SSLC Science mini question paper with key answer part 2. 10th class Science Kannada medium question paper.
Download 10th standard model question paper with key answer. SSLC Kannada medium science question paper download with key answers.
To get more video notes, visit our YouTube channel. This channel is very useful for SSLC exam preparation.
Subject: Science
Class: 10th
Medium: Kannada
State: Karnataka
Cost: Free
Sub-topic: Question paper with key
File type: PDF
Share: Sharable link is given
Copyright: Protected
Download: Given download link
Board: Karnataka KSEEB
Print Enable: Yes
Editable Text: No
Copy Text: No
Scanned Copy: Yes
Password Encrypted: No
File Size Reduced: No
Quality: High
Download Link Available: Yes
File View Available: Yes
Click here to download question paper
Click here to download key answer
Watch this video for the explanation of SSLC Science mini question paper with key answer part 2.
SSLC Kannada medium science question paper download with key answers
ವಿಷಯ ವಿಜ್ಞಾನ ಮಿನಿ ಪ್ರಶ್ನೆ ಪತ್ರಿಕೆ 1 ಅಂಕಗಳು : 25
ತರಗತಿ: 10ನೇ ಸಮಯ: 50 ನಿಮಿಷಗಳು
I. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 5×1=5
1. ಕ್ಲೋರಿನ್ ನೊಂದಿಗೆ ವರ್ತಿಸಿದಾಗ ಚಲುವೆ ಪುಡಿಯನ್ನು ಉತ್ಪತ್ತಿ ಮಾಡುವ ವಸ್ತುವನ್ನು ಹೆಸರಿಸಿ.
ಕ್ಯಾಲ್ಸಿಯಂ ಹೈಡ್ರಾಕ್ಸೆಡ್
2. ಗಡಸು ನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂ ಸಂಯುಕ್ತವನ್ನು ಹೆಸರಿಸಿ.
ವಾಷಿಂಗ್ ಸೋಡಾ
3. ಕಬ್ಬಿಣದ ಚೂರುಗಳಿಗೆ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ?
ಹೈಡೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತದೆ.
4. ಅಲೋಹಗಳು ಆಕ್ಸಿಜನ್ ಜೊತೆ ಪರಿವರ್ತಿಸಿದಾಗ ಉತ್ಪತ್ತಿಯಾಗುವ ಆಕ್ಸೈಡ್ ಗಳ ವಿಧ ಯಾವುದು ?
ಆಮ್ಲೀಯ ಆಕ್ಸೆಡ್ ಗಳು
5. ಉತ್ಕರ್ಷಣಕಾರಿಗಳು ಎಂದರೇನು?
ವಸ್ತುವೊಂದರಿಂದ ಆಮ್ಲಜನಕವನ್ನು ಹೊರತೆಗೆಯುವ ರಾಸಾಯನಿಕಗಳಿಗೆ ಉತ್ಕರ್ಷಣಕಾರಿಗಳು ಎನ್ನುವರು.
II. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 4×2=8
6. ರಾಸಾಯನಿಕ ಸಮೀಕರಣಗಳನ್ನು ಯಾವ ನಿಯಮದ ಅನ್ವಯದಲ್ಲಿ ಸರಿದೂಗಿಸಬೇಕು ?
ರಾಶಿ ಸಂರಕ್ಷಣಾ ನಿಯಮದ ಪ್ರಕಾರ ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಸೃಷ್ಟಿಸುವುದಾಗಲೀ , ಲಯಗೊಳಿಸುವುದಾಗಲಿ ಸಾಧ್ಯವಿಲ್ಲ . ಆದ್ದರಿಂದ ನಾವು ರಾಸಾಯನಿಕ ಸಮೀಕರಣವನ್ನು ಸರಿದೂಗಿಸಬೇಕು.
7. ಆಮ್ಲದ ಜಲೀಯ ದ್ರಾವಣ ವಿದ್ಯುತ್ತಿನ ವಾಹಕವಾಗಿದೆ ಏಕೆ?
ಆಮ್ಲದ ಜಲೀಯ ದ್ರಾವಣ ವಿದ್ಯುತ್ ವಾಹಕವಾಗಿರಲು ಕಾರಣ ಅದರಲ್ಲಿರುವ ಆವೇಶಯುಕ್ತ ಕಣಗಳಾದ ಅಯಾನುಗಳಿರುವುದು.
