Bhagya Shilpigalu question and answer

Bhagya Shilpigalu question and answer for class 10. Notes of the lesson Bhagya Shilpigalu for SSLC students. 10th class Kannada notes.

In this post we have discussed about question and answer from Bhagya Shilpigalu lesson. Important questions from Bhagya Shilpigalu for class 10.

To get more video notes for class 10, visit our YouTube channel. This channel is very useful for SSLC exam preparation.

Bhagya Shilpigalu question and answer

Bhagya Shilpigalu question and answer for class 10

Bhagya Shilpigalu Notes (ಭಾಗ್ಯಶಿಲ್ಪಿಗಳು)

I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

1. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?

ನಾಲ್ವಡಿ ಕೃಷ್ಣರಾಜ ಒಡೆಯರು 1895 ರಲ್ಲಿ ಪಟ್ಟಾಭಿಷಿಕ್ತರಾದರು.

2. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣಬದ್ಧರಾದರು.

3. ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು?

1900 ರಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕಾರ್ಯದ ಕೇಂದ್ರ ಪ್ರಾರಂಭವಾಯಿತು . ಇದು ಏಷ್ಯಾಖಂಡದಲ್ಲಿಯೇ ಮೊದಲನೆಯದು.

4. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು?

ವಿಶ್ವೇಶ್ವರಯ್ಯ ಅವರಿಗೆ ಬ್ರಿಟಿಷ್ ಸರ್ಕಾರ ‘ ಸರ್ ‘ ಪದವಿಯನ್ನು ನೀಡಿ ಗೌರವಿಸಿತು.

5. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿದರು.

6. ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?

ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಇಂದಿಗೂ ‘ ಎಂಜಿನಿಯರ್‌ ದಿನಾಚರಣೆ’ಯನ್ನು ಮಾಡಲಾಗುತ್ತಿದೆ.

II. ಕೊಟ್ಟಿರುವ ಪ್ರಶ್ನೆಗಳಿಗೆ ಮೂರುನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?

ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟರು . ನಗರ ಪಾಲಿಕೆಗಳು ಹಾಗೂ ಗ್ರಾಮ ಪಂಚಾಯತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದವು. ಅವರ ಕಾಲದಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯ ಸಹಾಯ, ವಿದ್ಯಾ ಪ್ರಚಾರ , ನೀರಾವರಿ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.

2. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?

1900 ರಲ್ಲಿಯೇ ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ ಉತ್ಪಾದನಾ ಕೇಂದ್ರ ಪ್ರಾರಂಭವಾಯಿತು . ಇದು ಭಾರತ ಮಾತ್ರವಲ್ಲ , ಏಷ್ಯಾಖಂಡದಲ್ಲಿಯೇ ಮೊದಲ ಜಲವಿದ್ಯುತ್ ಯೋಜನೆ , 1907 ರಲ್ಲಿ ವಾಣಿವಿಲಾಸ ಮುಂಗಾಣ್ನೆಯ ಕೊಡುಗೆಯಾಯಿತು . ಸಾಗರ ( ಮಾರಿಕಣಿವೆ ) ಕಟ್ಟಲ್ಪಟ್ಟಿತು . 1911 ರಲ್ಲಿ ಕೃಷ್ಣರಾಜಸಾಗರ ಇವರ ಬೃಹತ್ ಮುಂಗಾಣ್ಕೆಯ ಕೊಡುಗೆಯಾಗಿದೆ.

3. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ?

ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು . ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಹಕ್ಕಾಗಬೇಕು ” ಎಂಬುದನ್ನು ಮನಗಂಡ ಇವರು ತಾಂತ್ರಿ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು . ಇದಕ್ಕಾಗಿಯೇ ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ , ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತಿ ಸಂಸ್ಥೆಗಳನ್ನು ಪ್ರಾರಂಭಿಸದರು . ಮಹಿಳಾ ಶಿಕ್ಷಣದ ಬಗ್ಗೆ ಸಹಾನುಭೂತಿ ಹೊಂದಿದ್ದ ಇವರು ಗೃಹಶಿಕ್ಷಣ ಶಾಲೆಗಳನ್ನು ಸ್ಥಾಪಿಸಿದರು . ವಿದ್ಯಾರ್ಥಿ ವೇತನವನ್ನು ಕೊಡುವುದರ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟರು.

Important questions from Bhagya Shilpigalu for class 10

4. ನೆಹರೂ ಅವರು ಸರ್ ಎಂ . ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ?

