Shabari lesson questions and answers for class 10. Here we explained notes of the lesson Shabari for SSLC. 10th kannada shabari lesson question answer.
In this lesson we are going to learn important questions from the lesson Shabari. Shabari lesson questions for SSLC exam preparation.
To get more SSLC video lesson notes, visit our YouTube cannel. This channel is very useful for 10th class exam preparation.
10th kannada shabari lesson question answer
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .
1. ಶ್ರೀರಾಮನ ತಂದೆಯ ಹೆಸರೇನು ?
ಶ್ರೀರಾಮನ ತಂದೆಯ ಹೆಸರು ದಶರಥ
2. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು ?
ಶ್ರೀರಾಮನಿಗೆ ಸಮರ್ಪಿಸಲು ಶಬರಿಯು ಹೂವು ಹಣ್ಣುಗಳನ್ನು ಸಂಗ್ರಹಿಸಿದ್ದಳು .
3. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು ?
ಮತಂಗಾಶ್ರಮದಲ್ಲಿ ಶಬರಿ ಎಂಬ ತಪಸ್ವಿನಿಯು ವಾಸವಿದ್ದಳು .
4. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ?
ದನು ಎಂಬುವವನು ಶಬರಿಯ ವೃತ್ತಾಂತವನ್ನು ತಿಳಿಸಿ ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸುತ್ತಾನೆ .
5. ಶಬರಿ ‘ ಗೀತನಾಟಕದ ಕರ್ತೃ ಯಾರು ?
ಪು.ತಿ. ನರಸಿಂಹಾಚಾರ್ ಅವರು ‘ ಶಬರಿ ‘ ಗೀತನಾಟಕದ ಕರ್ತೃ ಆಗಿದ್ದಾರೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು ?
“ ಸೀತೆಯು ನಮಗೆ ದೊರೆಯುವಳೇ ? ಭೂಮಿ ಜಾತಿಯು , ಆತ್ಮ ಕಾಮ ಕಲ್ಪಲತೆಯು , ಚೆಲುವೆಯೂ ಆದ ಸೀತೆಯು ದೊರೆಯುವಳೆ ? ಎಲೈ , ಗಿರಿವನಗಳೇ ನಿಮ್ಮನ್ನು ಪ್ರಾರ್ಥಿಸುತ್ತೇನೆ . ಅವಳಿರುವ ನೆಲೆಯನ್ನು ಯಾರು ಬಲ್ಲಿರಿ ? ನನ್ನರಸಿ ನನಗೆ ದೊರೆಯುವಳೆ ? ಹೇಳಿರಿ . ಈ ಚಿಂತೆಯು ನನ್ನ ಮನಸ್ಸನ್ನು ಹಾಳು ಮಾಡುತ್ತಿದೆ . ನನ್ನೆದೆಯನ್ನು ಈ ಜಗವನ್ನು ಬಿಡದೆ ಸುಡುವಂತೆ ಮಾಡುತ್ತಿದೆ ಅಯ್ಯೋ ” ಎಂದು ಶ್ರೀರಾಮನು ರಾಮನು ಗಿರಿವನವನ್ನು ಪ್ರಾರ್ಥಿಸಿದನು .
2. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು ?
ಲಕ್ಷ್ಮಣನು ತನ್ನ ಅಣ್ಣನಾದ ಶ್ರೀರಾಮನನ್ನು ಸಮಾಧಾನಪಡಿಸುತ್ತಾ ತಾಳಿಕೋ ಅಣ್ಣ , ಸೂರ್ಯನೇ ಕಾಂತಿ ಹೀನನಾದರೆ ಆ ಕಾಂತಿಗೆ ತೇಜಸ್ಸಿಗೆ ಸ್ಥಳವೆಲ್ಲಿ ? ಯಾರೂ ಆ ತೇಜಸ್ಸನ್ನು ಕೊಡುತ್ತಾರೆ ಹಾಗೆಯೇ ಶ್ರೀರಾಮನೇ ಧೈರ್ಯ ಕಳೆದುಕೊಂಡರೆ ಧೈರ್ಯ ತುಂಬುವವರಾರು ? ” ಎನ್ನುತ್ತಾನೆ . ಹೀಗೆ ಲಕ್ಷಣಮ ಅಣ್ಣನನ್ನು ಸಂತೈಸಿದನು .
3. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು ?
ಶಬರಿಯು ಶ್ರೀರಾಮನಿಗಾಗಿ ನಿನ್ನೆ ತಂದಿರಿಸಿದ ಹೂವು ಹಣ್ಣುಗಳನ್ನು ಬೇರ್ಪಡಿಸಿ ಅವುಗಳ ಜಾಗದಲ್ಲಿ ಹೊಸದನ್ನು ಇಡುತ್ತಿದ್ದಾಳೆ . ಆ ಫಲ ಮುಷ್ಪಗಳನ್ನು ಕಂಡು ಹಾಡುತ್ತಾಳೆ , ‘ ಎಲೈ ತಳಿರು , ಹೂಗಳೆ ಅವನ ಸ್ಪರ್ಷವೆಂಬಂತ ನಿಮ್ಮ ಮೃದುತ್ವವಿದೆ ಕೇವಲ ಗಾಳಿಗೇ ಒಣಗಿರುವಿರಿ , ದುಂಬಿಗಳ ಗುಂಪು ನಿಮ್ಮ ಕಂಪನ್ನರಸಿ ಬಂದವು . ಎಲೈ ಫಲಗಳೆ ಅವನು ನಿಮ್ಮನ್ನು ಸವಿಯಲಾಗಲಿಲ್ಲ , ಹಾಗಾಗಿ ನೀವು ರುಚಿಗೆಟ್ಟಿದ್ದೀರಿ , ಹದಗೆಟ್ಟು ಹುಳುವಿಗೆ ಆಸರೆಯಾದಿರಿ , ಅವನಿಗೆ ಮೀಸಲಾಗಿಟ್ಟ ಫಲ ಪುಷ್ಟಗಳು ಮಾಸಲಾದರೂ , ನಾನು ಮತ್ತೆ ಮತ್ತೆ ಹೊಸತನ್ನು ತಂದಿಟ್ಟು ಅವನಿಗಾಗಿ ಕಾದಿರುವ ಛಲ ನನ್ನದು ಎಂದು ಹಾಡುತ್ತಾ ಹೂವಿನ ಮಾಲೆಯನ್ನು ಕಟ್ಟುತ್ತಿರುತ್ತಾಳೆ .
shabari lesson notes
4. ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ .
ಶಬರಿಯು ಶ್ರೀರಾಮನ ಬಳಿಗೆ ಬಂದು ಅವನ ಮೈಯನ್ನು ಮುಟ್ಟಿ ಪಾದಕ್ಕೆ ನಮಸ್ಕರಿಸಿ ಅವನ ಕೈಯ್ಯನು ಕಣ್ಣಿಗೊತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು . ಬನ್ನಿ ಬನ್ನಿ ಎಂದು ಪ್ರೀತಿಯಿಂದ ಆಶ್ರಮಕ್ಕೆ ಆಹ್ವಾನಿಸಿದಳು . ಅಯ್ಯೋ ಇಂದು ಏನೂ ಸಿದ್ಧತೆ ನಡೆಸಿಲ್ಲವೆ ಎಂದು ಪೇಚಾಡುತ್ತಾಳೆ . ನಿನ್ನೆಯಷ್ಟು ಚೆನ್ನಾಗಿ ಸಿದ್ಧತೆ ಮಾಡಿಲ್ಲ ಎಂದು ನೊಂದುಕೊಳ್ಳುತ್ತಾಳೆ . ತಾನು ಪ್ರೀತಿಯಿಂದ ಕಟ್ಟಿದ್ದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸಿದಳು . ತಾನು ತಂದ ಹಣ್ಣನ್ನು ನೀಡುತ್ತ ಜಗತ್ತಿನಲ್ಲೇ ಇದರಷ್ಟು ರುಚಿಯಾದ ಹಣ್ಣು ಯಾವುದೂ ಇಲ್ಲ ಇದನ್ನು ಸವಿಯಿರಿ ಎಂದು ನೀಡಿದಳು .
5. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು ?
ಶ್ರೀರಾಮನು ಶಬರಿಗೆ ‘ ನೀನು ನೀಡಿದ ಆದರ ಆತಿಥ್ಯದಿಂದ ನಾವು ಸುಖ , ಸಂತೋಷದಿಂದ ಇದ್ದೇವೆ . ಅರಣ್ಯದಲ್ಲಿದ್ದರೂ ಸ್ವರ್ಗದಂತಹ ಅನುಭವವಾಗಿದೆ . ಇಂಥ ಸವಿಯಾದ ಹಣ್ಣುಗಳನ್ನು ನೀಡಿರುವ ನಿನಗೆ ನಾವು ಋಣಿಯಾಗಿದ್ದೇವೆ ‘ ಎಂದನು . ಶ್ರೀರಾಮನು ತಾಯಿ , ಏಕೆ ಈ ಕಣ್ಣೀರು ನೀನು ನಮಗೆ ನೀಡಿದ ಆದರ , ಆತಿಥ್ಯ , ಸತ್ಕಾರಗಳಲ್ಲಿ ಯಾವುದಕ್ಕೂ ಕೊರತೆಯಾಗಿಲ್ಲ . ನಮ್ಮ ಅಯೋಧ್ಯೆಯ ಅರಮನೆಗಿಂತಲೂ ಹೆಚ್ಚಿನ ಸತ್ಕಾರ ಇಲ್ಲಿ ದೊರೆಯಿತು . ಇದು ಕಾಡು ಎಂಬುದನ್ನು ಮರೆತು ನಮ್ಮ ಮನೆ ಎಂಬ ಭಾವನೆ ನಮಗೆ ಬಂದಿದೆ . ನಿನ್ನನ್ನು ನಮ್ಮ ತಾಯಿ ಎಂದು ಭಾವಿಸಿದ್ದೇವೆ ಎಂದರು .
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು . ವಾಕ್ಯಗಳಲ್ಲಿ ಉತ್ತರಿಸಿ .
1. ಶಬರಿಯ ಚಿಂತೆ ಹಿಂಗಿಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ?
ಶಬರಿಯು ತಾನು ಪ್ರೀತಿಯಿಂದ ಕಟ್ಟಿದ್ದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸುತ್ತಾಳೆ . ತಾನು ತಂದ ಹಣ್ಣನ್ನು ನೀಡುತ್ತ ಜಗತ್ತಿನಲ್ಲೇ ಇದರಷ್ಟು ರುಚಿಯಾದ ಹಣ್ಣು ಯಾವುದೂ ಇಲ್ಲ , ಇದನ್ನು ಸವಿಯಿರಿ ಎಂದು ನೀಡಿದಳು . ಇದರಿಂದ ಪ್ರಸನ್ನರಾದ ರಾಮಲಕ್ಷ್ಮಣರನ್ನು ಕಂಡು ಶಬರಿ ಧನ್ಯಭಾವದಿಂದ ಆನಂದಿಸಿದಳು , ನರ್ತಿಸಿದಳು . ನಾನು ಈಗ ತುಂಬ ಸುಖಿಯಾಗಿರುವೆನು . ನನ್ನ ಜೀವನದ ಮಹದಾಸೆ ನೆರವೇರಿದೆ . ನನ್ನ ಹಂಬಲ ಅಳಿದ ದುಂಬಿಯಾಗಿರುವೆನು . ನಾನು ಸುಖಿಯಾಗಿರುವೆನು . ನದಿ , ಹೊಳೆ ಸಮುದ್ರವನ್ನು ಸೇರುವಂತೆ ದೋಣಿಯು ( ಹಡಗು ) ದಡವನ್ನು ( ಬಂದರನ್ನು ) ಸೇರುವಂತೆ ನನ್ನ ಮನಸ್ಸು ನಿರಾಳವಾಗಿದೆ .
