Nijavada Adarsha Purusha Yaragabeku notes for class 10. Nijavada Adarsha Purusha Yaragabeku question and answer.
In this post we have discussed notes of the lesson Nijavada Adarsha Purusha Yaragabeku. SSLC lesson Nijavada Adarsha Purusha Yaragabeku notes.
To get more video notes foe class 10, visit our YouTube channel. This channel is very useful for SSLC exam preparation.
Nijavada Adarsha Purusha Yaragabeku notes for class 10
ಪಾಠ : ೫ ನಿಜವಾದ ಆದರ್ಶ ಪುರುಷ ಯಾರಾಗಬೇಕು?
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1. ಯಾವುದು ಎಂದೆಂದೂ ನಮ್ಮ ಆದರ್ಶವಾಗಿರಬೇಕು ?
ತತ್ವಗಳು ಎಂದೆಂದೂ ನಮ್ಮ ಆದರ್ಶವಾಗಿರಬೇಕು.
2.ಯಾವ ವ್ಯಕ್ತಿ ನಮಗೆ ಆದರ್ಶವಾಗಬಲ್ಲನು ?
ಎಂದೂ ದೂರವಾಗದಂಥ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು.
3. ಗುರುಪೂರ್ಣಿಮಾ ದಿನದಂದು ಲೇಖಕರು ಯಾರನ್ನು ಪೂಜಿಸುತ್ತಾರೆ ?
ಗುರುಪೂರ್ಣಿಮಾ ದಿನದಂದು ಲೇಖಕರು ಧ್ವಜವನ್ನು ಪೂಜಿಸುತ್ತಾರೆ.
4. ತಿಲಕರನ್ನು ಯಾವ ರೀತಿ ಚಿತ್ರಿಸಲಾಗಿತ್ತು ?
ತಿಲಕರನ್ನು ಚತುರ್ಭುಜರನ್ನಾಗಿ ಮಾಡಿ , ಕೈಗಳಲ್ಲಿ ಶಂಖ , ಚಕ್ರ , ಗದೆ , ಪದ್ಯಗಳನ್ನು ಕೊಡಲಾಗಿತ್ತು.
5. ಶಿವಚರಿತ್ರೆಯಲ್ಲಿ ಯಾವ ಉಲ್ಲೇಖ ಮಾಡಲಾಗಿದೆ ?
ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಉಲ್ಲೇಖ ಮಾಡಲಾಗಿದೆ.
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಜನರು ಮೂರ್ತಿಪೂಜೆ ಮಾಡಲು ಕಾರಣವೇನು ?
ಅದೃಶ್ಯ , ಅವ್ಯಕ್ತ ಹಾಗೂ ಅಸ್ಪಷ್ಟ ವಿಶ್ವಚಾಲಕ ಶಕ್ತಿಯನ್ನು ನಿರ್ಗುಣ ಮತ್ತು ನಿರಾಕಾರ ರೂಪದಲ್ಲಿ ಪೂಜೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ ಆ ವಿಶ್ವವ್ಯಾಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ. ಜನಸಾಮಾನ್ಯರಿಗೆ ವಿಶ್ವಶಕ್ತಿಯ ನಿರಾಕಾರ ಸ್ವರೂಪದ ಅರಿವು ಮೂಡಿಸಲು ಮೂರ್ತಿ ಪೂಜೆಯು ಒಂದು ಸುಲಭ ಸಾಧನವಾಗಿದೆ.
2.ಯಾವ ವ್ಯಕ್ತಿಯನ್ನು ನಾವು ಆದರ್ಶವಾಗಿ ಸ್ವೀಕರಿಸಬೇಕು ?
ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ, ಯಾವಾಗಲೂ ತಪ್ಪು ಮಾಡದವನೆಂದು ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಕಳಂಕವಿಲ್ಲದಂತಿರುವುದೋ ನಿಸ್ಸಂಕೋಚವಾಗಿ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ, ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು.
3. ಮೊಗ್ಗನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು?
ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಮಷಗಳು ನಮ್ಮ ಆದರ್ಶವಾಗಬೇಕು. ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಆ ಕ್ರಿಮಿಕೀಟಗಳಿಂದಾಗಿ ಮುಂದೆ ಅವು ಪೂರ್ಣವಾಗಿ ಅರಳಲಾರವು.
4. ಧ್ವಜವನ್ನೇ ನಮ್ಮ ಗುರುವೆಂದು ಸ್ವೀಕರಿಸಿದ್ದೇವೆ ಎಂದು ಲೇಖಕರು ಹೇಳಿದ್ದಾರೇಕೆ?