ಪಂಡಿತ್ ಜವಹರಲಾಲ್ ನೆಹರು ಅವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ , “ ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ . ತಾವು ಈ ಮಾತಿಗೆ ಬಹು ದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ , ತಾವು ಕಡಿಮೆ ಮಾತನಾಡಿದ್ದೀರಿ ; ಹೆಚ್ಚು ಕೆಲಸ ಮಾಡಿದ್ದೀರಿ . ಅದನ್ನು ನಾವು ತಮ್ಮಿಂದ ಕಲಿಯೋಣ ” ಎಂದು ವಿಶ್ವೇಶ್ವರಯ್ಯ ಬಗ್ಗೆ ಈ ರೀತಿ ನುಡಿದರು . ಅವರ ಒಂದೊಂದು ಮಾತುಗಳು ಸರ್ ಎಂ . ವಿ . ಅವರಿಗೆ ಅಕ್ಷರಶಃ ಸಲ್ಲುತ್ತಿದ್ದವು.

5. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?

ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು . ಇದಕ್ಕಾಗಿ 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು . ಅನಂತರ ಉಳಿತಾಯ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದವು . ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್‌ ಬ್ಯಾಂಕ್‌ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳು ರಚಿತಗೊಂಡವು . ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು.

III. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟುಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ‘ ಮಾದರಿ ಮೈಸೂರು ರಾಜ್ಯ ‘ ಹೇಗಾಯಿತು ?

1902 ರಲ್ಲಿ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು . ಆಗ ದಿವಾನರಾಗಿದ್ದ ಸರ್ ಕೆ . ಶೇಷಾದ್ರಿ ಅಯ್ಯರ್ ಅವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ಧರಾದರು.

ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವು ಕಂಡದ್ದರಿಂದ ಮೈಸೂರು ಸಂಸ್ಥಾನಕ್ಕೆ ‘ ಮಾದರಿ ಮೈಸೂರು ” ಎಂಬ ಕೀರ್ತಿ ಪ್ರಾಪ್ತವಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು.

2. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.

ವಿಶ್ವೇಶ್ವರಯ್ಯ ಅವರ ಆಡಳಿತಾವಧಿಯಲ್ಲಿ ಮೈಸೂರು ರಾಜಧಾನಿಯಾಗಿ ಮತ್ತು ರಾಜ್ಯದ ಎರಡನೆಯ ದೊಡ್ಡ ನಗರವಾಗಿ ಪ್ರಸಿದ್ಧಿ ಹೊಸ ಅರಮನೆ , ರಂಗಾಚಾರ್ಲು ಕೃಷ್ಣರಾಜೇಂದ್ರ ಆಸತ್ರೆ , ಲಲಿತಮಹಲ್ ಅರಮನೆಯ ಕಚೇರಿ ಸಮುಚ್ಚಯಗಳು ಶಿವನಸಮುದ್ರ ಜಲವಿದ್ಯುತ್‌ ಉತ್ಪಾದನೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದರು . ಮೈಸೂರಿನ ಪಡೆಯಿತು . ಸ್ಮಾರಕ ಮರಭವನ , ಅರಮನೆ ವಿಸ್ತರಣೆ , ಅರಮನೆಯ ತಳಹದಿ ಮತ್ತು ಪ್ರಧಾನ ಇವರ ಕಾಲದಲ್ಲಿಯೇ ನಿರ್ಮಾಣಗೊಂಡವು ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಯನ್ನು ಸಮಗ್ರವಾಗಿ ಅಭಿರುದ್ದೀಪಡಿಸಿದರು.

ಇವುಗಳಲ್ಲದೆ ಜನಾರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಹಲವಾರು ಆಸ್ಪತ್ರೆಗಳನ್ನು ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಹಲವಾರು ಪ್ರಾರಂಭಿಸಿದರು . ಕಾರ್ಯಕ್ರಮಗಳನ್ನು ಜಾರಿಗೆ ತಂದರು . ಹೀಗೆ ವಿಶ್ವೇಶ್ವರಯ್ಯ ಅವರು ಹೊಸಯುಗದ ಹರಿಕಾರರಾಗಿ ಮೈಸೂರು ಸಂಸ್ಥಾನಕ್ಕೆ ನವಚೈತನ್ಯವನ್ನು ತುಂಬಿದರು . ಹೀಗೆ ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯು ಅನುಪಮವಾಗಿದೆ.

bhagya shilpigalu kannada notes

3. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.

ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು . ಶಿಕ್ಷಣವು ಸಂಜೀವಿನಿ ಎಂಬುದನ್ನರಿತಿದ್ದ ಅವರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು . ಅದಕ್ಕಾಗಿ 1913 ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು , ಪ್ರೌಢಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದವು.

