SSLC Kannada FA 2 question paper 2023-24

SSLC Kannada FA 2 question paper 2023-24. Download 10th class FA 2 question papers. Kannada FA 2 question papers for class 10.

In this post we have uploaded 10th standard FA 2 question papers with key answer. Formative assessment question papers for SSLC.

To get more video notes for class 10, visit our YouTube channel. This channel is very useful for SSLC exam preparation.

SSLC Kannada FA 2 question paper 2023-24

Subject: Kannada

Class: 10th

Medium: Kannada

State: Karnataka

Cost: Free

Sub-topic: FA 2 Question paper with key

File type: PDF

Answers: Given key answer

Share: Sharable link is given

Copyright: Protected

Download: Given download link

Year: 2023-24

Board: Karnataka KSEEB

Print Enable: Yes

Editable Text: No

Copy Text: No

Scanned Copy: Yes

Password Encrypted: No

File Size Reduced: No

Quality: High

Download Link Available: Yes

File View Available: Yes

Click here to download SSLC Kannada FA 2 question paper

Click here to download FA 2 key answer

Watch this video for the explanation of SSLC Kannada FA 2 question paper 2023-224.

Kannada FA 2 question papers for class 10

ವಿಷಯ: ಕನ್ನಡ                                    ರೂಪಣಾತ್ಮಕ ಪರೀಕ್ಷೆ 2                 ಅಂಕಗಳು : ೨೦

ತರಗತಿ: ೧೦ನೇ                                                                                                               ಸಮಯ: ೪೦ ನಿಮಿಷಗಳು

I. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.        4×1=4

1. ‘ದುರದೃಷ್ಟ’ ಪದದ ವಿರುದ್ಧಾರ್ಥಕ ರೂಪ.

    ಅ) ಅಪದೃಷ್ಟ              ಆ) ಅದೃಷ್ಟ      

     ಇ) ನತದೃಷ್ಟ                ಈ) ದುಷ್ಟ

2. ‘ಹರಿಕಾರ’ ಪದದ ಅರ್ಥ.

    ಅ) ಮುಂದಾಳು             ಆ) ಬ್ರಹ್ಮ      

     ಈ) ಸರದಾರ                  ಈ) ವಿಷ್ಣು

3. ‘ಪುಣ್ಯ’ ಪದದ ವಿರುದ್ಧಾರ್ಥಕ ರೂಪ.

    ಅ) ಸತ್ಯ                            ಆ) ಪಾಪ    

     ಇ) ಪುಣ್ಯಾ                        ಈ) ಚಿತ್ರ

4. ‘ವಂಶ’ ಪದದ ತದ್ಭವ ರೂಪ.

    ಅ) ಹಂಸ                      ಆ) ಸಂಸ    

      ಇ) ವಂಸ                     ಈ) ಅಂಚು

II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.     3×2=6

5. ಸಂಪತ್ತನ್ನು ಕಾಪಾಡಲು ಎದುರಾಗುವ ಕಷ್ಟಗಳೇನು?

6. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ?

7. ನಾರಾಯಣಗುರು ಅವರ ಪ್ರಮುಖ ಆಶಯ ಏನಾಗಿತ್ತು?

III. ಈ ಕೆಳಗಿನ ಪ್ರಶ್ನೆಗಳಿಗೆ ಐದು ಅಥವಾ ಆರು ವಾಕ್ಯಗಳಲ್ಲಿ ಉತ್ತರಿಸಿ.  1×3=3

8. ಹಲಗಲಿಗೆ ದಂಡು ಬರಲು ಕಾರಣವೇನು?

IV. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.     1×3=3

9. “ಮಾರಿಗೌತಣವಾಯ್ತು ನಾಳಿನ ಭಾರತವು.”

V. ಕೆಳಗಿನ ಕವಿಗಳ / ಸಾಹಿತಿಗಳ ಜನ್ಮಸ್ಥಳ, ಕಾಲ, ಕೃತಿ ಮತ್ತು ಬಿರುದು / ಪ್ರಶಸ್ತಿಗಳನ್ನು ಕುರಿತು

    ವಾಕ್ಯರೂಪದಲ್ಲಿ ಬರೆಯಿರಿ.       2×2=4

10. ಕುಮಾರವ್ಯಾಸ

11. ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ

10th standard FA 2 question papers with key answer

KEY ANSWER

I.

