Amlagalu Pratyamlagalu Mattu Lavanagalu lesson for class 10. SSLC Science second chapter summary. ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು lesson for SSLC.
In this post we have explained solutions for class 10 science chapter 2 kannada medium. SSLC Science Kannada medium notes.
To get more video notes for class 10th Science visit our YouTube channel. This channel is very useful for SSLC exam preparation.
Amlagalu Pratyamlagalu Mattu Lavanagalu lesson for class 10
ಆಮ್ಲ ಮತ್ತು ಪ್ರತ್ಯಾಮ್ಲಗಳ ಗುಣಲಕ್ಷಣಗಳು:
ನಮ್ಮ ದಿನನಿತ್ಯ ಜೀವನದಲ್ಲಿ ಕಂಡು ಬರುವಂತಹ ಆಮ್ಲ ಮತ್ತು ಪ್ರತ್ಯಾಮ್ಲಗಳಿಗೆ ಕೆಲವು ಉದಾಹರಣೆಗಳು
ಆಹಾರ ಪದಾರ್ಥಗಳ ರುಚಿ ಹುಳಿ ಮತ್ತು ಕಹಿಯಾಗಿರಲು ಕಾರಣ, ಅವುಗಳಲ್ಲಿರುವ ಆಮ್ಲ ಮತ್ತು ಪ್ರತ್ಯಾಮ್ಲಗಳು. ಕೆಲವು ಸ್ವಾಭಾವಿಕವಾಗಿ ದೊರೆಯುವ ಆಮ್ಲಗಳು : ವಿನೆಗರ್ (ಅಸಿಟಿಕ್ ಆಮ್ಲ), ಸಿಟ್ರಿಕ್ ಆಮ್ಲ (ನಿಂಬೆ ಮತ್ತು ಕಿತ್ತಳೆ ಹಣ್ಣುಗಳಲ್ಲಿರುತ್ತವೆ) ಮತ್ತು ಟಾರ್ಟಾರಿಕ್ ಆಮ್ಲ (ಹುಣಸೆ ಹಣ್ಣಿನಲ್ಲಿರುತ್ತದೆ). ನಮ್ಮ ಜಠರದಲ್ಲಿಯೂ ಕೂಡ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ, ಇದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಅಡುಗೆ ಸೋಡಾ ಮತ್ತು ಟೂತ್ ಪೇಸ್ಟ್ ಇವು ಸಾಮಾನ್ಯವಾಗಿ ಉಪಯೋಗಿಸುವಂತಹ ಕೆಲವು ಪ್ರತ್ಯಾಮ್ಲಗಳು. ಟೂತ್ ಪೇಸ್ಟ್ ಇದು ಹಲ್ಲನ್ನು ಶುಚಿಗೊಳಿಸಲು ಬಳಸುವ ಒಂದು ಪ್ರತ್ಯಾಮ್ಲಿಯ ವಸ್ತುವಾಗಿದೆ ಮತ್ತು ಇದು ಬಾಯಿಯಲ್ಲಿರುವ ಹೆಚ್ಚಿನ ಆಮ್ಲೀಯತೆಯನ್ನು ತಟಸ್ಥೀಕರಣಗೊಳಿಸಿ, ಹಲ್ಲುಗಳನ್ನು ದಂತಕುಳಿಯಿಂದ ಹಾಳಾಗದಂತೆ ರಕ್ಷಿಸುತ್ತದೆ.
ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಬಗ್ಗೆ ವಿವಿಧ ಬಗೆಯ ಪರಿಕಲ್ಪನೆಗಳು ಯಾವುವು?
ಅರಿನಿಯಸ್ ನ ಆಮ್ಲ ಮತ್ತು ಪ್ರತ್ಯಾಮ್ಲಗಳ ಪರಿಕಲ್ಪನೆಯ ಪ್ರಕಾರ, ನೀರಿನಲ್ಲಿ ಕರಗಿಸಿದಾಗ H+ ಅಯಾನುಗಳನ್ನು ಬಿಟ್ಟುಕೊಡುವ ವಸ್ತುಗಳನ್ನು ಆಮ್ಲಗಳು ಎನ್ನುತ್ತಾರೆ. ಉದಾಹರಣೆಗೆ,
HCl ಒಂದು ಆಮ್ಲ ಮತ್ತು ಇದು ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ.
ಸತುವಿನೊಂದಿಗೆ ವರ್ತಿಸಿ ಸತುವಿನ ಕ್ಲೋರೈಡ್ ಮತ್ತು ಹೈಡ್ರೋಜನ್ ಬಿಡುಗಡೆಗೊಳಿಸುತ್ತದೆ.
HCl ಪ್ರಬಲ ಕ್ಷಾರವಾದ ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿ ಸೋಡಿಯಂ ಕ್ಲೋರೈಡ್ ಅನ್ನು ಉಂಟು ಮಾಡುತ್ತದೆ.
HCl ಸೋಡಿಯಂ ಕಾರ್ಬನೇಟ್ ನೊಂದಿಗೆ ವರ್ತಿಸಿ ಇಂಗಾಲದ ಡೈ ಆಕ್ಸೈಡ್( CO2 )ಅನ್ನು ಬಿಡುಬಡೆಗಪಳಿಸುತ್ತದೆ.