SSLC Kannada notes
2. ಶಬರಿಯ ಸಡಗರ , ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ ?
ಶಬರಿಯು ಶ್ರೀರಾಮನನ್ನು ಕಂಡು ಬೆರಗಾದಳು . ಅನಂತರ ಶ್ರೀರಾಮನ ಬಳಿಗೆ ಬಂದು ಅವನ ಮೈಯನ್ನು ಮುಟ್ಟಿ ಪಾದಕ್ಕೆ ನಮಸ್ಕರಿಸಿ ಅವನ ಕೈಯನ್ನು ಕಣ್ಣಿಗೊತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು . ಬನ್ನಿ ಬನ್ನಿ ಎಂದು ಪ್ರೀತಿಯಿಂದ ಆಶ್ರಮಕ್ಕೆ ಆಹ್ವಾನಿಸಿದಳು . ಅಯ್ಯೋ ಇಂದು ಏನೂ ಸಿದ್ಧತೆ ನಡೆಸಿಲ್ಲವೆ ಎಂದು ಪೇಚಾಡುತ್ತಾಳೆ . ನಿನ್ನೆಯಷ್ಟು ಚೆನ್ನಾಗಿ ಸಿದ್ಧತೆ ಮಾಡಿಲ್ಲ ಎಂದು ನೊಂದುಕೊಳ್ಳುತ್ತಾಳೆ , ತಾನು ಪ್ರೀತಿಯಿಂದ ಕಟ್ಟಿದ್ದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸುತ್ತಾಳೆ .
ನಾನು ಹಂಬಲ ಅಳಿದ ದುಂಬಿಯಾಗಿರುವೆನು . ನಾನು ಸುಖಿಯಾಗಿರುವೆನು . ನದಿ , ಹೊಳೆಯು ಸಮುದ್ರವನ್ನು ಸೇರುವಂತೆ , ದೋಣಿಯು ( ಹಡಗು ) ದಡವನ್ನು ( ಬಂದರನ್ನು ) ಸೇರುವಂತೆ ನನ್ನ ಮನಸ್ಸು ನಿರಾಳವಾಗಿದೆ . ನಿಮ್ಮನ್ನು ನೋಡಿ , ನಿಮ್ಮೊಡನೆ ಮಾತನಾಡಿ , ನಿಮ್ಮ ದಣಿವನ್ನು ತಣಿಸಿ ನಾನು ಆನಂದಗೊಂಡಿದ್ದೇನೆ , ಇಂದು ನನ್ನ ಮನಸ್ಸಿನ ಭಾರ ಇಳಿದು ಹಗುರವಾಗಿದೆ . ಜೀವನ ಸಾರ್ಥಕವಾಗಿದೆ ಪರಲೋಕ ಕರ ನೀಡಿ ಕರೆಯುತ್ತಿದೆ . ನಾನು ಅತ್ಯಂತ ಸುಖಿಯಾಗಿರುವೆ ಎಂದಳು .
3. ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ?