8. ಬಿಸಿ ನೀರಿನ ಹಂಡೆಗಳ ತಯಾರಿಕೆಯಲ್ಲಿ ತಾಮ್ರವನ್ನು ಬಳಸುತ್ತಾರೆಯೇ ವಿನಃ ಉಕ್ಕನ್ನು ( ಕಬ್ಬಿಣದ ಮಿಶ್ರಲೋಹ ) ಬಳಸುವುದಿಲ್ಲ. ಕಾರಣ ಕೊಡಿ.
ತಾಮ್ರವು ತಂಪಾದ ನೀರಿನೊಂದಿಗೆ, ಬಿಸಿಯಾದ ನೀರಿನೊಂದಿಗೆ ಅಥವಾ ಹಬೆಯೊಂದಿಗೆ ವರ್ತಿಸುವುದಿಲ್ಲ. ಆದರೆ ಕಬ್ಬಿಣವು ಹಬೆಯೊಂದಿಗೆ ವರ್ತಿಸುತ್ತದೆ. ಮಿಶ್ರಲೋಹಗಳಲ್ಲಿರುವ ಕಬ್ಬಿಣವು ಹಬೆಯೊಂದಿಗೆ ವರ್ತಿಸುವ ಕಾರಣ ಬಿಸಿ ನೀರಿನ ಹಂಡೆಗಳ ತಯಾರಿಕೆಯಲ್ಲಿ ಉಕ್ಕನ್ನು ಬಳಸುವುದಿಲ್ಲ.
9. ಅನುರೂಪ ಶ್ರೇಣಿ ಎಂದರೇನು? ಉದಾಹರಣೆ ಕೊಡಿ.
ವಿಭಿನ್ನ ಸಂಖ್ಯೆಯ ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಒಂದೇ ರೀತಿಯ ಕ್ರಿಯಾಗುಂಪುಗಳನ್ನು ಹೊಂದಿರುವ ಮತ್ತು ಅನುಕ್ರಮ ಸದಸ್ಯರುಗಳ ನಡುವಿನ ವ್ಯತ್ಯಾಸ CH2 ಆಗಿರುವ ಕಾರ್ಬನ್ ಸಂಯುಕ್ತಗಳ ಶ್ರೇಣಿಗೆ ಅನುರೂಪ ಶ್ರೇಣಿಗಳೆನ್ನುವರು.
ಉದಾ: ಮೀಥೇನ್ – CH4
ಪ್ರೊಪೇನ್ – C3H8
ಬೂಟೇನ್ – C4H10
Science model question paper with key answer for class 10
III. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 4×3=12
10. ಎಣ್ಣೆಗಳ ಹೈಡೋಜನೀಕರಣ ಎಂದರೇನು ? ಇದರ ಕೈಗಾರಿಕಾ ಅನ್ವಯಗಳೇನು?
ಹೈಡೋಜನ್ ನು ಸೇರಿಸುವ ರಾಸಾಯನಿಕ ಕ್ರಿಯೆಗೆ ಹೈಡೋಜನೀಕರಣ ಎನ್ನುವರು ಅಪರ್ಯಾಪ್ತ ಹೈಡೋಕಾರ್ಬನ್ ಗಳಾದ ಸಸ್ಯಜನ್ಯ ತೈಲಗಳನ್ನು ನಿಕ್ಕಲ್ ಮತ್ತು ಪೆಲಾಡಿಯಂ ನಂತಹ ಕ್ರಿಯಾವರ್ಧಕಗಳ ಸಹಾಯದಿಂದ ಹೈಡೋಜನ್ ಸೇರಿಸುವ ಮೂಲಕ ಪರ್ಯಾಪ್ತ ಹೈಡೋಕಾರ್ಬನ್ ಗಳಾಗಿ ಪರಿವರ್ತಿಸಲಾಗುತ್ತದೆ.