ಕೇವಲ ತಮ್ಮ ಒಂದೇ ಆ ಅಚಲ ಪದವಿಯಲ್ಲಿ ಇರಬಲ್ಲದು. ಅದನ್ನು ಧ್ವಜವು ಸಾಂಕೇತಿಸುತ್ತದೆ. ಯಾವ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಟ್ಟುತ್ತವೆಯೋ, ಯಾವುದನ್ನು ಕಂಡ ಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆಯೋ, ಹೃದಯದಲ್ಲಿ ಅಪೂರ್ವ ಸ್ಫೂರ್ತಿಯ ಸಂಚಾರವಾಗುತ್ತದೆಯೋ ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ. ಗುರುಪೂರ್ಣಿಮಾ ದಿನದಂದು ಅದನ್ನು ಪೂಜಿಸುತ್ತೇವೆ ಎಂದು ಲೇಖಕರು ಹೇಳಿದ್ದಾರೆ.
question and answer of Nijavada Adarsha Purusha Yaragabeku
5. ವ್ಯಕ್ತಿಗಳನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು?
ವ್ಯಕ್ತಿಗಳನ್ನು ಆದರ್ಶವಾಗಿ ಸ್ವೀಕರಿಸಲು ಕೆಲವು ತೊಡಕುಗಳಿವೆ. ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ, ಸರ್ವಥಾ ಪ್ರಮಾದಾತೀತನೆಂದೂ ಭಾವಿಸುವವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ, ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ, ಆಗ ಮನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು, ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ.
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಆದರ್ಶ ವ್ಯಕ್ತಿ ದೋಷರಹಿತನಾಗಿರಬೇಕಾದ್ದು ಮುಖ್ಯ, ಏಕೆ?
ನಮ್ಮಿಂದ ಎಂದೂ ದೂರವಾಗದಂಥ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು, ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ, ಯಾವುದೇ ದೋಷ ಇಲ್ಲದವನೆಂದು ಭಾವಿಸುವವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ, ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ, ಆಗ ಮನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು, ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ. ಆದ್ದರಿಂದ ಆದರ್ಶ ವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ, ಅಷ್ಟೇ ಅಲ್ಲ ನಾವು ಆದರ್ಶವೆಂದು ಭಾವಿಸುವ ಎಲ್ಲ ಗುಣಗಳೂ ಆ ವ್ಯಕ್ತಿಯಲ್ಲಿ ನಮಗೆ ಎದ್ದು ಕಾಣಬೇಕು. ಆದ್ದರಿಂದ ನಾವು ಯಾರ ಗುಣಗಳನ್ನನುಸರಿಸಲು ಸಾಧ್ಯವೋ ಅಂಥ ನಿರ್ದೋಷ ವ್ಯಕ್ತಿಯನ್ನೇ ಆದರ್ಶವಾಗಿ ಭಾವಿಸಬೇಕಾಗಿದೆ. ಯಾರ ಜೀವನವೆಂಬ ಹೂವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಕಳಂಕವಿಲ್ಲದಿರುವುದೋ, ಸ್ವಚ್ಛಂದವಾಗಿ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ, ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು.
2. ಶ್ರೀಕೃಷ್ಣನನ್ನು ಕೇವಲ ಪುಣ್ಯಸಂಚಯಕ್ಕಾಗಿ ಪೂಜಿಸುವುದು ಸರಿಯಲ್ಲ – ಲೇಖಕರು ಹೀಗೆ ಹೇಳಲು ಕಾರಣವೇನು?
ಕಾರಣವೇನೆಂದರೆ, ಮಹಾಪುರುಷರ ವಿಷಯದಲ್ಲಿ ಕೆಲವು ವಿಚಿತ್ರ ಭಾವನೆಗಳು ಸಮಾಜದಲ್ಲಿ ಬೇರೂರಿಬಿಟ್ಟಿವೆ. ಉದಾಹರಣೆಗೆ : ಶ್ರೀಕೃಷ್ಣನನ್ನು ಆದರ್ಶ ಎನ್ನಬಹುದಾದಂಥ ಹಲವಾರು ಮಹಾನ್ ಕಾರ್ಯಗಳನ್ನು ಅವನು ತನ್ನ ಜೀವನದಲ್ಲಿ ಸಾಧಿಸಿದ್ದಾನೆ. ಆದರೆ ಶ್ರೀಕೃಷ್ಣನು ತನ್ನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ನಮ್ಮ ಕೈಗಳಿಂದ ಮಾಡುವುದು ಅಸಾಧ್ಯ ಅವನಾದರೋ ದೇವರು, ಪೂರ್ಣಾವತಾರನಾಗಿದ್ದ; ದೇವರ ಅನುಕರಣೆಯನ್ನು ಮನುಷ್ಯರು ಮಾಡಲು ಸಾಧ್ಯವೆ? ಇತ್ಯಾದಿ ಹಲವಾರು ಭಾವನೆಗಳು ನಮ್ಮ ಸಮಾಜದಲ್ಲಿ ರೂಢವಾಗಿವೆ. ಶ್ರೀಕೃಷ್ಣನಂತಹ ಪೂರ್ಣ ಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ, ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ. ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು, ರಾಮಾಯಣ, ಮಹಾಭಾರತ, ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ, ಕೇವಲ ಮಣ್ಯಸಂಚಯಕ್ಕಾಗಿ ಎಂಬುದು ಸಂಕುಚಿತ ಆಲೋಚನೆಯಾಗಿದೆ.