ಉದ್ದೇಶ:
(i) ಲಿಟ್ಮಸ್ ದ್ರಾವಣ (ನೀಲಿ/ಕೆಂಪು), (ii) ಸತು ಲೋಹ,(Zinc), (iii) ಘನ ಸೋಡಿಯಂ ಕಾರ್ಬನೇಟ್ ಗಳ ಜೊತೆ ಪ್ರತ್ಯಾಮ್ಲದ(NaOH) ವರ್ತನೆ.
ಪ್ರತ್ಯಾಮ್ಲಗಳು ಎಂದರೇನು ?
ಸೋಡಿಯಂ ಹೈಡ್ರಾಕ್ಸೈಡ್ ಇದು ಒಂದು ಪ್ರಬಲ ಕ್ಷಾರ. ಇದರ pH 7 ಕ್ಕಿಂತ ತುಂಬಾ ಹೆಚ್ಚಿನದ್ದಾಗಿರುತ್ತದೆ ಆದ್ದರಿಂದ ಇದು ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತದೆ.
NaOH ಸತುವಿನೊಂದಿಗೆ ವರ್ತಿಸಿ ಸೋಡಿಯಂ ಝಿಂಕೇಟ್ ಮತ್ತು ಹೈಡ್ರೋಜನ್ ಅನ್ನು ಕೊಡುತ್ತದೆ.
ಫಿನಾಫ್ತಲೀನ್ ಇದು ಒಂದು ಸೂಚಕ. ಪ್ರತ್ಯಾಮ್ಲೀಯದ ದ್ರಾವಣದಲ್ಲಿ ಇದು ಗುಲಾಬಿ ಬಣ್ಣವನ್ನು ಕೊಡುತ್ತದೆ ಮತ್ತು ಆಮ್ಲೀಯ ದ್ರಾವಣದಲ್ಲಿ ಇದು ಬಣ್ಣರಹಿತವಾಗುತ್ತದೆ. ಆದ್ದರಿಂದ NaOH, ಫಿನಾಫ್ತಲೀನ್ ನ ಜೊತೆಗೆ ಗುಲಾಬಿ ಬಣ್ಣವನ್ನು ಕೊಡುತ್ತದೆ.
ಒಂದು ಆಮ್ಲದ ಪ್ರಬಲತೆಯು, ಅದು ಬಿಟ್ಟುಕೊಡುವ ಪ್ರೋಟಾನ್ ನ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಒಂದು ಪ್ರತ್ಯಾಮ್ಲದ ಪ್ರಬಲತೆಯು, ಅದು ಬಿಟ್ಟುಕೊಡುವ ಹೈಡ್ರಾಕ್ಸೈಡ್ ಅಯಾನಿನ ಮೇಲೆ ಅವಲಂಬಿತವಾಗಿರುತ್ತದೆ. ಪ್ರಬಲ ಆಮ್ಲವು ಪ್ರೋಟಾನ್ ಕಳೆದುಕೊಂಡು, ಪೂರ್ತಿಯಾಗಿ ಜಲೀಯ ದ್ರಾವಣದಲ್ಲಿ ವಿಭಜನೆ ಹೊಂದುತ್ತದೆ ಆದರೆ ದುರ್ಬಲ ಆಮ್ಲವು ಪೂರ್ತಿಯಾಗಿ ವಿಭಜನೆ ಹೊಂದುವುದಿಲ್ಲ. ಹಾಗೆಯೇ ಪ್ರಬಲ ಪ್ರತ್ಯಾಮ್ಲವು ಜಲೀಯ ದ್ರಾವಣದಲ್ಲಿ ಪೂರ್ತಿಯಾಗಿ ವಿಭಜನೆ ಹೊಂದಿ ಅಯಾನುಗಳಾಗುತ್ತವೆ ಆದರೆ, ದುರ್ಬಲ ಪ್ರತ್ಯಾಮ್ಲಗಳು ಜಲೀಯ ದ್ರಾವಣದಲ್ಲಿ ಪೂರ್ತಿಯಾಗಿ ವಿಭಜನೆ ಹೊಂದುವುದಿಲ್ಲ.
ಆಮ್ಲ ಮತ್ತು ಪ್ರತ್ಆಮ್ಲಗಳೊಂದಿಗೆ ಲಿಟ್ಮಸ್ ದ್ರಾವಣದ ವರ್ತನೆ :
Amlagalu Pratyamlagalu Mattu Lavanagalu lesson for SSLC
ಲಿಟ್ಮಸ್ ದ್ರಾವಣ ಎಂಬ ಮತ್ತೊಂದು ಸೂಚಕವನ್ನು, ವಸ್ತುಗಳ ಆಮ್ಲೀಯ ಮತ್ತ ಪ್ರತ್ಯಾಮ್ಲೀಯ (ಸ್ವಭಾವವನ್ನು)ಗುಣಗಳನ್ನು ಗುರುತಿಸಲು ಉಪಯೋಗಿಸುತ್ತಾರೆ. ಲೈಕನ್ (ಕಲ್ಲು ಹೂವು) ಸಸ್ಯಗಳಿಂದ ಪಡೆಯಲಾಗುವ ಬೇರೆ ಬೇರೆ ಬಣ್ಣಗಳಿಂದ ಈ ದ್ರಾವಣವನ್ನು ತಯಾರಿಸಲಾಗುತ್ತದೆ.