ಇದನ್ನು ಬದಲಿಸಿ ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು . ಮೈಸೂರು ಶ್ವವಿದ್ಯಾನಿಲಯದ ಸ್ಥಾಪನೆ ಇವರ ದೂರದೃಷ್ಟಿಯ ಮತ್ತೊಂದು ಫಲಶ್ರುತಿ , “ ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು . ಇದಕ್ಕಾಗಿಯೇ ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ , ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಪ್ರಾರಂಭಿಸಿದರು.

IV. ಸಂದರ್ಭಾನುಸಾರ ಸ್ವಾರಸ್ಯವನ್ನು ವಿವರಿಸಿ.

1. “ ಸಾಮಾಜಿಕ ಕಾನೂನುಗಳ ಹರಿಕಾರ ”

ಈ ವಾಕ್ಯವನ್ನು ಡಿ.ಎಸ್ . ಜಯಪ್ಪಗೌಡ ವಿರಚಿತ ದಿವಾನ್ ಸರ್ ಎಂ . ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು ಎಂಬ ಸಂಶೋಧನಾ ಗ್ರಂಥದ ಒಂದು ಭಾಗವಾಗಿರುವ ‘ ಭಾಗ್ಯಶಿಲ್ಪಿಗಳು ‘ ಎಂಬ ಗದ್ಯಭಾಗದಿಂದ ಆಯ್ಕೆ ಮಾಡಿದೆ . ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಹಲವು ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು. ಆ ಕಾರಣಕ್ಕಾಗಿ ‘ ಸಾಮಾಜಿಕ ಕಾನೂನುಗಳ ಹರಿಕಾರ ‘ ಎಂಬ ಬಿರುದಿಗೆ ಪಾತ್ರರಾದರು . ಮಹಾರಾಜರಾಗಿ , ರಾಜ ಪದವಿಯನ್ನು ಹೊಂದಿದ್ದರೂ ಸಹ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದರು ಎಂಬ ಸ್ವಾರಸ್ಯವನ್ನು ಇಲ್ಲಿ ಕಾಣಬಹುದಾಗಿದೆ.

2. “ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು. “

ಈ ವಾಕ್ಯವನ್ನು ಡಿ . ಎಸ್ . ಜಯಪ್ಪಗೌಡ ಸರ್ ಎಂ . ವಿಶ್ವೇಶ್ವರಯ್ಯನವರ ಕಾರ್ಯ – ಸಾಧನೆಗಳು ವಿರಚಿತ ದಿವಾನ್ ಎಂಬ ಸಂಶೋಧನಾ ಗ್ರಂಥದ ಒಂದು ಭಾಗವಾಗಿರುವ ‘ ಭಾಗ್ಯಶಿಲ್ಪಿಗಳು ‘ ಎಂಬ ಗದ್ಯಭಾಗದಿಂದ ಆಯ್ಕೆ ಮಾಡಿದೆ . ಈ ಮಾತನ್ನು ಲೇಖಕರು ಹೇಳಿದ್ದಾರೆ . ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ ಸಂಡ್ ಹರ್ಸ್ಟ್ ಅವರು ಇವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದರು.

ಪೂನಾದ ಮುಫಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು . ಸ್ವಯಂಚಾಲಿತ ಬಾಗಿಲುಗಳ ಅನ್ವೇಷಣೆ ವಿಶ್ವೇಶ್ವರಯ್ಯ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು . ಇದನ್ನೇ ಮುಂದೆ ಗ್ವಾಲಿಯರ್‌ನ ತಿಗ್ರ ಜಲಾಶಯಕ್ಕೂ ಮೈಸೂರಿನ ಕೃಷ್ಣರಾಜಸಾಗರ ( ಈಗಿನ ಮಂಡ್ಯಜಿಲ್ಲೆಯ ) ಜಲಾಶಯಕ್ಕೂ ಅಳವಡಿಸಲಾಯಿತು .

ಭಾಗ್ಯಶಿಲ್ಪಿಗಳು ಪಾಠದ ನೋಟ್ಸ್

3. “ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು.”

ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದಲ್ಲಿನ ಪಠ್ಯಪುಸ್ತಕ ರಚನಾ ಸಮಿತಿ ಆಯ್ಕೆ ಮಾಡಿ ಕೊಟ್ಟಿರುವ “ನಾಲ್ವಡಿ ಕೃಷ್ಣರಾಜ ಒಡೆಯರ್” ಎಂಬ ಪಾಠಬಾಗದಿಂದ ಆರಿಸಲಾಗಿದೆ.