SSLC lesson Nijavada Adarsha Purusha Yaragabeku notes
3. ಯಾವ ಕಲೆಯನ್ನು ನಾವು ಸೊಗಸಾಗಿ ಸಾಧಿಸಿದ್ದೇವೆಂದು ಲೇಖಕರು ನಗೆಯಾಡುತ್ತಾರೆ?
ಧಾರ್ಮಿಕ ಸಾಹಿತ್ಯದಲ್ಲಿ ಒಂದಕ್ಕಿಂತ ಒಂದು ಶ್ರೇಷ್ಠವಾದ ಗ್ರಂಥಗಳಿವೆ. ನಮ್ಮ ಗತ ಇತಿಹಾಸವಾದರೂ ಅಷ್ಟೇ, ಅತ್ಯಂತ ಮಹತ್ವಪೂರ್ಣವಾಗಿದೆ, ವೀರರಸಪ್ರಧಾನವಾಗಿದೆ, ಹಾಗೆಯೇ ಸ್ಫೂರ್ತಿದಾಯಕವೂ ಆಗಿದೆ. ಆದರೆ ನಾವೆಂದೂ ಅವುಗಳ ಬಗ್ಗೆ ಯೋಗ್ಯ ದೃಷ್ಟಿಯಿಂದ ಯೋಚಿಸಲು ಕಲಿತಿಲ್ಲ. ಎಲ್ಲಿಯಾದರೂ ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮತಾಳಿದರೆ ಸಾಕು, ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ. ಅವನಿಗೆ ದೇವತ್ವವನ್ನು ಹೊರಿಸಲು ಸ್ವಲ್ಪವೂ ತಡಮಾಡುವುದಿಲ್ಲ. ಉದಾಹರಣೆಗೆ: ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ. “ ಶಿವಚರಿತ್ತೆ ”ಶಿವಾಜಿಯ ಚರಿತ್ರೆಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ. ಒಂದುಕಡೆ ಲೋಕಮಾನ್ಯ ತಿಲಕರನ್ನು ಚತುರ್ಭುಜರನ್ನಾಗಿ ಮಾಡಿ, ಕೈಗಳಲ್ಲಿ ಶಂಖ, ಚಕ್ರ, ಗದೆ, ಪದಗಳನ್ನು ಕೊಡಲಾಗಿತ್ತು. ಮಹಾನ್ ಪುರುಷರು ಕಣ್ಣಿಗೆ ಬೀಳುವುದೇ ತಡ, ಅವರಾಗಲೇ ದೇವಸ್ಥಾನ ಸೇರಿದಂತೆಯೇ. ಅಲ್ಲಿ ಅವರ ಪೂಜೆಯೇನೋ ಭಾವಭಕ್ತಿಗಳಿಂದ ನಡೆಯುತ್ತದೆ ಆದರೆ ಅವರ ಗುಣಗಳನ್ನು ಅನುಸರಿಸುವ ಮಾತು ಮಾತ್ರ ಕೇಳುವುದಿಲ್ಲ. ಒಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ಬುದ್ಧಿಪೂರ್ವಕವಾಗಿ ದೂರ ಸರಿಸುವಂಥ ಈ ಅದ್ಭುತ ಕಲೆಯನ್ನು ನಾವು ಸೊಗಸಾಗಿ ಸಾಧಿಸಿಕೊಂಡಿದ್ದೇವೆ ಎಂದು ಲೇಖಕರು ಹೇಳಿದ್ದಾರೆ.
4. ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುವದರ ಬಗ್ಗೆ ಲೇಖಕರ ಅಭಿಪ್ರಾಯವೇನು?
