಿಳಿವಿಗೆ ಬಿಗಿದ ಕಣ್ಪಟ್ಟಿ, ಎಲ್ಲ ದೌರ್ಜನ್ಯಗಳ ವಿಜಯಧ್ವಜ, ಕೋಪವೆಂಬ ಮೊಸಳೆಯನ್ನು ಹೊತ್ತ ಹೊಳೆ, ವಿಷಯ ಮದ್ಯಗಳ ಪಾನಭೂಮಿ, ಸಜ್ಜನಿಕೆಯನ್ನು ಸುಡುವ ಮಸಣ. ಧರ್ಮವೆಂಬ ಚಂದ್ರಮಂಡಲವನ್ನು ಕಬಳಿಸುವ ರಾಹುವಿನ ಕರಿನಾಲಿಗೆ.
4. ವಿಶ್ವೇಶ್ವರಯ್ಯನವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು?
ವಿಶ್ವೇಶ್ವರಯ್ಯನವರು ‘ರಿಕನ್‌ಸ್ಟಕ್ಟಿಂಗ್ ಇಂಡಿಯಾ’, ‘ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ’ ಹಾಗೂ ‘ಮೈ ಮೆಮೋರೀಸ್ ಆಫ್ ಮೈವರ್ಕಿಂಗ್ ಲೈಫ್(ಆತ್ಮಚರಿತ್ರೆ )’, ‘ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ’ ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.
5. ಯಾವ ವ್ಯಕ್ತಿಯನ್ನು ನಾವು ಆದರ್ಶವಾಗಿ ಸ್ವೀಕರಿಸಬೇಕು?
ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ, ಯಾವಾಗಲೂ ತಪ್ಪು ಮಾಡದವನೆಂದು ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಕಳಂಕವಿಲ್ಲದಂತಿರುವುದೋ ನಿಸ್ಸಂಕೋಚವಾಗಿ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ , ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು.
6. ದೇವನೂರರ ನನ್ನ ದೇವರು ಯಾರೆಂಬುದನ್ನು ಸ್ಪಷ್ಟೀಕರಿಸಿದ್ದಾರೆ?
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ ಎಂದು ದೇವರ ಮಹದೇವ ಅವರು ನನನ್ನ ದೇವರು ಯಾರು ಎಂಬುದನ್ನು ಸ್ಪಷ್ಟಿಕರಿಸುತ್ತಾರೆ.
7. ಯಾವುದು ಸ್ವಧರ್ಮ ಎಂದು ಲೇಖಕರು ಹೇಳುತ್ತಾರೆ?
“ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ ” ಎಂದು ಲೇಖಕರು ಹೇಳಿದ್ದಾರೆ.
8. ದುಷ್ಟಬುದ್ದಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು? ದುಷ್ಟಬುದ್ದಿಯು ತನ್ನ ತಂದೆಗೆ ಏಕಾಂತದಲ್ಲಿ ಕರೆದುಕೊಂಡು ಹೋಗಿ “ನಿಮ್ಮ ಒಂದು ಮಾತಿನಿಂದ ನಮ್ಮ ಪರಿಜನರೆಲ್ಲರೂ ಕಾಲ ಹಸಿಯದೆ ಊಟಮಾಡಿ ಬಾಳುವಷ್ಟು ಹಣವು ಲಭಿಸುವುದು. ನೀವು ಆ ಮರದ ಪೊಟರೆಯಲ್ಲಿ ಅವಿತುಕೊಂಡು ಧರ್ಮಬುದ್ಧಿಯೇ ಹೊನ್ನನ್ನು ತೆಗೆದುಕೊಂಡು ಹೋದನು ಎಂದು”ಹೇಳಿದನು.
10th class question bank with answer
9. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?
ಶೋಷಣೆಗೂಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕುವ ಹೊಸ ಭರವಸೆಗಳನ್ನು ಮೂಡಿಸಬೇಕು. ಭಾಷೆ, ಜಾತಿ, ಮತಧರ್ಮಗಳ ಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ. ಅವುಗಳನ್ನು ಕೆಡವಬೇಕು. ಮನುಜ ಮನುಜರ ನಡುವೆ ಪ್ರೀತಿ, ಸ್ನೇಹ,ವಿಶ್ವಾಸದ ಸೇತುವೆಯಾಗಬೇಕಿದೆ.
10. ಹಕ್ಕಿಯು ಯಾವ ಮೇರೆ ಮೀರಿ ನೀರನು ಹೀರಿದೆ?