ನೀಲಿ ಲಿಟ್ಮಸ್ ನ ಬಣ್ಣವನ್ನು ಕೆಂಪು ಬಣ್ಣಕ್ಕೆ ತಿರುಗಿಸುವ ಗುಣವನ್ನು ಹೊಂದಿವೆ. ಪ್ರತ್ಯಾಮ್ಲಗಳು ಕೆಂಪು ಬಣ್ಣದ ಲಿಟ್ಮಸ್ ನ ಬಣ್ಣವನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತದೆ.
ಸೊರೆನ್ ಸನ್ ಎಂದರೆ ಯಾರು ಗೊತ್ತೆ?
ಸೊರೆನ್ ಪಿಡರ್ ಲಾರಿಟ್ಜ್ ಸೊರೆನ್ ಸನ್ ಇವರು ಒಬ್ಬ ಡೇನಿಶ್ ರಸಾಯನಶಾಸ್ತ್ರಜ್ಞರಾಗಿದ್ದರು. ಇವರು pH ಎಂಬ ಒಂದು ಆಮ್ಲೀಯತೆ ಮತ್ತು ಪ್ರತ್ಯಾಮ್ಲೀಯತೆಯನ್ನು ಅಳೆಯುವ ಸ್ಕೇಲ್ ನ ಪರಿಕಲ್ಪನೆಯನ್ನು ಪರಿಚಯಿಸಿದ್ದಕ್ಕೆ ಪ್ರಸಿದ್ಧರಾಗಿದ್ದರು. ಕಾರ್ಲ್ಸ್ ಬರ್ಗ್ ಎಂಬ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ, ಇವರು ಪ್ರೋಟಿನ್ ಗಳ ಮೇಲೆ ಅಯಾನುಗಳ ಸಾರತೆ ಹೇಗೆ ಪರಿಣಾಮ ಬಿರುತ್ತದೆ ಎಂಬುವುದನ್ನು ಅಧ್ಯಯನ ಮಾಡಿದರು ಮತ್ತು ಹೈಡ್ರೋಜನ್ ಅಯಾನುಗಳ ಸಾರತೆಯ ಪ್ರಾಮುಖ್ಯತೆಯನ್ನು ಅರ್ಥೈಸಿಕೊಂಡರು. ಹೈಡ್ರೋನಿಯಮ್ ಅಯಾನುಗಳ (H3O+) ಸಾರತೆಯನ್ನು ವ್ಯಕ್ತಪಡಿಸಲು ಅವರು pH ಸ್ಕೇಲ್ ಎನ್ನುವ ಒಂದು ಲೊಗಾರಿದಮಿಕ್ ಸ್ಕೇಲ್ ರೂಪಿಸಿದರು.
pH ನ್ನು ವ್ಯಾಖ್ಯಾನಿಸಿರಿ:
ಸೊನ್ನೆಯಿಂದ 14ರ ವರೆಗಿನ pHನ ಬೆಲೆಗಳನ್ನು ನಾವು pH ಸ್ಕೇಲ್ ನಲ್ಲಿ ಅಳತೆ ಮಾಡಬಹುದು. ಆಮ್ಲೀಯ ದ್ರಾವಣಕ್ಕೆ pHನ ಬೆಲೆ ಯಾವಾಗಲೂ 7ಕ್ಕಿಂತ ಕಡಿಮೆ ಇರುತ್ತದೆ ಮತ್ತು ಪ್ರತ್ಯಾಮ್ಲೀಯ ದ್ರಾವಣಕ್ಕೆ pHನ ಬೆಲೆ ಯಾವಾಗಲೂ 7ಕ್ಕಿಂತ ಹೆಚ್ಚಿರುತ್ತದೆ. ತಟಸ್ಥ ದ್ರಾವಣದ pH ಬೆಲೆ ಯಾವಾಗಲೂ 7 ಆಗಿರುತ್ತದೆ. H+ ಅಯಾನುಗಳ ಸಾರತೆ ಹೆಚ್ಚಾದಂತೆ, pHನ ಬೆಲೆ ಕಡಿಮೆಯಾಗುತ್ತದೆ. pHನ ಬೆಲೆ 7ರಿಂದ 14ರವರೆಗೆ ಹೆಚ್ಚಾಗುವುದು, OH- ಅಯಾನುಗಳ ಸಾರತೆ ಹೆಚ್ಚಾಗುವುದನ್ನು ಸೂಚಿಸುತ್ತದೆ. pH ಸ್ಕೇಲ್ ಈ ಕೆಳಗಿನಂತೆ ತೋರಿಸಲಾಗಿದೆ.
Watch this video for the explanation of Amlagalu Pratyamlagalu Mattu Lavanagalu lesson for class 10.
Part 1 video
Part 2 video