ಶ್ರೀರಾಮನು ಸಕಲ ಸದ್ಗುಣಗಳ ಸಾಕಾರ ಮೂರ್ತಿ , ಶ್ರೀರಾಮನ ಗುಣಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ್ದ ಅಸಂಖ್ಯಾತ ಭಕ್ತರಲ್ಲಿ ಶಬರಿಯೂ ಒಬ್ಬಳು . ಈಕೆಯು ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ ಬ್ರಹ್ಮರ್ಷಿಗಳೆನಿಸಿದ್ದ ಮತಂಗ ಮಹರ್ಷಿಗಳ ಆಶ್ರಯದಲ್ಲಿದ್ದಳು . ಮತಂಗರು ದಿವ್ಯ ಲೋಕವನ್ನು ಸೇರಿದ ಬಳಿಕ ಶಬರಿಯು ರಾಮಧ್ಯಾನದಲ್ಲಿ ತೊಡಗಿ ಶ್ರೀರಾಮನ ದರ್ಶನಕ್ಕಾಗಿ ಕಾದಿದ್ದಳು . ಶ್ರೀರಾಮನ ಬರುವಿಕೆಗಾಗಿ ಕಾದು ಕಾದು ಕಾತರಿಸಿ ಮುಪ್ಪಾಗಿ ಭಕ್ತಿಯೇ ರೂಪುಗೊಂಡಂತೆ ಇದ್ದ ಶಬರಿಯನ್ನು ದರ್ಶಿಸುತ್ತಾರೆ . ಶಬರಿಯು ತನ್ನ ಆರಾಧ್ಯ ದೈವ ಶ್ರೀರಾಮನನ್ನು ಕಂಡು ಆನಂದಿಸುತ್ತಾಳೆ . ಧನ್ಯತೆಯ ಭಾವನೆಯಿಂದ ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮನು ಮುಕ್ತಿಯನ್ನು ಕರುಣಿಸುತ್ತಾನೆ . ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೀಗೆ ನಿಜವಾಗಿದೆ .
ಈ) ಸಂದರ್ಭದೊಂದಿಗೆ ಸ್ವಾರಸ್ಯವನ್ನು ಬರೆಯಿರಿ .
1. ಆವುದೀ ಮರುಳು ? ನಮ್ಮೆಡೆಗೆ ಬರುತಿಹುದು ?
ಈ ವಾಕ್ಯವನ್ನು ಪು . ತಿ . ನರಸಿಂಹಾಚಾರ್ ಅವರು ಬರೆದಿರುವ ಶಬರಿ ಎಂಬ ಗೀತ ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು.ತಿ.ನ , ವಿರಚಿತ ‘ ಶಬರಿ ‘ ಗೀತನಾಟಕ ) ಏಕಾಂಕನಾಟಕಗಳ ಕೃತಿ . ಶ್ರೀರಾಮನು ಲಕ್ಷ್ಮಣನಿಗೆ ಈಗ ನಾವು ದನು ಹೇಳಿದ ವಾರಿಯಲ್ಲಿ ಬಂದಿದ್ದೇವೆಯೆ ?
ಆ ತಪಸ್ವಿನಿಯ ಆಶ್ರಮವು ಇದೆಯೆ ? ಅಲ್ಲಿ ನೋಡು ಎಂದು ಕೇಳಿದನು . ಶಬರಿಯು ತಳಿರು , ಹೂ , ಹಣ್ಣುಹಂಪಲುಗಳನ್ನು ತರುತ್ತಿರುವುದನ್ನು ಕಂಡು ಏನಾದರು ಕಷ್ಟ ಬರಬಹುದೆಂದು ತಿಳಿದು ಅಣ್ಣನನ್ನು ಲಕ್ಷ್ಮಣನು ಮರೆಗೆ ಕರೆದುಕೊಂಡು ಹೋದನು . ಶಬರಿಯ ಓಡಾಟವನ್ನು ಪರೀಕ್ಷಾ ದೃಷ್ಟಿಯಿಂದ ಗಮನಿಸಿದನು .
shabari lesson notes for SSLC
2. ನಾಚುತಿಹನೀ ಪೂಜೆಯೇ ನಲುಮೆಯಿಂದ
ಈ ವಾಕ್ಯವನ್ನು ಪು.ತಿ. ನರಸಿಂಹಾಚಾರ್ ಅವರು ಬರೆದಿರುವ ‘ ಶಬರಿ ‘ ಎಂಬ ಗೀತ ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು.ತಿ.ನ , ವಿರಚಿತ ‘ ಶಬರಿ ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ . ಕಸ್ತೂರಿ ಸಂಪಾದಿಸಿರುವ ) ಏಕಾಂಕನಾಟಕಗಳ ಕೃತಿ ಶ್ರೀರಾಮನು ಶಬರಿಯನ್ನು ಕಂಡು “ ನನಗಾಗಿ ಇಷ್ಟೊಂದು ಹಂಬಲಿಸುತ್ತಿರುವ ತಪಸ್ವಿನಿ ಶಬರಿ ಇವಳೇ ಆಗಿರಬಹುದು . ಆ ಉದರಮುಖ ಎನಿಸಿರುವ ದನು ಹೇಳಿರುವ ಶಬರಿ ಇವಳೆ ಇರಬಹುದು .