ಶ್ರೀಕೃಷ್ಣನಂತಹ ಪೂರ್ಣ ಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ, ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ. ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು, ರಾಮಾಯಣ, ಮಹಾಭಾರತ, ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ. ಕೇವಲ ಮಣ್ಯಸಂಚಯಕ್ಕಾಗಿ ಎಂಥ ಸಂಕುಚಿತ ಯೋಚನೆ ಇದು. ಇದಕ್ಕೆ ಲೇಖಕರು ಒಂದು ಸಣ್ಣ ಉದಾಹರಣೆ ಹೇಳುತ್ತಾರೆ: ‘ ಒಮ್ಮೆ ನಮ್ಮ ಪರಿಚಿತ ಮಹನೀಯರೊಬ್ಬರು ನಮ್ಮಲ್ಲಿ ಬಂದರು. ಅವರು ದಿನನಿತ್ಯ ಸ್ನಾನ, ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು. ಒಂದು ದಿನ ನಾನು ಊಟದ ಸಮಯದಲ್ಲಿ “ ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ ? ” ಎಂದು ಅವರನ್ನು ಕೇಳಿದೆ. ನಾನು ಅಷ್ಟು ಕೇಳಿದ್ದೇ ತಡ ಅವರು ಕೆರಳಿ ಕೆಂಡವಾದರು. “ ನೀವು ಶ್ರೀರಾಮಚಂದ್ರನ, ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ? ನಾನು ಗುಣಗ್ರಹಣಕ್ಕಾಗಿ ಅಲ್ಲ. ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗಂಥಪಠಣ ಮಾಡುತ್ತೇನೆ ” ಎಂದರು ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ನಿಜವಾದ ಆದರ್ಶ ಪುರುಷ ಯಾರಾಗಬೇಕು ಪ್ರಶ್ನೋತ್ತರಗಳು
5. ತಿಲಕರು ಮತ್ತು ಶಿವಾಜಿಯವರನ್ನು ಜನ ಹೇಗೆ ಸ್ವೀಕರಿಸಿದ್ದಾರೆ? ಈ ಬಗ್ಗೆ ಲೇಖಕರು ಯಾವ ಅಭಿಪ್ರಾಯ ತಳೆದಿದ್ದಾರೆ?
ಎಲ್ಲಿಯಾದರೂ, ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮತಾಳಿದರೆ ಸಾಕು, ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ. ಅವನಿಗೆ ದೇವತ್ವವನ್ನು ಹೊರಿಸಲು ಕಿಂಚಿತ್ತೂ ತಡಮಾಡವು. ಈಗಂತೂ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ. ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ. “ ಶಿವಚರಿತೆ ” ಶಿವಾಜಿಯ ಚರಿತ್ರೆಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ. ಬಿಡಿ, ಲೋಕಮಾನ್ಯ ತಿಲಕರು ನಮ್ಮ ಕಾಲದಲ್ಲೇ ಆಗಿಹೋದ ನಾಯಕರು. ಆದರೆ ನಾನೊಮ್ಮೆ ಅವರದೊಂದು ಚಿತ್ರ ನೋಡಿದೆ. ಅದರಲ್ಲಿ ಅವರನ್ನು ಚತುರ್ಭುಜರನ್ನಾಗಿ ಮಾಡಿ, ಕೈಗಳಲ್ಲಿ ಶಂಖ, ಚಕ್ರ, ಗದೆ, ಪದಗಳನ್ನು ಕೊಡಲಾಗಿತ್ತು. ಈ ರೀತಿ ನಮ್ಮ ಮಹಾಪುರುಷರನ್ನು ದೇವತೆಗಳ ಶ್ರೇಣಿಗೆ ತಳ್ಳುವುದು ನಿಜಕ್ಕೂ ಅದೆಷ್ಟು ವಿಚಿತ್ರ ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ, ಅವರಾಗಲೇ ದೇವಸ್ಥಾನ ಸೇರಿದಂತೆಯೇ ಲೆಕ್ಕ. ಅಲ್ಲಿ ಅವರ ಪೂಜೆಯೇನೋ ಭಾವಭಕ್ತಿಗಳಿಂದ ನಡೆಯುತ್ತದೆ ಆದರೆ ಅವರ ಗುಣಗಳನ್ನು ಅನುಸರಿಸುವ ಸೊಲ್ಲು ಮಾತ್ರ ಕೇಳುವುದಿಲ್ಲ. ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಈ ) ಈ ಕೆಳಗಿನ ವಾಕ್ಯಗಳ ಅರ್ಥ ಸ್ವಾರಸ್ಯವನ್ನು ಆರೇಳು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ.
1. ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ?
ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ ‘ ಪ್ರೇರಣಾ ‘ ಎಂಬ ಕೃತಿಯಿಂದ ಆರಿಸಲಾದ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು? ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ : ಒಮ್ಮೆ ಲೇಖಕರಿಗೆ ಪರಿಚಿತರಾದ ಮಹನೀಯರೊಬ್ಬರು ಅವರಲ್ಲಿಗೆ ಬಂದರು. ಅವರು ದಿನನಿತ್ಯ ಸ್ನಾನ, ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು. ಒಂದು ದಿನ ಲೇಖಕರು ಊಟದ ಸಮಯದಲ್ಲಿ “ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ? ” ಎಂದು ಅವರನ್ನು ಕೇಳಿದರು. ಅವರು ಅಷ್ಟು ಕೇಳಿದ್ದೇ ತಡ ಅವರು ಕೆರಳಿ ಕೆಂಡವಾಗಿ ಸಂದರ್ಭದಲ್ಲಿ “ನೀವು ಶ್ರೀರಾಮಚಂದ್ರನ, ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ? ನಾನು ಗುಣಗ್ರಹಣಕ್ಕಾಗಿ ಅಲ್ಲ. ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುತ್ತೇನೆ ” ಎಂದು ಹೇಳಿದ ಮಾತನ್ನು ಲೇಖಕರು ಇಲ್ಲಿ ಉದಾಹರಿಸಿದ್ದಾರೆ.
ಸ್ವಾರಸ್ಯ : ರಾಮಾಯಣ ಉನ್ನತ ಮೌಲ್ಯಗಳನ್ನು ಮಹಾಭಾರತದಂತಹ ಕಾವ್ಯಗಳ ಮೂಲ ಉದ್ದೇಶ ಮಾನವನ ಜೀವನದಲ್ಲಿ ಬಿತ್ತುವುದು. ಆದರೆ ಅವುಗಳನ್ನು ಓದುವುದು ಕೇವಲ ಪುಣ್ಯಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಎಂದು ಲೇಖಕರ ಪರಿಚಿತರು ಹೇಳಿದ ಮಾತನ್ನು ವ್ಯಂಗ್ಯಭರಿತವಾಗಿ ಹೇಳಿರುವುದು ಸ್ವಾರಸ್ಯಕರವಾಗಿದೆ.
Nijavada adarsha purusha in kannada notes
2. ಮೊಗ್ಗುಗಳ ಬದಲು ಪೂರ್ಣ ಅರಳಿದ ಮುಷ್ಪಗಳು ನಮ್ಮ ಆದರ್ಶವಾಗಬೇಕು.
ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ ‘ ಪ್ರೇರಣಾ ‘ ಎಂಬ ಕೃತಿಯಿಂದ ಆರಿಸಲಾದ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು? ‘ ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.
ಸಂದರ್ಭ : ಲೇಖಕರು ನಾವು ಎಂತಹವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಸ್ವೀಕರಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಪುಷ್ಪಗಳು ನಮ್ಮ ಆದರ್ಶವಾಗಬೇಕು. ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಆ ಕ್ರಿಮಿಕೀಟಗಳಿಂದಾಗಿ ಮುಂದೆ ಅವು ಪೂರ್ಣವಾಗಿ ಅರಳಲಾರವು. ಆದ್ದರಿಂದ ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು ಎಂದು ಲೇಖಕರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸ್ವಾರಸ್ಯ : ಇನ್ನೂ ಮೊಗ್ಗಿನಂತೆ ಮುದುಡಿರುವ ವ್ಯಕ್ತಿಗಳು ಒಳಗೆ ಕ್ರಿಮಿಕೀಟಗಳನ್ನು ಹೊಂದಿರಬಹುದಾದ ಮೊಗ್ಗುಗಳಂತೆ ಎಂದು ಹೋಲಿಸಿ, ಆದರೆ ನಿಜವಾದ ಆದರ್ಶ ವ್ಯಕ್ತಿಗಳು ಅರಳಿದ ಹೂವಿನಂತೆ. ಕ್ರಿಮಿರಹಿತವಾದ ಅರಳಿದ ಹೂವನ್ನು ಸ್ವೀಕರಿಸುವಂತೆ ಯಾರ ಮನಸ್ಸು ಅರಳಿ ಪ್ರಸನ್ನವಾಗಿದೆಯೋ ಅಂತಹ ವ್ಯಕ್ತಿಯನ್ನು ಆದರ್ಶವಾಗಿ ಸ್ವೀಕರಿಸಬೇಕು ಎಂಬುದು ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ.
Watch this video for the explanation of Nijavada Adarsha Purusha Yaragabeku notes for class 10.