ಕಾಲದ ಹಕ್ಕಿಯು, ಬೆಳ್ಳಿಚುಕ್ಕಿ ಎಂದು ಕರೆಯಲ್ಪಡುವ ಶುಕ್ರಗ್ರಹವೆಂಬ ಹಳ್ಳಿಯ ಮೇರೆಯನ್ನು ಮೀರಿ ಹಾರಿಹೋಗುತ್ತಿದೆ. ತಿಂಗಳೂರು ಅಂದರೆ ಚ೦ದ್ರಲೋಕ. ಈ ಚಂದ್ರಲೋಕಕ್ಕೆ ಹಕ್ಕಿ ಏರಿ ನೀರಿನ ಸೆಲೆಯನ್ನು ಹುಡುಕಿ ಅದನ್ನು ಹೀರುತ್ತ ಸಂತೋಷವಾಗಿ ಆಡುತ್ತಿದೆ.
11. ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ?
ಲಾವಣಿಗಳನ್ನು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ವೀರ ಕಲಿಗಳ ವೀರಸಾಹಸ, ವೀರರ ಉಜ್ವಲ ಜೀವನದ ಘಟನೆಗಳನ್ನಾ ಧರಿಸಿದಕಥನಾತ್ಮಕ ಕಾವ್ಯಗಳಾಗಿದ್ದು ಸಾಮಾನ್ಯವಾಗಿ ವೀರತನ ಹಾಗೂ ಸಾಹಸವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು ಎನ್ನಲಾಗಿದೆ.
12. ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು?
ಕರ್ಣನು ಕೃಷ್ಣನನ್ನು ಕುರಿತು “ನಾಳಿನ ಕೌರವರ ಮತ್ತು ಪಾಂಡವರ ಚತುರಂಗ ಬಲದ ನಡುವಿನ ಯುದ್ಧವು ಮೃತುದೇವತೆಗೆ ಭೋಜನ ಕೂಟ ಆಗುವುದು. ನಾನು ಕೌರವನ ಉಪಕರಾದ ಋಣ ತೀರಿಸುವಂತೆ ಹೋರಾಡಿ, ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನ್ನು ಕೊಂದು, ನನ್ನ ಒಡೇಯನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನ ನೋಯಿಸೆನು” ಎಂದನು.
13. ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಳುವುದೇಕೆ?
ಭೀಷ್ಮಾಚಾರ್ಯರು ಪಾಂಡವರೊಡನೆ ಸಂಧಿ ಮಾಡಿಕೊ ಎಂದು ಸಲಹೆ ಮಾಡಿದಾಗ ದುರ್ಯೋಧನನನು ಅದಕ್ಕೆ ಒಪ್ಪುವುದಿಲ್ಲ. ಅವನು “ನಾನು ಭೂಮಿಗಾಗಿ ಹೋರಾಡುತ್ತಿಲ್ಲ. ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಪಾಳು ಭೂಮಿಗೆ ಸಮ. ಪ್ರಿಯ ಗೆಳೆಯನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವುದಿಲ್ಲ” ಎನ್ನುತ್ತಾನೆ.
14. ಕುದುರೆಯನ್ನುಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ.
ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಹೆದರಿದ ಮುನಿಸುತರು ”ಬೇಡಬೇಡ ಅರಸುಗಳ ಕುದುರೆಯನ್ನು ಬಿಡು, ನಮ್ಮನ್ನು ಹೊಡೆಯವರು” ಎಂದು ಹೇಳಿದರು. ಆಗ ಅವನು ನಗುತ “ಬ್ರಾಹ್ಮಣರ ಮಕ್ಕಳು ಹೆದರಿದರೆ ಜಾನಕಿಯ ಮಗನು ಇದಕ್ಕೆ ಹೆದರುವನೇ, ನೀವು ಹೋಗಿ” ಎಂದು ಶೌರ್ಯದಿಂದ ಹೇಳಿದನು.
15. ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗುವುದು ಯಾವಾಗ?
ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿದರೆ ಅವರು ವಿಷಯ ಗ್ರಹಣ ಮಾಡಿಕೊಳ್ಳಬಲ್ಲರು. ಆದರೆ ಅವರಿಗೆ ಸಂಸ್ಕೃತಿಯ ಅವಶ್ಯಕತೆ ಇದೆ. ಅವರಿಗೆ ಅದನ್ನು ಕೂಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು. ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು. ಕೇವಲ ಜ್ಞಾನ ರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿನ ಜ್ಞಾನರಾಶಿಯನ್ನೆ ಕೊಡಬಹುದು. ಅದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯನ್ನು ಹೊಂದಿರುವ ಜನರಿಂದ ದೇಶದ ಪ್ರಗತಿ ಸಾಧ್ಯ.
16. ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿ ಮಾಡಿ.
ಪೆರಿಯಾರ್ ಚಳವಳಿಯ ಮುಖ್ಯಾಂಶಗಳು:
1. ವರ್ಣಾಶ್ರಮ ಧರ್ಮದ ಪರವಾಗಿ ಕಾಂಗ್ರೆಸ್ಸಿದೆ ಎಂದು ಅದಕ್ಕೆ ಪರ್ಯಾಯವಾದ ದ್ರಾವಿಡ ಚಳುವಳಿ ಎಂಬ ಜನಾಂಗೀಯ ಪರಿಕಲ್ಪನೆ ಕೇಂದ್ರಿತ ಚಳುವಳಿಯನ್ನು ರೂಪಸಿದರು.