ಸಂದರ್ಭ: ನಾಲ್ವಡಿ ಕೃಷ್ಣರಾಜ  ಒಡೆಯರು ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ವಹಿಸಿಕೊಂಡ ನಂತರ ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿದರು. ಇಡೀ  ಖಂಡದಲ್ಲಿ  ಯಾವ ಸಂಸ್ಥಾವನ್ನು  ಕಾಣದ ಅಭಿವೃದ್ಧಿಯನ್ನುಮೈಸೂರು ರಾಜ್ಯವು ಕಂಡಿತು ಆದ್ದರಿಂದ “ವೆಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು ”ಎಂದು ಹೇಳಿದಸಂದ¨ವಾಗಿದೆ.

ಸ್ವಾರಸ್ಯ: ಮೈಸೂರು ಸಂಸ್ಥಾದಲ್ಲಿ  ಇಡಿ ¨ಖಂಡಕ್ಕೆ  ಮಾದರಿ ಸಂಸ್ಥಾವಗಿ ಕೀರ್ತಿಯನ್ನು ಪಡೆಯಿತು ಎನ್ನುವುದರ ಹಿಂದೆ ನಾಲ್ವಡಿ ಕೃಷ್ಣರಾಜ  ಒಡೆಯರ ಆಡಳಿತದ ಸಾಮಥÄರ್ಥ್ಯವನ್ನು ಎತ್ತಿ ತೋರಿಸಿರುವುದು ಸ್ವಾರಸ್ಯಭರಿತವಾಗಿದೆ.

4. “ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.”

ಆಯ್ಕೆ : ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದ ಭಾಗವಾಗಿ ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು”ಎಂಬ ಕೃತಿಯಿಂದ ಆಯ್ದು  ಕೊಟ್ಟಿರುವ “ಸರ್.ಎಂ.ವಿಶ್ವೇಶ್ವರಯ್ಯ”ಎಂಬ  ಪಾಠಭಾಗದಿಂದ ಆರಿಸಲಾಗಿದೆ.

ಸಂದರ್ಭ: ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಭಾರತದ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರಲಾಲ್ನೆ ಅವರು ಸರ್.ಎಂ.ವಿಶ್ವೇಶ್ವರಯ್ಯ  ಅವರ ಬಗ್ಗೆ “ದದುರದೃಷ್ಟವಶಾತ್ ಭಾರತೀಯರಾದ ನಾವು  ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದರು ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ” ಎಂದು ಹೇಳಿದ ಸಂದರ್ಭವಾಗಿದೆ.

ಸ್ವಾರಸ್ಯ: ಈ ವಾಕ್ಯವು“ನುಡಿಗಿಂತ ನಡೆ ಲೇಸು”ಎಂಬ ಅರ್ಥದೊಂದಿಗೆ ವಿಶ್ವೇಶ್ವರಯ್ಯನವರ ವಾಸ್ತವ ಚಿಂತನೆ , ಕರ‍್ಯತತ್ಪರತೆ , ನಿಸ್ವಾರ್ಥ ನಡೆದುಕೊಂಡನು  ಸ್ವಾರಸ್ಯಕರವಾಗಿ  ವರ್ಣಿಸಿದೆ.

V. ಬಿಟ್ಟ ಸ್ಥಳವನ್ನು ಸರಿಯಾದ ಪದದಿಂದ ತುಂಬಿರಿ.

1. ನಾಲ್ವಡಿ ಕೃಷ್ಣರಾಜ ಒಡೆಯರ್‌ರವರಿಗೆ ರೀಚೆಂಟರಾಗಿ ಕಾರ್ಯನಿರ್ವಹಿಸಿದವು ……….

ಮಹಾರಾಣಿ ವಾಣಿವಿಲಾಸ

2. 1914 ರಲ್ಲಿ ಶಾಲಾ ಪ್ರವೇಶಕ್ಕೆ ………… ನಿಷೇಧವಾಯಿತು.

ಜಾತಿ ಪರಿಗಣನೆ

3. ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ ………… ಆಗಿ ಸೇವೆ ಪ್ರಾರಂಭಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್

4. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ………… ಅವರು ವಿಶ್ಶ್ವೇರಯ್ಯ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಲಾರ್ಡ್ ಸಂಡ್ : ಹರ್ಸ್ಟ್

5. ಭಾರತ ಸರಕಾರವು ವಿಶ್ವೇಶ್ವರಯ್ಯನವರಿಗೆ ………… ಎಂಬ ಪ್ರಶಸ್ತಿ ನೀಡಿ ಗೌರವಿಸಿತು .

ಭಾರತರತ್ನ

Watch this video for the explanation of Bhagya Shilpigalu question and answer for class 10.