SSLC Kannada FA 1 question paper 2023-24. Download 10th class FA 1 question papers. Kannada FA 1 question papers for class 10.
In this post we have uploaded 10th standard FA 1 question papers with key answer. Formative assessment question papers for SSLC.
To get more video notes for class 10, visit our YouTube channel. This channel is very useful for SSLC exam preparation.
Subject: Kannada
Class: 10th
Medium: Kannada
State: Karnataka
Cost: Free
Sub-topic: FA 1 Question paper with key
File type: PDF
Answers: Given key answer
Share: Sharable link is given
Copyright: Protected
Download: Given download link
Year: 2023-24
Board: Karnataka KSEEB
Print Enable: Yes
Editable Text: No
Copy Text: No
Scanned Copy: Yes
Password Encrypted: No
File Size Reduced: No
Quality: High
Download Link Available: Yes
File View Available: Yes
Click here to download SSLC Kannada FA 1 question paper
Click here to download FA 1 key answer
Watch this video for the explanation of SSLC Kannada FA 1 question paper 2023-224.
10th standard FA 1 question papers
ವಿಷಯ: ಕನ್ನಡ ರೂಪಣಾತ್ಮಕ ಪರೀಕ್ಷೆ 1 ಅಂಕಗಳು : ೨೦
ತರಗತಿ: ೧೦ನೇ ಸಮಯ: ೪೦ ನಿಮಿಷಗಳು
I. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 4×1=4
1. ‘ನಿತ್ಯ ‘ ಇದರ ತದ್ಭವ ರೂಪ.
ಎ) ನೆಚ್ಚ ಬಿ) ನಿತ್ತ
ಸಿ) ನಿಚ್ಚ ಡಿ) ಸತ್ಯ
2. ‘ಸೇತುವೆ+ಆಗೋಣ’ ಇಲ್ಲಿರುವ ಸಂಧಿ
ಎ) ಆಗಮ ಬಿ) ಆದೇಶ
ಸಿ) ಸವರ್ಣಧೀರ್ಘ ಡಿ) ಗುಣ
3. ‘ಬಿರುಗಾಳಿಗೆ’ ಇದು ಈ ವಿಭಕ್ತಿ ಪ್ರತ್ಯಯ.
ಎ) ಪ್ರಥಮಾ ಬಿ) ತೃತೀಯಾ
ಸಿ) ಷಷ್ಠೀ ಡಿ) ಚತುರ್ಥೀ
4. ‘ಮಾಡುತ್ತಾನೆ’ ಈ ಪದದ ನಿಷೇಧಾರ್ಥಕ ರೂಪ.
ಎ) ಮಾಡಲಿ ಬಿ) ಮಾಡನು
ಸಿ) ಮಾಡು ಡಿ) ಮಾಡುವಳು
II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ. 3×2=6
5. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
6. ಪೊಯೆಟ್ ಕಾರ್ನರ್‌ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ ?
7. ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗುವುದು ಯಾವಾಗ ?
III. ಈ ಕೆಳಗಿನ ಪ್ರಶ್ನೆಗಳಿಗೆ ಐದು ಅಥವಾ ಆರು ವಾಕ್ಯಗಳಲ್ಲಿ ಉತ್ತರಿಸಿ. 1×3=3
8. ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
IV. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. 1×3=3
9. “ಪ್ರೀತಿಯ ಹಣತೆಯ ಹಚ್ಚೋಣ.”
V. ಈ ಕೆಳಗಿನ ವಿಷಯದ ಮೇಲೆ ಪತ್ರವನ್ನು ಬರೆಯಿರಿ. 1×4=4
10. ನಿಮ್ಮನ್ನು ಸರಕಾರಿ ಪ್ರೌಢ ಶಾಲೆ ಗಡಿಕೇಶ್ವಾರ ತಾಲೂಕ ಚಿಂಚೋಳಿ ಜಿಲ್ಲಾ ಕಲಬುರಗಿಯ ೧೦ ನೇ ತರಗತಿಯ ತನುಜಾ ಎಂದು ಭಾವಿಸಿಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನಿಮ್ಮ ಊರಿನ ಬೀದಿ ದೀಪಗಳನ್ನು ಸರಿಪಡಿಸುವಂತೆ ಕೋರಿ ಪತ್ರವನ್ನು ಬರೆಯಿರಿ.