ನನ್ನಿಂದ ಇವಳಿಗೆ ಯಾವರೀತಿಯ ಉಪಕಾರವು ಇಲ್ಲದಿದ್ದರೂ ಈ ಶಬರಿಯು ಎಷ್ಟೊಂದು ಪ್ರೀತಿಯಿಂದ , ನಲೆಯಿಂದ ನನ್ನನ್ನು ನೆನೆಯುತ್ತಿದ್ದಾಳೆ , ಈ ಪೂಜ್ಯಳನ್ನು ಕಂಡರೆ ನನಗೆ ಸಂಕೋಚವಾಗುತ್ತಿದೆ ” ಎಂದು ಶ್ರೀರಾಮನು ಹೇಳುತ್ತಾನೆ .
3. ತಾಯಿ , ಪಾರಿಗರಿಗೆ ಬೀಡಿಲ್ಲಿ ದೊರೆಯುವುದೇ ?
ಈ ವಾಕ್ಯವನ್ನು ಪು.ತಿ. ನರಸಿಂಹಾಚಾರ್ ಅವರು ಬರೆದಿರುವ ಶಬರಿ ಎಂಬ ಗಣಿ ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು ವಿರಚಿತ ‘ ಶಬರಿ ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ . ಕಸ್ತೂರಿ ಸಂಪಾದಿಸಿರುವ ) ಏಕಾಂಕನಾಟಕಗಳ ಕೃತಿ ಶ್ರೀರಾಮನು ಆಶ್ರಮದ ಬಾಗಿಲಲ್ಲಿ ನಿಂತು “ ತಾಯಿ ದಾರಿಹೋಕರಿಗೆ ಇಲ್ಲಿ ಉಳಿದುಕೊಳ್ಳಲು ಆಶ್ರಯ ದೊರೆಯುವುದೇ ” ಎಂದು ಶಬರಿಯನ್ನು ಕೇಳುತ್ತಾನೆ . ಆಗ ಶಬರಿಯು ನಡುಗುವ ಎದೆಯಿಂದ ಧ್ವನಿ ಬಂದ ಕಡೆಗೆ ತಿರುಗಿ “ ಎಲೈ ಮಹಾಮರುಷನೇ ನೀನು ಶ್ರೀರಾಮನೇ ? ” ಎಂದು ಕೇಳುತ್ತಾಳೆ , ಅದಕ್ಕೆ ಶ್ರೀರಾಮನು ‘ ಹೌದು ತಾಯಿ ನನ್ನನ್ನು ರಾಮ ಎನ್ನುತ್ತಾರೆ . ನನ್ನ ತಮ್ಮ ( ಸೌಮಿತ್ರಿ ) ಲಕ್ಷ್ಮಣ . ಶಬರಿಯು , ತುಂಬ ಸಡಗರದಿಂದ ‘ ನೀವು ರಾಮ ಲಕ್ಷ್ಮಣರೇ ? ‘ ಎಂದು ಆಶ್ಚರ್ಯದಿಂದ ಕೇಳುತ್ತಾಳೆ.
important questions from the lesson Shabari
4. ರೂಪಿನಂತ ಮಾತು ಕೂಡ ಎನಿತುಧಾರವಾಗಿದೆ !