1. ಆ) ಅದೃಷ್ಟ

2. ಅ) ಮುಂದಾಳು

3. ಆ) ಪಾಪ

4. ಇ) ವಂಸ    

II.

5. ಸಂಪತ್ತನ್ನು ಕಾಯುವ ಕಷ್ಟ ಕಾಪಾಡುವ ಪಾಡು ಯಾರಿಗೆ ಬೇಕು, ಎಷ್ಡು ಬಿಗಿಯಾಗಿ ಬಿಗಿದರೂ ನುಸುಳಿಕೊಳ್ಳುವಂಥ ಜಾಣ್ಮೆ ಅದಕ್ಕೆ ತಿಳಿದಿದೆ. ಮಹಾವೀರರಾದ ಸಾವಿರಾರು ಸೈನಿಕರ ಕತ್ತಿಗಳ ಪಂಜರದ ನಡುವೆ ಕಾಪಿಟ್ಟ ಸಂಪತ್ತು ಕೂಡ ತನ್ನ ತಾನೆ ಕಣ್ಮರೆಯಾಗುತ್ತದೆ. ಮದಜಲವನ್ನು ಸುರಿದು ಸುತ್ತೆಲ್ಲ ಕತ್ತಲು ಬರಿಸುವ ಮದ್ದಾನೆಗಳ ಕಾವಲಿನಲ್ಲಿ ಕೂಡ ಕಣ್ನು ತಪ್ಪಿಸಿ ಓಡಿಬಿಡುತ್ತದೆ.

6. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೆ ಪರಮೋಚ್ಚ ಪರಿಹಾರ. ಶಿಕ್ಷಣವು ಸಂಜೀವಿನಿ. ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ಎಂದು ಹೇಳಿದ್ದಾರೆ.

7. ನಾರಾಯಣ ಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬುದು.

III.

8. ಹಲಗಲಿಯ ಬೇಡರು ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ತಮ್ಮ ಆಯುಧಗಳನ್ನು ಕೊಡಲು ಒಪ್ಪದೆ ಎದ್ದು ಮುಂಗಾರಿನ ಸಿಡಿಲು ಸಿಡಿಯುವ ಹಾಗೆ ಗುಂಡು ಹೊಡೆರು. ಬ್ರಿಟೀಷ್ ಸೈನಿಕರು ದಂಗು ಹಿಡಿದು ದೂರ ಸರಿದು ನಿಂತರು. ಆಗ ಇನ್ನು ಹೆಚ್ಚಿನ ದಂಡು ಬರಲಿ ಎಂದು ಸಾಹೇಬ ಪತ್ರ ಬರೆದು ತನ್ನ ಮೇಲಿನ ಅಧಿಕಾರಿಗೆ ಕಳಿಸಿದನು. ಆಗ ದಂಡು ತಯಾರಾಗಿ ಹಲಗಲಿಗೆ ಬಂದಿತು.

Formative assessment question papers for SSLC

IV.

9. ಆಯ್ಕೆ: ಈ ವಾಕ್ಯವನ್ನು ಕುಮಾರವ್ಯಾಸ ರಚಿಸಿರುವ ‘ಕರ್ಣಾಟಕ ರತ್ನ ಕಥಾಮಂಜರಿ’ ಎಂಬ ಮಹಾಕಾವ್ಯದಿಂದ ಆಯ್ದ ‘ಕೌರವೇಂದ್ರನ ಕೊಂದೆ ನೀನು’ ಎಂಬ ಪದ್ಯದಿಂದ ಆರಿಸಲಾಗಿದೆ.