SSLC standard FA 1 question papers with key answer
KEY ANSWER
I.
1. ಸಿ) ನಿಚ್ಚ
2. ಎ) ಆಗಮ
3. ಡಿ) ಚತುರ್ಥೀ
4. ಬಿ) ಮಾಡನು
II.
5. ರಾಮನ ಸ್ವಾಗತಕ್ಕಾಗಿ ಶಬರಿ ಕಡುಸವಿಯಾದ ಬಗೆಬಗೆಯ ಹಣ್ಣು – ಹಂಪಲುಗಳನ್ನು, ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು ತಳಿರು , ಸುವಾಸನೆಯಿಂದ ಕೂಡಿದ ಹೂವುಗಳನ್ನು ಸಂಗ್ರಹಿಸಿ ಸಿದ್ಧತೆಮಾಡಿಕೊಂಡಿದ್ದಳು.
6. ಪೊಯಟ್ಸ್ ಕಾರ್ನರ್‌ನಲ್ಲಿ ಪ್ರಸಿದ್ಧ ಇಂಗ್ಲಿಷ್ ಲೇಖಕರಾದ ಕಿಪ್ಲಿಂಗ್, ಹಾರ್ಡಿ, ಮ್ಯಾಕಾಲೆ, ಜಾನ್ಸನ್, ಗೋಲ್ಡ್ ಸ್ಮಿತ್, ಪ್ರಸಿದ್ಧ ವಿಮರ್ಶಕನಾದ ಡ್ರಾಯ್‌ಡನ್, ಬ್ರಿಟನ್‌ನ್ನಿನ ರಾಷ್ಟçಕವಿ ವರ್ಡ್ಸ್ವರ್ತ್, ಪ್ರಖ್ಯಾತ ನಾಟಕಕಾರ ಬೆನ್‌ಜಾನ್ಸನ್ ಮೊದಲಾದವುಗಳು ಸಮಾಧಿಗಳಿವೆ.
7. ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿದರೆ ಅವರು ವಿಷಯ ಗ್ರಹಣ ಮಾಡಿಕೊಳ್ಳಬಲ್ಲರು. ಆದರೆ ಅವರಿಗೆ ಸಂಸ್ಕೃತಿಯ ಅವಶ್ಯಕತೆ ಇದೆ. ಅವರಿಗೆ ಅದನ್ನು ಕೂಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು. ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು. ಕೇವಲ ಜ್ಞಾನ ರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿನ ಜ್ಞಾನರಾಶಿಯನ್ನೆ ಕೊಡಬಹುದು. ಅದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯನ್ನು ಹೊಂದಿರುವ ಜನರಿಂದ ದೇಶದ ಪ್ರಗತಿ ಸಾಧ್ಯ.
III.
8. ಕಾಲವು ಯುಗಯುಗಗಳ ಹಣೆಬರೆಹವನ್ನು , ಅಳಿಸಿ ಹಾಕಿ ಹೊಸತನವನ್ನು (ಒಳ್ಳೆತನವನ್ನು) ಹೊಸ ಹಣೆಬರೆಹವನ್ನು ಬರೆದು ಎಲ್ಲರಿಗೂಬದಲಾವಣೆಯಾಗುವ ಒಳ್ಳೆಯ ಭಾಗ್ಯವನ್ನು ತೆರೆದು ಕೊಟ್ಟಿದೆ. ಹಾಗೆಯೇ ರೆಕ್ಕೆಯ ಬೀಸುತ , ಮೇಲಕ್ಕೆ ಹಾರುತ, ಹಾರುವ ಈ ಹೊಸಗಾಲದ ಹಸು ಮಕ್ಕಳಿಗೆ ಹೊಸ ಚೇತನವನ್ನು (ಶಕ್ತಿಯನ್ನು) ನೀಡುತ್ತ , ಉತ್ತಮ ¨ಭವಿಷ್ಯಕ್ಕಾಗಿ ಶುಭ ಹರಸಿದೆ.