11. ವಾಷಿಂಗ್ ಸೋಡಾ ಮತ್ತು ಅಡುಗೆ ಸೋಡಾಗಳ ಎರಡು ಪ್ರಮುಖ ಉಪಯೋಗಗಳನ್ನು ಬರೆಯಿರಿ.
a ) ವಾಷಿಂಗ್ ಸೋಡಾ :
i ) ಗಾಜು , ಸಾಬೂನು ಮತ್ತು ಕಾಗದ ಕಾರ್ಖಾನೆಯಲ್ಲಿ ಉಪಯೋಗಿಸುವರು .
ii ) ನೀರಿನ ಗಡಸುತನ ನಿವಾರಣೆಗೆ ಉಪಯೋಗಿಸುತ್ತಾರೆ .
b ) ಅಡುಗೆ ಸೋಡಾ :
i ) ಬೇಕಿಂಗ್ ಪುಡಿ ತಯಾರಿಕೆಯಲ್ಲಿ ಬಳಸುತ್ತಾರೆ .
ii ) ಬೆಂಕಿ ಆರಿಸುವ ಸೋಡಾ – ಆಸಿಡ್ ಉಪಕರಣಗಳಲ್ಲಿ ಬಳಸುತ್ತಾರೆ.
12. ಹೊಳಪು ಕಳೆದುಕೊಂಡ ತಾಮ್ರದ ಪಾತ್ರೆಗಳನ್ನು , ಲಿಂಬೆ ಅಥವಾ ಹುಣಸೆ ಹಣ್ಣಿನ ರಸದಿಂದ ಸ್ವಚ್ಛಗೊಳಿಸುವುದನ್ನು ನೀವು ನೋಡಿರುತ್ತೀರಿ . ಈ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಈ ಹುಳಿ ವಸ್ತುಗಳು ಏಕೆ ಪರಿಣಾಮಕಾರಿಯಾಗಿವೆ ವಿವರಿಸಿ .
ತಾಮ್ರವು ಗಾಳಿಯಲ್ಲಿರುವ ತೇವಾಂಶ ಪೂರಿತ ಇಂಗಾಲದ ಡೈ ಆಕ್ಸೆಡ್ ಜೊತೆ ವರ್ತಿಸಿ ತಾಮ್ರದ ಕಾರ್ಬೋನೇಟಿನ ಹಸಿರು ಪದರವನ್ನು ಉಂಟುಮಾಡುತ್ತದೆ . ಅದನ್ನು ಲಿಂಬೆ ಅಥವಾ ಹುಣಸೆಹುಳಿಗಳಲ್ಲಿರುವ ಆಮ್ಲಗಳಿಂದ ಸ್ವಚ್ಛಗೊಳಿಸಿದಾಗ ಕಾರ್ಬೋನೇಟ್ ತಟಸ್ಥೀಕರಣಗೊಂಡು ಆಮ್ಲದೊಂದಿಗೆ ವಿಲೀನವಾಗುತ್ತದೆ ಮತ್ತು ಪಾತ್ರೆಗೆ ಹೊಳಪು ಬರುತ್ತದೆ.
13. ಸಾಬೂನುಗಳು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ವಿವರಿಸಿ
ಬಟ್ಟೆಗಳಲ್ಲಿರುವ ಕೊಳೆಯು ಸಾವಯವ ಗುಣವನ್ನು ಹೊಂದಿದ್ದು ನೀರಿನಲ್ಲಿ ಕರಗುವುದಿಲ್ಲ.ಆದ್ದರಿಂದ ಕೇವಲ ನೀರಿನೊಂದಿಗೆ ತೊಳೆಯುವ ಮೂಲಕ ಬಟ್ಟೆಯಲ್ಲಿರುವ ಕೊಳೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಸಾಬೂನು ನೀರಿನೊಂದಿಗೆ ವರ್ತಿಸಿದಾಗ ಅದರ ಜಲಾಕರ್ಷಕ ತುದಿಯು ಕೊಳೆಯ ಜೊತೆ ಸೇರಿ ಅದನ್ನು ಬಟ್ಟೆಯಿಂದ ಹೊರತೆಗೆಯುತ್ತದೆ. ನಂತರ ಸಾಬೂನಿನ ಕಣಗಳು ಮಿಸ್ಸೆಲ್ ಗಳೆಂಬ ರಚನೆಯನ್ನು ಉತ್ಪತ್ತಿ ಮಾಡುತ್ತದೆ, ಅವು ನೀರಿನಲ್ಲಿ ನಿಲಂಬಿತ ಸ್ಥಿತಿಯಲ್ಲಿದ್ದು ಸುಲಭವಾಗಿ ಹೊರತೆಗೆಯಬಹುದಾಗಿದೆ.