ಸಂದರ್ಭ: ಕೃಷ್ಣನು ಪಾಂಡವ ಹಾಗು ಕೌರವರ ನಡುವೆ ಸಂಧಿ ಮಾಡಲು ಹೋಗಿ ವಿಫಲವಾಗಿ ಹಿಂದಿರುಗುವಾಗ ಕರ್ಣನನ್ನು ಕರೆದುಕೊಂಡು ಬಂದು ಮೈದುನತನದ ಸರಸದಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ಮಾತನ್ನು ಕರ್ಣನು ಕೃಷ್ಣನಿಗೆ ಹೇಳುತ್ತಾನೆ.

ಸ್ವಾರಸ್ಯ: ಕರ್ಣನು ಮುಂದೆ ನಡೆಯುವ ಮಹಾಭಾರತ ಕುರುಕ್ಷೇತ್ರ ಯುದ್ಧದ ಭೀಕರತೆಯನ್ನು ಈ ಮಾತಿನಲ್ಲಿ ಬಹು ಸ್ವಾರಸ್ಯಪೂರ್ಣವಾಗಿ ಹೇಳುತ್ತಾನೆ.

V.

10. ಕುಮಾರವ್ಯಾಸ:

ಕುಮಾರವ್ಯಾಸ ಎಂದು ಪ್ರಸಿದ್ಧನಾದ ಗದುಗಿನ ನಾರಣಪ್ಪನು ಕ್ರಿ. ಶ. ಸುಮಾರು ೧೪೩೦ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದರು. ಇವರು ಕರ್ನಾಟಕ ರತ್ನ ಕಥಾ ಮಂಜರಿ ಮತ್ತು ಐರಾವತ ಎಂಬ ಕೃತಿಗಳನ್ನು ರಚಿಸಿದ್ದಾರೆ.

ಇವರು ತಮ್ಮ ಕೃತಿಯಲ್ಲಿ ರೂಪಕಾಲಂಕಾರವನ್ನೂ ಹೆಚ್ಚಾಗಿ ಬಳಸಿದ್ದರಿಂದ ‘ರೂಪಕ ̧ಸಾಮ್ರಾಜ್ಯದ ಚಕ್ರವರ್ತಿ’ ಎಂಬ ಬಿರುದನ್ನು ಪಡೆದಿದ್ದಾರೆ. ‘ಕರ್ನಾಟಕ ರತ್ನ ಕಥಾ ಮಂಜರಿ’ ಕೃತಿಯನ್ನು ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.

11. ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ:

ಗೋವಿಂದಾಚಾರ್ಯ ಇವರು ಉಡುಪಿಯಲ್ಲಿ ೧೯೩೬ ರ ಆಗಸ್ಟ್ ೩ ರಂದು ಜನಿಸಿದರು. ತಂದೆ ಪಡುಮಣ್ಣೂರು ನಾರಾಯಣ ಆಚಾರ್ಯ. ಇವರು ಕರ್ನಾಟಕ ಕಂಡ ಬಹುದೊಡ್ಡ ಸಂಸ್ಕೃತ – ಕನ್ನಡ ವಿದ್ವಾಂಸರು. ಸಂಸ್ಕೃತದಲ್ಲಿ ೩೦, ಕನ್ನಡದಲ್ಲಿ ೧೩೦ ಕೃತಿಗಳನ್ನು ರಚಿಸಿದ್ದಾರೆ.

ವಿದ್ಯಾವಾಚಸ್ಪತಿ ಎಂಬುದು ಅವರ ಪಾಂಡಿತ್ಯಕ್ಕೆ ಸಂದ ಬಿರುದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರಿಗೆ ಸಂದಿವೆ.

ಭಗವಂತನ ನಲ್ನುಡಿ, ಮುಗಿಲ ಮಾತು, ಹೇಳದೆ ಉಳಿದದ್ದು, ಮತ್ತೆ ರಾಮನ ಕತೆ, ಮಹಾಶ್ವೇತೆ, ನೆನಪಾದಳು ಶಕುಂತಲೆ, ಆವೆಯ ಮಣ್ಣಿನ ಆಟದ ಬಂಡಿ, ಸಮಾರಂಭಗಳ ಹೆಣಿಗೆ – ಇವು ಇವರ ಕೆಲವು ಸಾಹಿತ್ಯ ಕೃತಿಗಳು.