10th class Kannada important questions
2. ತಮಿಳು ಭಾಷೆಯನ್ನು ದ್ರಾವಿಡರ ಭಾಷೆ ಎಂದರು.
3. ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆಯ ಆಶಯವನ್ನು ಎತ್ತಿ ಹಿಡಿದರು.
17. ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣೆ ಏನು?
ಜಲಿಯನ್ ವಾಲಾಬಾಗ್‌ನಲ್ಲಿರುವ ಒಕ್ಕಣೆ ಹೀಗಿದೆ : “ಏಪ್ರಿಲ್- ೧೩- ೧೯೧೯ ರಂದು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ೨೦೦೦ ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ.”
18. ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ – ಏಕೆ?
ಆದರ್ಶವಾಗಿದ್ದ ನೆಲದಲ್ಲಿ ಆಡಂಬರ, ರಂಗು, ನಾಟಕೀಯತೆ ಸೇರಿಕೊಂಡು ಬದುಕು ಲಗಾಮಿಲ್ಲದ ಓಟ ಕಿತ್ತಿದೆ. ಸಂಪ್ರದಾಯ ದೇವರ ನಂಬಿಕೆಗಳಿಗಿಂತ ಹಬ್ಬಗಳು ಖರೀದಿಯ ಸವಾಲು ಒಡ್ಡಿ ಮನೆ ಮನಗಳನ್ನು ಕಾಡುತ್ತಿವೆ. ರಾತ್ರಿ ಹಗಲಾಗಿಸುವ ವಿದ್ಯುತ್ ದೀಪಾಲಂಕಾರದಲ್ಲಿ ಪರದೇಶಿ ಚೈನಾ ಬಲ್ಬ್ ಮೆರೆದಿವೆ! ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ.
19. ಹಾಡು ಕಿವಿಗೆ ಬಿದ್ದಾಗ ಪೈಗಳು ಏನು ಮಾಡಿದರು?
ಚಪ್ಪರದ ಗದ್ದಲ ಮಧ್ಯೆ ಕುಗ್ಗಿದ ಕೊರಳಲ್ಲಿ ಹಾಡು ಕೇಳಿಸಿಕೊಂಡ ಪೈಗಳಿಗೆ ಏನಾಯಿತೋ ಏನು ತೋಚಿತೋ ದೇವರೇ ಬಲ್ಲ. ಮತ್ತೆ ಚಪ್ಪರದ ಗವುಜು ಅವರಿಗೆ ಕೇಳಿಸಲಿಲ್ಲ. ನೆಟ್ಟಗೆ ಹೋದವರು ಅಭ್ಯಾಸದ ಪುಸ್ತಕವನ್ನು ಹಿಡಿದರು. ಬರೆಯತೊಡಗಿದರು. ಏಕಾಂಕ ನಾಟಕ ಎನ್ನಬಹುದಾದ ನಾಡಕವನ್ನು ಇಳಿ ಹೊತ್ತಿನೊಳಗೆ ಬರೆದು ಮುಗಿಸಿದರು.
20. ಕ್ರಾಂತಿಕಾರಿಗಳ ಪ್ರಾಣಾರ್ಪಣೆ ಮುಂದಿನ ದಿನಗಳಲ್ಲಿ ಭಾರತೀಯರಿಗೆ ಯಾವ ಬಗೆಯಲ್ಲಿ ಪ್ರೇರಣೆ ಕೊಟ್ಟಿತು?
ಲಕ್ಷ-ಲಕ್ಷ ಭಾರತೀಯರು ಪ್ರಾಣಾರ್ಪಣೆಗೈಯುವ, ಪಾಠವನ್ನು ಕಲಿತುಕೊಂಡರು. ಸ್ವಾರ್ಥದ ಹಂಗು ತೊರೆದು ಸ್ವಾತಂತ್ರ್ಯ ಪ್ರಾಪ್ತಿಯ ಮಾರ್ಗದಲ್ಲಿ ಮುಂದಡಿಯಿಟ್ಟರು. ಯುವಕರಲ್ಲಿ ಮೂಡಿದ ಈ ಪ್ರಾಣಾರ್ಪಣೆಯ ಕೆಚ್ಚು ಮುಂದೆ ದೇಶದ ಕ್ರಾಂತಿ ಸಂಘಟನೆಯಲ್ಲಿ ಬಲುದೊಡ್ಡ ಶಕ್ತಿ ತುಂಬಿತು.
Watch this video for the explanation of SSLC Kannada Question Bank 2.