ಈ ವಾಕ್ಯವನ್ನು ಪು . ತಿ . ನರಸಿಂಹಾಚಾರ್ ಅವರು ಬರೆದಿರುವ ಶಬರಿ ಎಂಬ ಗೀತ , ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು.ತಿ.ನ. ವಿರಚಿತ ‘ ಶಬರಿ ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ . ಕಸ್ತೂರಿ ಸಂಪಾದಿಸಿರುವ ) ಏಕಾಂಕನಾಟಕಗಳ ಕೃತಿ . ಶಿರಾಮನು , ತಾಯಿ ಏಕೆ ಈ ಕಣ್ಣೀರು ? ನೀನು ನಮಗೆ ನೀಡದ ಆದರ , ಆತಿಥ್ಯ ಸತ್ಕಾರಗಳಲ್ಲಿ ಯಾವುದಕ್ಕೂ ಕೊರತೆಯಾಗಿಲ್ಲ . ನಮ್ಮ ಅಯೋಧ್ಯೆಯ ಅರಮನೆಗಿಂತಲೂ ಹೆಚ್ಚಿನ ಸತ್ಕಾರ ಇಲ್ಲಿ ದೊರೆಯಿತು . ಇದು ಕಾಡು ಎಂಬುದನ್ನು ಮರೆತು ನಮ್ಮ ಮನೆ ಎಂಬ ಭಾವನೆ ನಮಗೆ ಬಂದಿದೆ . ನಿನ್ನನ್ನು ನಮ್ಮ ತಾಯಿ ಎಂದು ಭಾವಿಸಿದ್ದೇವೆ .
ಆಗ ಶಬರಿಯು ಶ್ರೀರಾಮನಿಗೆ ‘ ನಿನ್ನ ರೂಪದಂತೆಯೇ ನಿನ್ನ ಮಾತು ಕೂಡ ತುಂಬಾ ಉದಾರವಾಗಿದೆ . ನಾನು ಧನ್ಯಳು , ಸಿದ್ಧರ , ಮಣ್ಯಪುರುಷರ , ತಪಸ್ವಿಗಳ ವರ ನನಗೆ ಇಂದು ಲಭಿಸಿದೆ . ನಿಮ್ಮನ್ನು ಕಂಡ ಮಣ್ಯವಂತೆ ನಾನಾಗಿದ್ದೇನೆ . ಇಂದಿಗೆ ನನ್ನ ಚಿಂತೆಯೆಲ್ಲಾ ಕರಗಿಹೋಯಿತು . ಗುರುಗಳನ್ನು ಪೂಜಿಸಿದ ತೃಪ್ತಿ ನನಗೆ ಇದೆ ಎಂದಳು .
5. ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು?
ಈ ವಾಕ್ಯವನ್ನು ಪು . ತಿ . ನರಸಿಂಹಾಚಾರ್ ಅವರು ಬರೆದಿರುವ ಶಬರಿ ‘ ಎಂಬ ಗೀತ ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು.ತಿ.ನ. ವಿರಚಿತ ‘ ಶಬರಿ ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ . ಕಸ್ತೂರಿ ಸಂಪಾದಿಸಿರುವ ) ಏಕಾಂಕನಾಟಕಗಳ ಕೃತಿ .
ಜಗತ್ತಿಗೆ ಬೆಳಕನ್ನು ನೀಡುವವರು , ಪರೋಪಕಾರ ಮಾಡುವವರು ತಮ್ಮ ನೋವನ್ನು ಮರೆಯುತ್ತಾರೆ . ತಮ್ಮ ಸಂಕಟವನ್ನು ಮತ್ತೊಬ್ಬರಿಗೆ ಹೇಳುವುದಿಲ್ಲ . ಹೇಗೆ ದೀಪದ ಬತ್ತಿಯ ‘ ಉರಿದ ಕಪ್ಪು ಭಾಗ ಬೇರೆಯವರಿಗೆ ಕಾಣುವುದಿಲ್ಲವೋ ಇವರೂ ಹಾಗೆ . ನೋಡುಗರಿಗೆ ಕೇವಲ ಬೆಳಕು ಮಾತ್ರ ಕಾಣುತ್ತದೆ ಎಂದು ಶ್ರೀರಾಮನು ಲಕ್ಷ್ಮಣನಿಗೆ ಹೇಳಿದನು .
Watch this video for the explanation of Shabari lesson questions and answers for class 10.