IV.
9. ಆಯ್ಕೆ :- ಈ ವಾಕ್ಯವನ್ನು ಕವಿ ‘ಜಿ.ಎಸ್. ಶಿವರುದ್ರಪ್ಪ’ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ಕವನ ಸಂಕಲನದಿಂದ ಆಯ್ದ ‘ಸಂಕಲ್ಪಗೀತೆ ’ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ :- ಕವಿ ಜಿ.ಎಸ್.ಶಿವರುದ್ರಪ್ಪನವರು ಜಾತೀಯತೆ,ಮತ, ಭಾಷೆ, ಬಣ್ಣ, ಅಜ್ಞಾನ, ಅಂದಕಾರ,ಮೂಡನಂಬಿಕೆಗಳೆಂಬ ಕತ್ತಲೆಯನ್ನು ಓಡಿಸಲು ಪ್ರೀತಿಯೆಂಬ ಅರಿವಿನ ಹಣತೆಯನ್ನು ಹಚ್ಚಬೇಕಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ :- ನಮ್ಮ ಜೀವನದಲ್ಲಿ ಅಜ್ಞಾನ ಅಂದಕಾರವನ್ನು ಹೋಗಲಾಡಿಸಲು ಪ್ರೀತಿಯೆಂಬ ಅರಿವಿನ ದೀಪವನ್ನು ಬೆಳಗಿಸುವ ಸಂಕಲ್ಪ ಮಾಡಬೇಕೆಂಬ ತಮ್ಮ ಭಾವನೆಯನ್ನು ಕವಿ ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತಾರೆ.
V.
10.
ಇಂದ,
ತನುಜಾ
೧೦ ನೇ ತರಗತಿ
ಸರಕಾರಿ ಪ್ರೌಢ ಶಾಲೆ ಗಡಿಕೇಶ್ವಾರ
ತಾಲೂಕ ಚಿಂಚೋಳಿ ಜಿಲ್ಲಾ ಕಲಬುರಗಿ
ದಿನಾಂಕ: 05.07.2023
ಇವರಿಗೆ,
ಅಧ್ಯಕ್ಷರು
ಗ್ರಾಮ ಪಂಚಾಯಿತಿ ಗಡಿಕೇಶ್ವಾರ
ತಾಲೂಕ ಚಿಂಚೋಳಿ ಜಿಲ್ಲಾ ಕಲಬುರಗಿ
ಮಾನ್ಯರೇ,
ವಿಷಯ : ನಮ್ಮ ಬೀದಿ ದೀಪಗಳನ್ನು ಸರಿಪಡಿಸುವಂತೆ ಕೋರಿ ಅರ್ಜಿ.
ಈ ಮೆಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನಾನು ತನುಜಾ, ೧೦ ನೇ ತರಗತಿ, ಸರಕಾರಿ ಪ್ರೌಢ ಶಾಲೆ ಗಡಿಕೇಶ್ವಾರ, ಈ ಮೂಲಕ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ನಮ್ಮ ಬೀದಿ ದೀಪಗಳು ಕೆಲವು ದಿನಗಳಿಂದ ಕೆಟ್ಟುಹೋಗಿವೆ . ಈ ರಸ್ತೆಯಲ್ಲಿ ರಾತ್ರಿ ಹೊತ್ತು ಮುದುಕರು, ಹೆಣ್ಣುಮಕ್ಕಳು ಹಾಗೂ ಚಿಕ್ಕ ಮಕ್ಕಳು ಏಕಾಂಗಿಯಾಗಿ ಸಂಚರಿಸಲು ಭಯಪಡುವಂತಾಗಿದೆ. ಹೀಗಾಗಿ, ಜನಪರ ಕಾಳಜಿ ಹೊಂದಿರುವ ತಾವು ಈ ಕೂಡಲೇ ನಮ್ಮ ಗ್ರಾಮದ ಬೀದಿ ದೀಪಗಳನ್ನು ಸರಿಪಡಿಸಿ ಜನರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸಲು ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ
ತನುಜಾ